ಲಾಹೋರ್: ಪಂಜಾಬ್ ವಿಶ್ವವಿದ್ಯಾಲಯ ಆವರಣದಲ್ಲಿ ಹೋಳಿ ಆಚರಿಸದಂತೆ ತೀವ್ರಗಾಮಿ ಇಸ್ಲಾಮಿಕ್ ವಿದ್ಯಾರ್ಥಿ ಸಂಘಟನೆಯ ಸದಸ್ಯರು ತಡೆಯೊಡ್ಡಿ, ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ವಿದ್ಯಾರ್ಥಿ ಸಮುದಾಯದ ಮೇಲೆ ಹಲ್ಲೆ ನಡೆಸಿದ ಪರಿಣಾಮ 15 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ ನಂತೆಯೇ ಹರಡುತ್ತದೆ ‘ಎಚ್3ಎನ್2 ವೈರಸ್’; ಮಾಸ್ಕ್- ಅಂತರ ಮತ್ತೆ ಜಾರಿ ಸಾಧ್ಯತೆ!
ಪಂಜಾಬ್ ವಿಶ್ವವಿದ್ಯಾಲಯದ ಕಾನೂನು ಕಾಲೇಜು ಆವರಣದಲ್ಲಿ ಸೋಮವಾರ ಸುಮಾರು 30 ಹಿಂದೂ ವಿದ್ಯಾರ್ಥಿಗಳು ಒಗ್ಗೂಡಿ ಹೋಳಿ ಆಚರಿಸುತ್ತಿದ್ದರು. ಈ ಸಂದರ್ಭದಲ್ಲಿ ಇಸ್ಲಾಮಿ ಜಾಮಿಯತ್ ತುಲ್ಬಾ(ಐಜೆಟಿ) ಕಾರ್ಯಕರ್ತರು ಬಲವಂತವಾಗಿ ಹೋಳಿ ಆಚರಣೆಗೆ ತಡೆಯೊಡ್ಡಿದ್ದರು. ಇದರಿಂದ ನಡೆದ ಘರ್ಷಣೆಯಲ್ಲಿ 15 ಹಿಂದೂ ವಿದ್ಯಾರ್ಥಿಗಳು ಗಾಯಗೊಂಡಿರುವುದಾಗಿ ಪ್ರತ್ಯಕ್ಷದರ್ಶಿಗಳು ಪಿಟಿಐಗೆ ತಿಳಿಸಿದ್ದಾರೆ.
ಹೋಳಿ ಆಚರಿಸಲು ಯೂನಿರ್ವಸಿಟಿಯಿಂದ ಮುಂಚಿತವಾಗಿ ಅನುಮತಿ ಪಡೆಯಲಾಗಿತ್ತು ಎಂದು ವಿವಿ ವಿದ್ಯಾರ್ಥಿ ಕಾಶೀಫ್ ಬ್ರೋಹಿ ತಿಳಿಸಿರುವುದಾಗಿ ವರದಿಯಾಗಿದೆ.
Related Articles
ಹೋಳಿ ಆಚರಿಸುತ್ತಿದ್ದಾಗ ನಮ್ಮನ್ನು ತಡೆದು, ಹಲ್ಲೆ ನಡೆಸಿದ ಐಜೆಟಿ ಕಾರ್ಯಕರ್ತರು ಮತ್ತು ಭದ್ರತಾ ಸಿಬಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದೇವೆ. ಆದರೆ ಈವರೆಗೂ ಎಫ್ ಐಆರ್ ದಾಖಲಿಸಿಲ್ಲ ಎಂದು ಮತ್ತೊಬ್ಬ ವಿದ್ಯಾರ್ಥಿ ಖೇತ್ ಕುಮಾರ್ ಆರೋಪಿಸಿದ್ದಾರೆ.