ನವದೆಹಲಿ: ಕಳೆದ ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಂತೆ ದೇಶದ ಎಲ್ಲ ನಾಗರಿಕರ ಬ್ಯಾಂಕ್ ಅಕೌಂಟ್‌ಗಳಿಗೆ 15 ಲಕ್ಷ ರೂ. ನಿಧಾನವಾಗಿ ಬರುತ್ತೆ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.
“ಎಲ್ಲರ ಅಕೌಂಟ್‌ಗಳಿಗೆ ಹಾಕುವಷ್ಟು ಹಣ ಸದ್ಯ ಕೇಂದ್ರ ಸರ್ಕಾರದ ಬಳಿ ಇಲ್ಲ. ಇದಕ್ಕಾಗಿ ಆರ್‌ಬಿಐ ಅನ್ನೂ ಕೇಳಲಾಗಿತ್ತು.
ಆದರೆ ಅವರು ಕೊಟ್ಟಿಲ್ಲ. ಸ್ವಲ್ಪ ತಾಂತ್ರಿಕವಾಗಿ ಸಮಸ್ಯೆಯಾಗಿದೆ. ಮುಂದೆ ಈ 15 ಲಕ್ಷ ರೂ. ಒಮ್ಮೆಗೆ ಬಾರದೇ ನಿಧಾನವಾಗಿ ಅಕೌಂಟ್‌ಗೆ ಬಂದು ಬೀಳುತ್ತೆ” ಎಂದು ಅಠಾವಳೆ ಹೇಳಿದ್ದಾರೆ. ಸೋಮವಾರವಷ್ಟೇ ಮಾಧ್ಯಮಗಳ ಜತೆ ಮಾತನಾಡಿದ್ದ ಅವರು, ಬ್ಯಾಂಕ್ ಅಕೌಂಟ್‌ಗಳಿಗೆ ಹಣ ಬರುವ ಬಗ್ಗೆ ಹೇಳಿದ್ದರು. ಅಠಾವಳೆ ಅವರು ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ಪ್ರಸಿದ್ಧರು. ಹೀಗಾಗಿ ಇಂಥ ಹೇಳಿಕೆ ನೀಡಿರಬಹುದು ಎಂಬ ರೀತಿಯಲ್ಲಿ ವಿಶ್ಲೇಷಣೆಯಾಗುತ್ತಿದೆ. ಆದರೆ ಇನ್ನೊಂದು ಮೂಲಗಳ ಪ್ರಕಾರ, ಕೇಂದ್ರ ಸರ್ಕಾರ 2019ರ ಲೋಕಸಭೆ ಚುನಾ ವಣೆಗೂ ಮುನ್ನ ದೊಡ್ಡದೊಂದು ಜನಪ್ರಿಯ ಯೋಜನೆ ಘೋಷಿಸುವ ಕುರಿತಂತೆ ಅಠಾ ವಳೆ ಸುಳಿವು ನೀಡಿದ್ದಾರೆ ಎನ್ನಲಾಗು ತ್ತಿದೆ. ಅದರಲ್ಲೂ ಸಾರ್ವತ್ರಿಕ ಮೂಲ ಆದಾಯ ತರುವ ಬಗ್ಗೆ ಚಿಂತನೆ ನಡೆಸುತ್ತಿದ್ದು, ಈ ಮೂಲಕವೇ ಕೇಂದ್ರ ಸರ್ಕಾರ ಅಕೌಂಟ್‌ಗಳಿಗೆ ತಿಂಗಳಿಗಿಷ್ಟು ಎಂದು ಹಣ ಹಾಕ ಬಹುದೇ ಎಂಬ ಚರ್ಚೆಗಳು ಶುರುವಾಗಿವೆ.