Advertisement

ಗದಗ ಕಂಟೈನ್‌ಮೆಂಟ್‌ ಕಂಟಕ: ಒಂದೇ ದಿನ 15 ಜನರಿಗೆ ಕೋವಿಡ್

08:34 AM May 24, 2020 | mahesh |

ಗದಗ: ಜಿಲ್ಲೆಯ ಮಟ್ಟಿಗೆ ನಗರದ ಒಕ್ಕಲಗೇರಿ ಗಂಜಿ ಬಸವೇಶ್ವರ ಸರ್ಕಲ್‌ ಭಾಗದ ಕಂಟೈನ್ಮೆಂಟ್‌ ಪ್ರದೇಶವೇ ಕಂಟಕವಾಗಿ ಪರಿಣಮಿಸುತ್ತಿದೆ. ಈ ಪ್ರದೇಶದ ಪಿ.913 ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ 9 ಜನರಿಗೆ ಹಾಗೂ ಇತರೆ ರಾಜ್ಯಗಳಿಂದ ಜಿಲ್ಲೆಗೆ ಮರಳಿದ ವಲಸಿಗರಲ್ಲಿ 6 ಮಂದಿ ಸೇರಿದಂತೆ ಶನಿವಾರ ಒಂದೇ ದಿನ 15 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸಿದೆ.

Advertisement

ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಗಂಜಿ ಬಸವೇಶ್ವರ ವೃತ್ತದ ನಿರ್ಬಂಧಿ ತ ಪ್ರದೇಶದಲ್ಲಿ ಸೋಂಕು ದೃಢಪಟ್ಟ ಪಿ-913 ಸಂಪರ್ಕದಿಂದಾಗಿ 15 ವರ್ಷದ ಯುವಕ (ಪಿ-1794), 17 ವರ್ಷದ ಯುವಕ (ಪಿ-1795), 50 ವರ್ಷದ ಮಹಿಳೆ (ಪಿ-1932), 20 ವರ್ಷದ ಮಹಿಳೆ (ಪಿ-1933), 22 ವರ್ಷದ ಮಹಿಳೆ (ಪಿ-1934), 18 ವರ್ಷದ ಯುವಕ (ಪಿ-1935), 18 ವರ್ಷದ ಯುವತಿ (ಪಿ-1936), 8 ವರ್ಷದ ಹೆಣ್ಣು ಮಗು (ಪಿ-1937), 21 ವರ್ಷದ ವ್ಯಕ್ತಿ (ಪಿ-1938)
ಸೇರಿದಂತೆ 9 ಜನರಿಗೆ ಸೋಂಕು ದೃಢಪಟ್ಟಿದೆ. ಇನ್ನು ಗುಜರಾತ್‌ನಿಂದ ಹಿಂದಿರುಗಿದ 25 ವರ್ಷದ ವ್ಯಕ್ತಿ (ಪಿ-1744), 17 ವರ್ಷದ ಯುವಕ (ಪಿ-1745) ಮತ್ತು ಮಹಾರಾಷ್ಟ್ರದಿಂದ ವಾಪಸಾದ 7 ವರ್ಷದ ಬಾಲಕಿ (ಪಿ-1746), 20 ವರ್ಷದ ಪುರುಷ (ಪಿ-1747), 50 ವರ್ಷದ ಮಹಿಳೆ (ಪಿ-1748) ಮತ್ತು ರಾಜಸ್ಥಾನದಿಂದ ಹಿಂದಿರುಗಿದ 17 ವರ್ಷದ ಯುವತಿ (ಪಿ-1763) ಸೇರಿ ಒಟ್ಟು 15 ಕೋವಿಡ್‌-19 ಸೋಂಕು ದೃಢಪಟ್ಟಿವೆ. ಸೋಂಕಿತರನ್ನು ಇಲ್ಲಿನ ಕೋವಿಡ್‌ ಆಸ್ಪತ್ರೆಗೆ
ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಸೋಂಕಿತರ ಪ್ರಯಾಣದ ವಿವರ: ಮೇ 18ರಂದು ಗುಜರಾತದ ಅಹಮದಾಬಾದನಿಂದ ಎರಡು ವಾಹನಗಳಲ್ಲಿ 17 ಜನ ಜಿಲ್ಲೆಗೆ ಆಗಮಿಸಿದ್ದರು. ಈ ಪೈಕಿ ಪಿ-1744 ಹಾಗೂ ಪಿ-1745 ಸೋಂಕು ದೃಢಪಟ1ಟಿದೆ. ಇವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿರುವ 15 ಜನರನ್ನು ನಿಗಾದಲ್ಲಿರಿಸಲಾಗಿದೆ. ಅದರಂತೆ ಮಹಾರಾಷ್ಟ್ರದಿಂದ ನಿಪ್ಪಾಣಿವರೆಗೆ ಬಾಡಿಗೆ ವಾಹನದಲ್ಲಿ, ನಿಪ್ಪಾಣಿಯಿಂದ ಗದುಗಿಗೆ ಲಾರಿ ಮೂಲಕ ಆಗಮಿಸಿರುವ ನಾಲ್ವರಲ್ಲಿ ಮೂರು (ಪಿ-1746, ಪಿ-1747,
ಪಿ-1748) ಜನರಿಗೆ ಸೋಂಕು ಖಚಿತವಾಗಿದೆ. ಪ್ರಾಥಮಿಕ ಸಂಪರ್ಕಿತದಲ್ಲಿರುವ ಒಬ್ಬರನ್ನು ನಿಗಾದಲ್ಲಿರಿಸಲಾಗಿದೆ.

