Advertisement
ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕೋವಿಡ್ 3ನೇ ಅಲೆ ನಿಯಂತ್ರಣ ಕುರಿತು ಭಾನುವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಶಾಸಕರು, ನವೋದಯ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ತಿಳಿಸಿದ್ದೇನೆ ಎಂದರು.
ಮಕ್ಕಳ ವಿಶೇಷ ವಾರ್ಡ್ ಹಾಗೂ ಆಕ್ಸಿಜನ್‌ಬೆಡ್‌ಗಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಕೋವಿಡ್ ಸಂಬಂಧಿತ ಮಾತ್ರೆ-ಔಷಧಕ್ಕಾಗಿ ಮೆಡಿಕಲ್ಸ್ ಸ್ಟೋರ್ ಮಾಲಿಕರಿಗೂ ಸೂಚಿಸಲಾಗಿದೆ. ಅಗತ್ಯವಿರುವೆಡೆ ಚೆಕ್‌ಪೋಸ್ಟ್ ಹಾಗೂ ಮಾಸ್ಕ್ ಹಾಕದವರಿಗೆ ದಂಡ ಇನ್ನಿತರ ಕಠಿಣ ಕ್ರಮಗಳನ್ನು ಜಾರಿಗೆ ತಂದು ಜನರ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
Related Articles
ರವಿಪ್ರಸಾದ್, ವೈದ್ಯರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಗ್ರಾಪಂ ಅಧ್ಯಕ್ಷರು ಹಾಗೂ ಶವ ಸಂಸ್ಕಾರದಲ್ಲಿ ತೊಡಗಿದ ತಂಡವನ್ನು ಆ.15ರಂದು ನಡೆಯುವ ಸರಳ ಕಾರ್ಯ ಕ್ರಮದಲ್ಲಿ ಅಭಿನಂದಿಸಲಾಗುತ್ತದೆ ಎಂದರು.
Advertisement
ಮಾಜಿ ಸೈನಿಕರಿಂದ ಅಖಂಡ ಜ್ಯೋತಿ: ಹಳೇ ಬಸ್ ನಿಲ್ದಾಣ ಮುಂಭಾಗ ಸಂವಿಧಾನ ವೃತ್ತ ಉದ್ಘಾಟನೆ ಮತ್ತು ನಂತರ ಶಾಸಕ ಕಚೇರಿಯಲ್ಲಿ ನಮ್ಮ ಸೈನ್ಯ ನಮ್ಮ ಹೆಮ್ಮೆ ಎಂಬ ಅಖಂಡ ಜ್ಯೋತಿ ಸ್ಥಾಪಿಸಿದ್ದು, ಇದನ್ನು ಸೈನ್ಯದಲ್ಲಿ ನಿವೃತ್ತಿಯಾಗಿ ಆಗಮಿಸಿರುವ ಕಟ್ಟೆಮಳಲವಾಡಿಯ ವಿಠಲ ಮೂರ್ತಿ ಹಾಗೂ ಹನಗೋಡಿನ ಅನಿಲ್ ಅವರು ಅಖಂಡ ಜ್ಯೋತಿ ಬೆಳಗಿಸುವ ಕಾರ್ಯಕ್ರಮದ ಮೂಲಕ್ಕೆ ದೇಶದ ಸೈನಿಕರನ್ನು ಗೌರವಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ನಗರಸಭೆ ಅಧ್ಯಕ್ಷೆ ಅನುಷಾ,ತಾಪಂ ಇಒ ಎಚ್. ಡಿ.ಗಿರೀಶ್, ತಹಶೀಲ್ದಾರ್ಮೋಹನ್, ಡಿವೈಎಸ್ಪಿ ರವಿಪ್ರಸಾದ್, ಟಿಎಚ್‌ಒ ಡಾ|ಕೀರ್ತಿಕುಮಾರ್, ಪೌರಾಯುಕ್ತ ರಮೇಶ್, ಎಇಇ ಬೋಜರಾಜ್, ಸಿಡಿಪಿಒ ರಶ್ಮಿ ಇತರರಿದ್ದರು. ವಾರಕ್ಕೆ 10 ಸಾವಿರ ಲಸಿಕೆ ನೀಡಲು ಸಚಿವರಲ್ಲಿ ಕೋರಿಕೆ
ತಾಲೂಕಿನಲ್ಲಿ ಪ್ರತಿನಿತ್ಯ 3 ಸಾವಿರ ಡೋಸ್ ಲಸಿಕೆ ನೀಡಿ ಮುಂಜಾಗ್ರತೆ ಕ್ರಮಗಳನ್ನು ಪಾಲಿಸಿದರೆ, ಕೋವಿಡ್ ಸೆಡ್ಡು ಹೊಡೆಯಬಹುದು. ವಾರಕ್ಕೆಕನಿಷ್ಠ 10 ಸಾವಿರ ಲಸಿಕೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದೇನೆ. ನಾನು ಮಾಡಿದ ಎಲ್ಲ ಪ್ರಯತ್ನದಿಂದ ತಾಲೂಕಿನ ಜನತೆಗೆ ಲಸಿಕೆಕೊಡಿಸುವಲ್ಲಿ ಯಶಸ್ವಿಯಾಗಿ ಜಿಲ್ಲೆಯಲ್ಲಿ ನಾವು ಮುಂದೆ ಇದ್ದೇವೆ ಎಂದು ಶಾಸಕ ಮಂಜುನಾಥ್ ತಿಳಿಸಿದರು.