ಬಾಗಲಕೋಟೆ: ಗುಜರಾತನ ಅಹಮದಾಬಾದ್‌ನಿಂದ ಬಂದಿದ್ದ 17 ಜನರಲ್ಲಿ 14 ಜನರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಮುಧೋಳ ನಗರಕ್ಕೆ ಗುಜರಾತ ತಬ್ಲೀಘಿ ನಂಟು, ತೀವ್ರ ಭೀತಿ ಹುಟ್ಟಿಸಿದೆ.
ಮುಧೋಳ ತಾಲೂಕಿನಲ್ಲಿ ಈವರೆಗೆ 10 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಮಂಗಳವಾರ ಒಂದೇ ದಿನ 15 ಜನರಿಗೆ ಈ ಸೋಂಕು ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲೇ ಅತಿಹೆಚ್ಚು ಸೋಂಕಿತರು ಪತ್ತೆಯಾದ ತಾಲೂಕಿನಲ್ಲಿ ಮುಧೋಳ ಮೊದಲ ಸ್ಥಾನಕ್ಕೇರಿದೆ.
ಮೇ 8ರಂದು ನಿಪ್ಪಾಣಿ ಚೆಕ್‌ಪೋಸ್ಟ ಮೂಲಕ ಒಟ್ಟು 17 ಜನರು ಮುಧೋಳಕ್ಕೆ ಬಂದಿದ್ದು, ಅವರನ್ನು ಮುಧೋಳದ ಉರ್ದು ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಅವರೆಲ್ಲರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಿದ್ದು, 14 ಜನರಿಗೆ ಸೋಂಕು ದೃಢಪಟ್ಟಿದೆ. ಉಳಿದ ಮೂವರಿಗೆ ನೆಗೆಟಿವ್ ಬಂದಿದೆ.
ಮುಧೋಳ ನಗರದ 55 ವರ್ಷದ ವ್ಯಕ್ತಿಗೆ ಕೆಮ್ಮು, ನೆಗಡಿ, ಜ್ವರ ಹಾಗೂ ಉಸಿರಾಟ ತೊಂದರೆಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಸೋಂಕು ಖಚಿತಪಟ್ಟಿದೆ. ಇವರಿಗೆ ಯಾವುದೇ ಪ್ರಯಾಣದ ಇತಿಹಾಸವಿಲ್ಲ.
ಗುಜರಾತ್‌ನ ತಬ್ಲೀಘಿ ಗೆ ಹೋಗಿ ಬಂದವರಲ್ಲಿ ಬನಹಟ್ಟಿಯ ಓರ್ವ ಹಾಗೂ ಮುಧೋಳದ 14 ಜನರಿಗೆ ಸೋಂಕು ದೃಢಪಟ್ಟಿದೆ. ಮಂಗಳವಾರ ಪತ್ತೆಯಾದ 15 ಪ್ರಕರಣಗಳೂ ಸಹಿತ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 68ಕ್ಕೆ ಏರಿಕೆಯಾಗಿದೆ