Advertisement
ರಾಜ್ಯ ಉಸ್ತುವಾರಿ ಸುಜೇìವಾಲ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಸಮ್ಮುಖ ಸಂಜೆ ಆರಂಭವಾದ ಚುನಾ ವಣ ಸಮಿತಿ ಸಭೆ ತಡರಾತ್ರಿವರೆಗೂ ನಡೆಯಿತು. 10-15 ಕ್ಷೇತ್ರಗಳಿಗೆ ಹೆಸರುಗಳನ್ನು ಶಿಫಾರಸು ಮಾಡಲು ತೀರ್ಮಾ ನಿಸಲಾಗಿದೆ. ಗೊಂದಲಗಳ ನಿವಾರಣೆ, ಕೆಲವು ಆಂತರಿಕ ಪೈಪೋಟಿಗಳಿಂದ ಕಗ್ಗಂಟಾಗಿದ್ದ ಹಲವು ಕ್ಷೇತ್ರಗಳಿಗೆ ನಾಯಕರ ಮನವೊಲಿಕೆಯೊಂದಿಗೆ ಆಯಾ ಕ್ಷೇತ್ರಗಳಿಗೆ ಒಂದು ಹೆಸರನ್ನು ಅಂತಿಮಗೊಳಿಸಲು ಸಾಧ್ಯವಾಗಿದೆ.ಈ ಸಂಬಂಧದ ಪಟ್ಟಿ ಕೂಡ ಈಗಾಗಲೇ ಹೈಕಮಾಂಡ್ ತಲುಪಿದೆ ಎನ್ನಲಾಗಿದೆ.
Related Articles
Advertisement
ಈ ಮಧ್ಯೆ ಮೂರ್‍ನಾಲ್ಕು ತಾಸು ನಡೆದ ಸಭೆಯಲ್ಲಿ ಮೀಸಲು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಅಂತಿಮಗೊಳಿಸುವುದು, ಉಡುಪಿ ಚಿಕ್ಕಮಗಳೂರಿಗೆ ಜಯಪ್ರಕಾಶ್ ಹೆಗ್ಡೆ ಮನವೊಲಿಕೆ, ಬೆಳಗಾವಿ ಮತ್ತು ಚಿಕ್ಕೋಡಿ ವಿಚಾರದಲ್ಲಿನ ನಾಯಕರ ಪ್ರತಿಷ್ಠೆ ಸಹಿತ ಹಲವು ವಿಷಯಗಳು ಚರ್ಚೆಗೆ ಬಂದಿವೆ ಎಂದು ಮೂಲಗಳು ತಿಳಿಸಿವೆ. ಬೆಳಗಾವಿ ಪೈಪೋಟಿ ಚರ್ಚೆ
ಚಿಕ್ಕೋಡಿಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಚರ್ಚಿಸಲು ಸ್ಕ್ರೀನಿಂಗ್ ಕಮಿಟಿಯು ಸಚಿವ ಸತೀಶ ಜಾರಕಿಹೊಳಿ ಅವರನ್ನು ಕರೆಯಿಸಿಕೊಂಡು ಮಾತುಕತೆ ನಡೆಸಿತು ಎನ್ನಲಾಗಿದೆ. ಕರೆಯ ಮೇರೆಗೆ ಸಚಿವ ಜಾರಕಿಹೊಳಿ ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿದ್ದ ಸಭೆಗೆ ಆಗಮಿಸಿ, ಸ್ವಲ್ಪ ಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಚಿಕ್ಕೋಡಿಗೆ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಅವರ ಹೆಸರನ್ನು ಕಮಿಟಿಯು ಸಚಿವರ ಮುಂದಿಟ್ಟಿದೆ. ಆದರೆ ಇದಕ್ಕೆ ಸಚಿವರು ಅಷ್ಟಾಗಿ ಸಹಮತ ವ್ಯಕ್ತಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಯಾವುದು ಅಂತಿಮ?
ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಚಿತ್ರ ದುರ್ಗ, ಹುಬ್ಬಳ್ಳಿ- ಧಾರವಾಡ, ಬಳ್ಳಾರಿ, ಉತ್ತರ ಕನ್ನಡ, ಮಂಗಳೂರು, ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ ಕ್ಷೇತ್ರಗಳು