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ 4 ಕುಟುಂಬಗಳ ಒಟ್ಟು 17 ಜನರು ಮೇ 18ರಂದು ರಾಜಸ್ಥಾನದ ಅಜ್ಮಿರ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಲಾಕ್‌ ಡೌನ್‌ ಸಡಿಲಿಕೆಯಾದ ಬಳಿಕ ಜಿಲ್ಲೆಗೆ ಮರಳಿದ್ದು, ಆ ಪೈಕಿ ಯುವತಿಯೊಬ್ಬಳಿಗೆ (ಪಿ-1763) ಸೋಂಕು ದೃಢಪಟ್ಟಿದೆ. ಪ್ರಾಥಮಿಕ ಸಂಪರ್ಕಿತ 16, ದ್ವಿತೀಯ ಸಂಪರ್ಕಿತ 5 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಅ ಧಿಕಾರಿಗಳು ತಿಳಿಸಿದ್ದಾರೆ.

ರೆಡ್‌ ಝೋನ್‌ನತ್ತ ಗದಗ ಹೆಜ್ಜೆ?
ಶನಿವಾರ ಪ್ರಕಟಗೊಂಡ ಕೋವಿಡ್‌-19 ವರದಿಯಲ್ಲಿ 15 ಸೇರಿದಂತೆ ಜಿಲ್ಲೆಯಲ್ಲಿ 29 ಸಕ್ರಿಯ ಪ್ರರಕಣಗಳಿದ್ದು, ಒಟ್ಟು ಸೋಂಕಿನ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಈ ಪೈಕಿ ಐವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನುಳಿದಂತೆ ಓರ್ವ ವೃದ್ಧೆ (ಪಿ.166) ಮೃತಪಟ್ಟಿದ್ದಾರೆ. ಇನ್ನುಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ಹಂತದಲ್ಲಿ ಶೂನ್ಯಕ್ಕೆ ಇಳಿದಿದ್ದ ಪ್ರಕರಣಗಳ ಸಂಖ್ಯೆ ಈಗ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆಯು ರೆಡ್‌ ಝೋನ್‌ನತ್ತ ವಾಲುತ್ತಿದೆ.

Advertisement

ನಗರಕ್ಕೆ ಕಂಟೈನ್‌ಮೆಂಟ್‌ ಕಂಟಕ
ನಗರದ ಗಂಜಿ ಬಸವೇಶ್ವರ ವೃತ್ತದ ಪ್ರದೇಶದಲ್ಲಿ ಮೇಲಿಂದ ಮೇಲೆ ಪ್ರಕರಣಗಳು ದೃಢಪಡುತ್ತಿದ್ದು, ಅವಳಿ ನಗರದ ಪಾಲಿಗೆ ಇದು ಕಂಟಕವಾಗಿ ಪರಿಣಮಿಸಿದೆ. ಈ ಭಾಗದಲ್ಲಿ ಮೊದಲ ಪ್ರಕರಣ ಕಂಡು ಬರುತ್ತಿದ್ದಂತೆ ಹಂತ ಹಂತವಾಗಿ 118 ಜನರನ್ನು ಸರಕಾರಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಈ ನಡುವೆ ಗಂಜಿ ಬಸವೇಶ್ವರ ಸರ್ಕ್‌ಲ್‌ ಪ್ರದೇಶದಲ್ಲಿ ಮೇ 14ರಂದು ಸೋಂಕಿಗೆ ಒಳಗಾಗಿದ್ದ 61 ವರ್ಷದ ವೃದ್ಧ (ಪಿ.913)ನ ಸಂಪರ್ಕದಲ್ಲಿದ್ದ ಸುಮಾರು 9 ಜನರಿಗೆ ಶನಿವಾರ
ಕೊರೊನಾ ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next