Advertisement

ಸಹಕಾರ ಸಂಘಕ್ಕೆ 15 ಕೋಟಿ ವಹಿವಾಟು ಏರಿಕೆ ಗುರಿ

11:35 AM Dec 02, 2020 | Suhan S |

ಹೊಸಕೋಟೆ: ಮಹಿಳಾ ಸಂಕಲ್ಪ ಸೌಹಾರ್ದ ಪತ್ತಿನ ‌ ಸಹಕಾರ ಸಂಸ್ಥೆಯು ಮುಂದಿನ ಹಣಕಾಸು ವರ್ಷದಲ್ಲಿ ವಹಿವಾಟನ್ನು 15 ಕೋಟಿ ರೂ.ಗಳಿಗೆ ಏರಿಸುವ ಗುರಿ ಹೊಂದಿದ್ದು, ಸದಸ್ಯರು ಸಹಕರಿಸಬೇಕು ಎಂದು ಸಂಸ್ಥೆಯ ಅಧ್ಯಕ್ಷೆ ಪಿ.ಮೈತ್ರಿದೇವಿ ಮನವಿ ಮಾಡಿದರು.

Advertisement

ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಪ್ರೋತ್ಸಾಹದಾಯಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. 2018ರಲ್ಲಿ ಸ್ಥಾಪನೆಗೊಂಡ ಸಂಸ್ಥೆಯಲ್ಲಿ ಪ್ರಸ್ತುತ 1600 ಸದಸ್ಯರಿದ್ದು, 39 ಲಕ್ಷ ರೂ.ಷೇರು ಬಂಡವಾಳ ಹೊಂದಿದೆ. 2019-20ರಲ್ಲಿ 6.5 ಕೋಟಿ ರೂ. ವಹಿವಾಟು ನಡೆಸಿದ್ದು, ಸದಸ್ಯರಿಗೆ ವ್ಯವಹಾರದ ಸಾಲವಾಗಿ 1.28 ಕೋಟಿ ರೂ., 27 ಲಕ್ಷ ರೂ. ಚಿನ್ನಾಭರಣ ಆಧಾರ, ಸ್ವಸಹಾಯ ಸಂಘಗಳಿಗೆ 13 ಲಕ್ಷ ರೂ. ಸಾಲ ವಿತರಿಸ ‌ಲಾಗಿದೆ. ಶೇ.96ರಷ್ಟು ವಸೂಲಾತಿ ದಾಖಲಿಸಿದೆ. ಸದಸ್ಯತ್ವ  ವೃದ್ಧಿಗೆ ಯೋಜಿಸಿದ್ದು, ಸದಸ್ಯರಿಗೆ ಮತ್ತಷ್ಟು ಸಾಲ ವಿತರಿಸ ‌ಲು ಸಾಧ್ಯವಾಗಲಿದೆ ಎಂದರು.

ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ಸಿ.ರುದ್ರಾರಾಧ್ಯ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ಸದಸ್ಯರು ‌ ಹಾಗೂ ಆಡ‌ಳಿತ ಮಂಡಳಿಯಪರಸ್ಪರಸಹಕಾರಅತ್ಯವಶ್ಯವಾಗಿದೆ. ಆಡಳಿತ ಮಂಡಳಿಯ ನಿಸ್ವಾರ್ಥ ಸೇವಾ ಮನೋಭಾವದಿಂದ ಸಂಸ್ಥೆ ಬೆಳವಣಿಗೆ ಹೊಂದಲು ಸಾಧ್ಯ. ಸಹಕಾರ ‌ ಸಂಘಗಳಿಗೆ ಅನ್ವಯಿಸುವ ನಿಯಮಾವಳಿಗಳನ್ನು ರಚಿಸಿಕೊಂಡು ಸದಸ್ಯರ ವಿಶ್ವಾಸ ಗಳಿಸಿಕೊಂಡು ಬಲಿಷ್ಠವಾಗಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಸಂಸ್ಥೆಯ ಅಧಿಕಾರಿ ಬಿ.ಎಂ. ಲಕ್ಷ್ಮೀ ವರದಿ ಮಂಡಿಸಿದರು. ಉಪಾಧ್ಯಕ್ಷೆ ಶಾರದ ಅಯ್ಯರ್‌, ಸಲಹೆಗಾರರಾದ ‌ ಮುನಿವೀರಪ್ಪ, ಎಚ್‌. ಕೆ.ಭೀಮಯ್ಯ, ಷರಾಬ್‌ ಮುನಿಶಾಮಯ್ಯ ಟ್ರಸ್ಟಿನ ನಿರ್ದೇಶಕ ಎಚ್‌.ವಿ.ರಮೇಶ್‌, ವಕೀಲರಾದ ‌ ನಾಗಜ್ಯೋತಿ, ಸಿಇಒ ಎಂ.ಎಸ್‌. ಶಿವರಾಮ್‌, ನಿರ್ದೇಶಕರಾದ ಅಮೂಲ್ಯ, ಪ್ರಭಾಮಣಿ, ರಾಜೇಶ್ವರಿ, ಸಂಪಮ್ಮ,ಹೇಮಲತಾ, ದೀಪಿಕ, ಯಶೋಧ, ಅಶ್ವತ್ಥಮ್ಮ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next