Advertisement

ಸವಾರರ ವಿರುದ್ಧ 1,448 ಕೇಸ್‌, 10.87 ಲಕ್ಷ ರೂ. ದಂಡ

09:50 PM Sep 09, 2019 | Team Udayavani |

ಚಿಕ್ಕಬಳ್ಳಾಪುರ: ದೇಶಾದ್ಯಂತ ಕೇಂದ್ರ ಸರ್ಕಾರ ಹೊಸದಾಗಿ ತಿದ್ದುಪಡಿ ಮಾಡಿ ಜಾರಿಗೊಳಿಸಿರುವ ಮೋಟಾರು ವಾಹನ ಕಾಯ್ದೆ-2018, ವಾಹನ ಸವಾರರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಜಿಲ್ಲಾದ್ಯಂತೆ ಕಾಯ್ದೆ ಅನುಷ್ಠಾನಗೊಳಿಸಿದ 4ನೇ ದಿನದ ವೇಳೆಗೆ ರಸ್ತೆ ಸಂಚಾರಿ ನಿಯಮಗಳ ಉಲ್ಲಂಘನೆಯಡಿ ಬರೋಬರಿ 1,448 ಪ್ರಕರಣ ದಾಖಲಿಸಿ 10.87 ಲಕ್ಷ ರೂ, ಭಾರೀ ಮೊತ್ತದ ದಂಡ ವಸೂಲಿ ಮಾಡಲಾಗಿದೆ.

Advertisement

ಸೆ.ರಿಂದ 8ರವರೆಗೆ: ರಸ್ತೆ ಸಂಚಾರಿ ನಿಯಮ ಉಲ್ಲಂ ಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈ ಕಾಯ್ದೆ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ಬಳಿಕ ಜಿಲ್ಲೆಯಲ್ಲಿ ಸೆ.5 ರಿಂದ ಸೆ.8ರ ಸಂಜೆ ವೇಳೆಗೆ ಜಿಲ್ಲೆಯಲ್ಲಿ ಕಾಯ್ದೆ ಉಲ್ಲಂಘನೆಯಡಿ ಒಟ್ಟು 1,448 ಕೇಸ್‌ ದಾಖಲಿಸಿ ಲಕ್ಷ ಲಕ್ಷ ದಂಡ ವಸೂಲಿ ಮಾಡಿರುವುದು ವಾಹನ ಸವಾರರಲ್ಲಿ ಸಂಚಲನ ತಂದಿದೆ.

ಸವಾರರಿಗೆ ಎಚ್ಚರಿಕೆ ಸೂಚನೆ: ಪೊಲೀಸ್‌ ಇಲಾಖೆ, ತಮ್ಮ ಠಾಣೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿಶೇಷ ಕಾರ್ಯಾಚರಣೆಗೆ ಇಳಿದು ರಸ್ತೆ ನಿಯಮ ಉಲ್ಲಂ ಸಿ ಸಂಚರಿಸುವ ವಾಹನ ಸವಾರರು, ರಸ್ತೆ ಸುರಕ್ಷತಾ ನಿಯಮ ಪಾಲಿಸದ ವಾಹನ ಸವಾರರಿಗೆ ದಂಡ ಪ್ರಯೋಗ ಮಾಡಿ ಎಚ್ಚರಿಕೆ ನೀಡುತ್ತಿದ್ದಾರೆ. ವಿಶೇಷವಾಗಿ ಚಿಕ್ಕಬಳ್ಳಾಪುರ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಪೊಲೀಸರು ಕಾರ್ಯಾಚರಣೆ ನಡೆಸಿ ವಿವಿಧ ರಸ್ತೆ ನಿಯಮ ಪಾಲಿಸದೇ ಅತಿವೇಗ ಹಾಗೂ ದಾಖಲೆ ಇಲ್ಲದ ವಾಹನ ಸವಾರರಿಗೆ ಸಾವಿರಗಟ್ಟಲೇ ದಂಡ ವಿಧಿಸುತ್ತಿದ್ದಾರೆ.

