Advertisement

BJP ವಿರೋಧಿಸಿದ್ದರಿಂದ ರಾಜ್ಯದ 15 ಲ. ರೂ. ಪರಿಹಾರ ತಿರಸ್ಕರಿಸಿದ ಕೇರಳ: ಸಚಿವ ಈಶ್ವರ ಖಂಡ್ರೆ

11:14 PM Mar 10, 2024 | Team Udayavani |

ಚಾಮರಾಜನಗರ: ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ಕೇರಳದ ಅಜೀಶ್‌ ಕುಟುಂಬಕ್ಕೆ ಕರ್ನಾಟಕ ಸರಕಾರ ಘೋಷಿಸಿದ್ದ 15 ಲಕ್ಷ ರೂ. ಪರಿಹಾರ ಪಡೆಯಲು ಅವರ ಕುಟುಂಬ ನಿರಾಕರಿಸಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

Advertisement

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇರಳದ ವಯನಾಡು ಜಿಲ್ಲೆಯ ಅಜೀಶ್‌ ಕುಟುಂಬಕ್ಕೆ ರಾಜ್ಯ ಸರಕಾರ ಘೋಷಿಸಿದ್ದ 15 ಲಕ್ಷ ರೂ. ಪರಿಹಾರವನ್ನು ಮೃತರ ಕುಟುಂಬ ತಿರಸ್ಕರಿಸಿದೆ. ಮಾನವೀಯತೆ ಆಧಾರದಲ್ಲಿ ನಾವು ಪರಿಹಾರ ನೀಡಲು ನಿರ್ಧರಿಸಿ¨ªೆವು. ಆದರೆ ಬಿಜೆಪಿ ಅದನ್ನು ರಾಜಕೀಯಕರಣಗೊಳಿಸಿದೆ. ಬಿಜೆಪಿ ವಿರೋಧಿಸಿದ ಕಾರಣಕ್ಕೆ ಅಜೀಶ್‌ ಕುಟುಂಬವು ಪರಿಹಾರ ಬೇಡ ಎಂದಿದೆ. ಹಾಗಾಗಿ ನಮ್ಮ ಸರಕಾರ ಪರಿಹಾರ ನೀಡಿಲ್ಲ ಎಂದು ಖಂಡ್ರೆ ತಿಳಿಸಿದರು.

ಹಾಸನ ಜಿಲ್ಲೆಯಲ್ಲಿ ಸೆರೆ ಹಿಡಿದ ದಂತ ರಹಿತ ಗಂಡಾನೆಯನ್ನು ರೇಡಿಯೋ ಕಾಲರ್‌ ಅಳವಡಿಸಿ ಬಂಡೀಪುರ ಅರಣ್ಯಕ್ಕೆ ಬಿಡಲಾಗಿತ್ತು. ಈ ಆನೆ ವಯನಾಡು ಜಿಲ್ಲೆಯ ಪಯ್ಯಂಪಲ್ಲಿ ಗ್ರಾಮದ ಅಜೀಶ್‌ ಜೋಸೆಫ್ ಅವರನ್ನು ಫೆ. 10ರಂದು ಕೊಂದಿತ್ತು. ರಾಹುಲ್‌ ಗಾಂಧಿ ಕುಟುಂಬಕ್ಕೆ ಸಾಂತ್ವನ ಹೇಳಿ, ಪರಿಹಾರ ನೀಡಲು ಕರ್ನಾಟಕ ಸರಕಾರಕ್ಕೆ ಸೂಚಿಸಿದ್ದರು. ಅದರಂತೆ ರಾಜ್ಯ ಸರಕಾರ 15 ಲಕ್ಷ ರೂ. ಪರಿಹಾರವನ್ನು ಅಜೀಶ್‌ ಕುಟುಂಬಕ್ಕೆ ಘೋಷಿಸಿತ್ತು. ಇದನ್ನು ಬಿಜೆಪಿ ವಿರೋಧಿಸಿತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next