Advertisement

“ಜಲ ಯುದ್ಧ’ಕ್ಕೆ 15 ಕೋತಿಗಳು ಬಲಿ!

12:04 AM Jun 09, 2019 | Sriram |

ಭೋಪಾಲ್‌: ಏರುತ್ತಿರುವ ತಾಪ ಮಾನವು ಜೀವವೈವಿಧ್ಯದ ಮೇಲೆ ಎಂತಹ ಗಂಭೀರ ಪರಿಣಾಮ ಬೀರ ಬಹುದು ಎಂಬುದಕ್ಕೆ ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ನಡೆದಿರುವ ಈ ಘಟನೆಯು ಸ್ಪಷ್ಟ ನಿದರ್ಶನವಾಗಿದೆ.

Advertisement

ಇಲ್ಲಿನ ಅರಣ್ಯವೊಂದರಲ್ಲಿ ಕೋತಿಗಳ ಎರಡು ಗುಂಪಿನ ನಡುವೆ ನಡೆದಿರುವ “ಜಲ ಸಮರ’ವು 15 ಮಂಗಗಳನ್ನು ಬಲಿತೆಗೆದು ಕೊಂಡಿದೆ. ಪಂಜಾಪುರ ಅರಣ್ಯ ವ್ಯಾಪ್ತಿಯ ಜೋಷಿ ಬಾಬಾ ಪ್ರದೇಶದಲ್ಲಿ 9 ಕೋತಿಗಳು ಗುರುವಾರ, 6 ಶುಕ್ರವಾರ ಪತ್ತೆಯಾಗಿದೆ.

60 ಕೋತಿಗಳ ಒಂದು ಬಲಿಷ್ಠ ಗುಂಪು ಇಲ್ಲಿಗೆ ಸಮೀಪದ ಕಾಳಿ ಸಿಂಧ್‌ ನದಿಯ ಉಪನದಿ ಪೌನಿಯನ್ನು ಕಾಯುತ್ತಿರುತ್ತವೆ. ಬಿಸಿಲಿನ ಬೇಗೆಯಿಂದಾಗಿ ಈ ಉಪನದಿಯ ಬಹುತೇಕ ನೀರು ಬತ್ತಿ ಹೋಗಿದ್ದು, ಈ ಪ್ರದೇಶದಲ್ಲಿ ಮಾತ್ರ ಸ್ವಲ್ಪಮಟ್ಟಿಗೆ ನೀರಿದೆ. ಹೀಗಾಗಿ, ಇಲ್ಲಿ ನೀರು ಕುಡಿಯಲು ಬಂದಿದ್ದ ಕೋತಿಗಳೊಂದಿಗೆ, ಇಲ್ಲೇ ಕಾವಲಿರುವ ಇತರೆ ಕೋತಿಗಳು ಕಾದಾಡಿದ್ದು, ಈ “ಜಲ ಯುದ್ಧ’ ದಲ್ಲಿ ದಾಹ ತೀರಿಸಲು ಬಂದಿದ್ದ 15 ಕೋತಿಗಳು ಮೃತಪಟ್ಟಿರುವುದು ಸ್ಪಷ್ಟವಾಗಿದೆ ಎಂದು ಅರಣ್ಯಾಧಿಕಾರಿ ಪಿ.ಎನ್‌.ಮಿಶ್ರಾ ತಿಳಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಈ ಪ್ರದೇಶದಲ್ಲಿ ತಾಪಮಾನ 45 ಡಿ.ಸೆ.ಗಿಂತಲೂ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next