Advertisement
ಬೆಂಗಳೂರು ಉತ್ತರ ವಿಭಾಗದ ತಹಶೀಲ್ದಾರ್ ಕಚೇರಿಯಲ್ಲಿ ಆಹಾರ ನಿರೀಕ್ಷಕ ಆಗಿರುವ ಮಹಾಂತೇಗೌಡ ಬಿ. ಕಡಬಾಳು ಬಂಧಿತ ಅಧಿಕಾರಿ. ಆರೋಪಿ ವಿರುದ್ಧ ರಂಗಧಾಮಯ್ಯ ಎಂಬವರು ದೂರು ನೀಡಿದ್ದರು.
ಶುಕ್ರವಾರ ರಾತ್ರಿ ನಗರದ ಸ್ಥಳ ವೊಂದರಲ್ಲಿ ರಂಗಧಾಮಯ್ಯ ಅವ ರಿಂದ ಆರೋಪಿ ಮಹಾಂತೇಗೌಡ 43 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ. ಕಾದು ಕುಳಿತಿದ್ದ ಲೋಕಾಯುಕ್ತ ಅಧಿ ಕಾರಿಗಳು ಏಕಾಏಕಿ ದಾಳಿ ನಡೆಸಿದರು. ಇದು ಅರಿವಿಗೆ ಬರುತ್ತಲೇ ಆರೋಪಿ ಮಹಾಂತೇಗೌಡ ಲೋಕಾಯುಕ್ತ ಅಧಿಕಾರಿಗಳನ್ನು ತಳ್ಳಿ ತನ್ನ ಕಾರಿನಲ್ಲಿ ಪರಾರಿಯಾದ. ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಸುಮಾರು 15 ಕಿ.ಮೀ. ದೂರ ಬೆನ್ನಟ್ಟಿದರು. ಕೊನೆಗೆ ನೆಲಮಂಗಲದ ಸೊಂಡೇಕೊಪ್ಪ ರಸ್ತೆಯಲ್ಲಿ ಕಾರನ್ನು ಅಡ್ಡಗಟ್ಟಿದರು.
Related Articles
ಆಗ ಆರೋಪಿ ಮಹಾಂತೇಗೌಡ ಲೋಕಾಯುಕ್ತ ಪೊಲೀಸರು ಮತ್ತು ಸಾಕ್ಷಿಗಳಾಗಿ ಬಂದಿದ್ದ ಪಂಚರ ಮೇಲೆ ಕಾರು ಹತ್ತಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ. ಅಷ್ಟರಲ್ಲಿ ಪೊಲೀಸರು ಆತನ ಕಾರಿನ ಸುತ್ತ ಇಲಾಖೆಯ ಕಾರುಗಳನ್ನು ಅಡ್ಡಗಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
43 ಸಾವಿರ ರೂ. ಲಂಚ ಸಮೇತ ಮಹಾಂತೇಗೌಡನನ್ನು ಬಂಧಿಸಲಾಗಿದೆ. ಲಂಚ ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ದೂರು ದಾಖಲಿಸಲಾಗಿದೆ. ಜತೆಗೆ ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಮತ್ತು ವಾಹನ ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಆರೋಪದಡಿ ನೆಲಮಂಗಲ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದರು.