Advertisement

Operation Ajay: ಇಸ್ರೇಲ್ ನಿಂದ 143 ಪ್ರಯಾಣಿಕರನ್ನು ಹೊತ್ತ 6ನೇ ವಿಮಾನ ತಾಯ್ನಾಡಿಗೆ ಆಗಮನ

08:44 AM Oct 23, 2023 | Team Udayavani |

ನವದೆಹಲಿ: ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ ಇಸ್ರೇಲ್ ತೊರೆಯಲು ಬಯಸುವ ಇಬ್ಬರು ನೇಪಾಳದ ನಾಗರಿಕರು ಮತ್ತು ನಾಲ್ಕು ಶಿಶುಗಳು ಸೇರಿದಂತೆ 143 ಜನರನ್ನು ಹೊತ್ತ ವಿಶೇಷ ವಿಮಾನವು ‘ಆಪರೇಷನ್ ಅಜಯ್’ ಭಾಗವಾಗಿ ಭಾನುವಾರ ಸಂಜೆ ಭಾರತಕ್ಕೆ ತೆರಳಿದೆ.

Advertisement

ಅಕ್ಟೋಬರ್ 7 ರಂದು ಗಾಜಾದಿಂದ ಇಸ್ರೇಲಿ ಪಟ್ಟಣಗಳ ಮೇಲೆ ಹಮಾಸ್ ಉಗ್ರಗಾಮಿಗಳು ನಡೆಸಿದ ದಾಳಿಯ ನಂತರ ಸ್ವದೇಶಕ್ಕೆ ಮರಳಲು ಬಯಸುವ ಭಾರತೀಯ ಪ್ರಜೆಗಳಿಗೆ ಮರಳಲು ಅನುಕೂಲವಾಗುವಂತೆ ಅಕ್ಟೋಬರ್ 12 ರಂದು ಪ್ರಾರಂಭಿಸಲಾದ ಆಪರೇಷನ್ ಅಜಯ್‌ನ ಭಾಗವಾಗಿ ನಡೆದ ಕಾರ್ಯಾಚರಣೆಯಲ್ಲಿ ಇದು ಆರನೇ ವಿಶೇಷ ವಿಮಾನ ಇಸ್ರೇಲ್ ನಿಂದ ಭಾರತಕ್ಕೆ ಪ್ರಯಾಣಿಕರನ್ನು ಕರೆತಂದಿದೆ.

ಈ ವಿಮಾನದಲ್ಲಿ ಇಬ್ಬರು ನೇಪಾಳದ ನಾಗರಿಕರು ಮತ್ತು ನಾಲ್ಕು ಶಿಶುಗಳು ಸೇರಿದಂತೆ 143 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಕಳೆದ ಮಂಗಳವಾರ ವಿಶೇಷ ವಿಮಾನದಲ್ಲಿ ಹದಿನೆಂಟು ನೇಪಾಳ ಪ್ರಜೆಗಳಿ ಪ್ರಜೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು.

ಇದರೊಂದಿಗೆ ಆಪರೇಷನ್ ಅಜಯ್ ಕಾರ್ಯಾಚರಣೆ ಮೂಲಕ ಒಟ್ಟು 1,200 ಪ್ರಯಾಣಿಕರನ್ನು ಕರೆತಂದಂತಾಗಿದೆ.

Advertisement

ಇದನ್ನೂ ಓದಿ: Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

Advertisement

Udayavani is now on Telegram. Click here to join our channel and stay updated with the latest news.

Next