Advertisement

ಅಪಘಾತದಿಂದ ಸತ್ತರೆ 15 ಲಕ್ಷ ವಿಮೆ ಸೌಲಭ್ಯ

09:59 AM Oct 04, 2018 | |

ಹೊಸದಿಲ್ಲಿ: ಇನ್ನು ಮುಂದೆ ಅಪಘಾತ ಸಂಭವಿಸಿದ ಪಕ್ಷ ವಾಹನ ಮಾಲಕರು ಅಥವಾ ಹಿಂಬದಿ ಪ್ರಯಾಣಿಕರಲ್ಲಿ ಯಾರೇ ಸಾವನ್ನಪ್ಪಿದರೂ ಅವ ರಿಗೆ 15 ಲಕ್ಷ ರೂ.ಗಳ ಪರಿಹಾರ ಮೊತ್ತ ಸಿಗಲಿದೆ.

Advertisement

ಈ ಸಂಬಂಧ ವಿಮಾ ನಿಯಂ ತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕೆಲವೊಂದು ಬದಲಾವಣೆಗಳನ್ನು ಮಾಡಿದ್ದು, ವಿಮಾ ಕಂತಿನ ಮೊತ್ತ ವನ್ನು ಹೆಚ್ಚಳ ಮಾಡಿಕೊಳ್ಳಲು ವಿಮಾ ಕಂಪೆನಿ ಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ವಿಮಾ ಪ್ರೀಮಿಯಂನಲ್ಲಿ ಕನಿಷ್ಠ 750 ರೂ. ಹೆಚ್ಚಳ ವಾಗಬಹುದು ಎಂದು ಹೇಳಲಾಗಿದೆ.

2011ರ ಪ್ರಕರಣವೊಂದರ ಹಿನ್ನೆಲೆಯಲ್ಲಿ ಈ ಬದಲಾವಣೆ ಆಗಿದೆ. ವಾಹನ ಮಾಲಕ ಹಿಂಬದಿಯಲ್ಲಿ ಕುಳಿತಿದ್ದು, ಬೇರೊಬ್ಬರು ಬೈಕ್‌ ಓಡಿಸುತ್ತಿದ್ದರು. ಸೈಕಲ್‌ ಸವಾರನೊಬ್ಬ ಅಡ್ಡ ಬಂದ ಕಾರಣ ತಪ್ಪಿಸಲು ಹೋಗಿ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಹಿಂಬದಿ ಸವಾರ ಸಾವನ್ನಪ್ಪಿದ್ದ. ಮೋಟಾರ್‌ ಅಪಘಾತ ನ್ಯಾಯ ಮಂಡಳಿ ಈ ಪ್ರಕರಣದಲ್ಲಿ ಸಾವನ್ನಪ್ಪಿದ್ದ ವ್ಯಕ್ತಿಗೆ 53 ಲಕ್ಷ ರೂ.ಗಳ ಪರಿಹಾರ ನೀಡು ವಂತೆ ಆದೇಶಿಸಿತ್ತು. ಆದರೆ ಈ ಆದೇಶ ಪ್ರಶ್ನಿಸಿದ ವಿಮಾ ಕಂಪೆನಿ ಮೇಲ್ಮನವಿ ಸಲ್ಲಿಸಿದ್ದೂ ಅಲ್ಲದೇ ಹೆಚ್ಚಿನ ಪರಿಹಾರ ಹಣ ಕೇವಲ ಥರ್ಡ್‌ ಪಾರ್ಟಿಗಷ್ಟೇ ಅನ್ವಯವಾಗಲಿದ್ದು, ಮಾಲಕರಿಗೆ ಅನ್ವಯಿಸುವು ದಿಲ್ಲ. ಅವರಿಗೆ ಕೇವಲ 1 ಲಕ್ಷ ರೂ. ಮಾತ್ರ ಪರಿಹಾರ ಸಿಗಲಿದೆ ಎಂದು ಹೇಳಿತ್ತು.

ಈಗ ಈ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ. ಇನ್ನು ಮುಂದೆ ವಾಹನ ಓಡಿಸುವವರು ಅಥವಾ ಜತೆಯಲ್ಲಿ ಕುಳಿತವರಿಗೆ ಅದು ಯಾವುದೇ ವಾಹನವಾಗಿದ್ದರೂ ಕನಿಷ್ಠ ವಿಮಾ ಪರಿಹಾರವಾಗಿ 15 ಲಕ್ಷ ರೂ. ನೀಡಬೇಕೆಂದು ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next