ರಸ್ತೆ ಸುರಕ್ಷತಾ ನಿಯಮ ಪಾಲಿಸಿ: ಜಿಲ್ಲಾದ್ಯಂತ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿ ಅನುಷ್ಠಾನಗೊಳಿಸಿರುವ ಮೋಟಾರು ವಾಹನ ಕಾಯ್ದೆ ಅನ್ವಯ ಕಳೆದ ಸೆ.5 ರಿಂದ 8 ರ ತನಕ ರಸ್ತೆ ಸಂಚಾರಿ ನಿಯಮ ಉಲ್ಲಂ ಸಿದ್ದಕ್ಕೆ ಒಟ್ಟು 1,448 ಪ್ರಕರಣ ದಾಖಲಿಸಿ ಒಟ್ಟು 10.87,500 ರೂ, ದಂಡ ವಸೂಲಿ ಮಾಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಹೆಲ್ಮೆಟ್‌ ಧರಿಸದೇ ಇರುವುದಕ್ಕೆ ದಂಡ ಹಾಕಲಾಗಿದೆ. ವಾಹನ ಸವಾರರು ತಮ್ಮ ಸುರಕ್ಷತೆಗಾಗಿ ಕಾಯ್ದೆಯಡಿ ಸೂಚಿಸಿರುವ ಕ್ರಮಗಳನ್ನು ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಸಂತೋಷ ಬಾಬು ತಿಳಿಸಿದ್ದಾರೆ.

ರಸ್ತೆ ಸುರಕ್ಷತಾ ನಿಯಮ ಪಾಲಿಸದಿದ್ದಕ್ಕೆ ದಂಡ ಹಾಕುವುದು ಸರಿ. ಆದರೆ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ಹೊಸ ಮೋಟಾರು ವಾಹನ ಕಾಯ್ದೆಯಡಿ ವಿಧಿಸುತ್ತಿರುವ ದಂಡ ಹಗಲು ದರೋಡೆ ಅಗಿದೆ. ಸಾಮಾನ್ಯ ಜನರಿಗೆ ಇದರಿಂದ ಸಾಕಷ್ಟು ಹೊರೆಯಾಗಿದೆ. ಕೂಡಲೇ ಕೇಂದ್ರ ಸರ್ಕಾರ ದಂಡ ಪರಿಷ್ಕರಿಸಬೇಕು. ಇಲ್ಲದಿದ್ದರೆ ಸಾಮಾನ್ಯ ಜನತೆ ಬೀದಿಗಿಳಿಯುವುದರಲ್ಲಿ ಯಾವುದೇ ಅನುಮಾನ ಇಲ್ಲ.
-ಎಂ.ಪಿ.ಮುನಿವೆಂಕಟಪ್ಪ, ಕೃಷಿ ಕೂಲಿಕಾರರ ಸಂಘದ ಮುಖಂಡ

Advertisement

ನಿಯಮ ಉಲ್ಲಂಘನೆ ಕೇಸು ದಂಡ(ಸಾವಿರ)
ಅತಿವೇಗ ಚಾಲನೆ 3 4000
ಹೆಚ್ಚು ಪ್ರಯಾಣಿಕರ ಸಂಚಾರ 93 36,700
ಕರ್ಕಶ ಶಬ್ಧ 1 100
ಚಾಲನಾ ಪರವಾನಗಿ ಇಲ್ಲದ್ದು 7 39000
ಸಿಗ್ನಲ್‌ ಜಂಪ್‌ 1 2000
ವಾಹನ ನೋಂದಣಿ ಸಂಖ್ಯೆ ಇಲ್ಲದ್ದು 2 1,000
ಸಮವಸ್ತ್ರ ಇಲ್ಲದೇ ಚಾಲನೆ 343 1,71,500
ವಿಮೆ ದಾಖಲೆ ಇಲ್ಲದ್ದು 3 6,000
ತ್ರಿಬಲ್‌ ರೈಡಿಂಗ್‌ 3 3,000
ಮೊಬೈಲ್‌ ಬಳಕೆ 10 23,000
ಸೀಟ್‌ಬೆಲ್ಟ್ ಇಲ್ಲದ್ದು 81 80.500
ಹೆಲ್ಮೆಟ್‌ ಇಲ್ಲದೇ ಬೈಕ್‌ ಚಾಲನೆ 437 4,36000
ಇತರೆ 461 2,80,700

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next