Advertisement

ಜಿಲ್ಲೆಯಲ್ಲಿ ಪರವಾನಿಗೆ ಪಡೆದ 143 ಗಣಿ ಗುತ್ತಿಗೆ; ಕಟ್ಟಡ ಕಲ್ಲು ಕ್ವಾರಿಗಳೇ ಹೆಚ್ಚು

12:30 PM Dec 31, 2022 | Team Udayavani |

ಉಡುಪಿ: ಜಿಲ್ಲೆಯಲ್ಲಿ ಕಟ್ಟಡ ಕಲ್ಲು, ಜೇಡಿ ಮಣ್ಣು, ಕೆಂಪುಕಲ್ಲು (ಮುರಕಲ್ಲು) ಸಾಮಾನ್ಯ ಮರಳು, ಸಿಲಿಕಾ ಮರಳು ಹಾಗೂ ಆಲಂಕಾರಿಕ ಶಿಲೆ ಗಣಿಗಾರಿಕೆಯಲ್ಲಿ 143 ಗುತ್ತಿಗೆಗಳು ಮಾತ್ರ ಪರವಾನಿಗೆ ಪಡೆದು ಕಾರ್ಯನಿರ್ವಹಿಸುತ್ತಿವೆ.

Advertisement

2020-21ರಲ್ಲಿ ಗುತ್ತಿಗೆ ಪಡೆದ ಕಲ್ಲುಗಣಿಗಳಲ್ಲಿ 94 ಕಾರ್ಯನಿರ್ವಹಿಸುತ್ತಿದ್ದರೆ, 30 ನಿಷ್ಕ್ರಿಯಗೊಂಡಿದೆ. 2021-22ರಲ್ಲಿ 105 ಕಲ್ಲುಗಣಿ ಕಾರ್ಯನಿರ್ವಹಿಸುತ್ತಿದ್ದು, 25 ನಿಷ್ಕ್ರಿಯ ಗೊಂಡಿವೆ. 2022-23ರಲ್ಲಿ 109 ಕಲ್ಲುಗಣಿ ಕಾರ್ಯನಿರ್ವಹಿಸುತ್ತಿದ್ದು, 24 ನಿಷ್ಕ್ರಿಯಗೊಂಡಿವೆ. ಹಾಗೆಯೇ 2020-21ರಲ್ಲಿ 34 ಕ್ರಷರ್‌, 2021-22 ಹಾಗೂ 2022-23ರಲ್ಲಿ ತಲಾ 40 ಕ್ರಷರ್‌ ಕಾರ್ಯನಿರ್ವಹಿಸುತ್ತಿದ್ದು, ಈ ಮೂರು ವರ್ಷಗಳಲ್ಲಿ ತಲಾ ಒಂದೊಂದು ನಿಷ್ಕ್ರಿಯಗೊಂಡಿವೆ.

ರಾಜ್ಯ ಸರಕಾರದ ನಿಯಮದಂತೆ ಸರಕಾರಿ ಜಮೀನು ಗಳಲ್ಲಿ ಲಭ್ಯವಿರುವ ಉಪಖನಿಜ ನಿಕ್ಷೇಪಗಳನ್ನು ಹರಾಜು ಮೂಲಕ ಮಂಜೂರು ಮಾಡಬೇಕಾಗುತ್ತದೆ. ಆದರೆ, ಕೆಲವೊಂದು ಕಡೆಗಳಲ್ಲಿ ಗುತ್ತಿಗೆ ಪಡೆಯುವವರು ರಾಜಕೀಯ ಪ್ರಭಾವ ಬಳಸಿ ತಮ್ಮದಾಗಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಇದೆ.

ಪಟ್ಟಾ ಜಮೀನುಗಳಲ್ಲಿ ಲಭ್ಯವಿರುವ ಖನಿಜವನ್ನು ತೆಗೆಯಲು ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು 1994ರ ನಿಯಮ 32ರಂತೆ ಪಟ್ಟಾದಾರರಿಗೆ ಅಥವಾ ಪಟ್ಟಾದಾರರು ಒಪ್ಪಿಗೆ ನೀಡುವ ವ್ಯಕ್ತಿಗೆ ಕಂದಾಯ ಮತ್ತು ಅರಣ್ಯ ಇಲಾಖೆಯ ನಿರಾಕ್ಷೇಪಣ ಪತ್ರ, ಭೂ ಪರಿವರ್ತನೆ ಆದೇಶ, ಪರಿಸರ ಅನುಮತಿ ಪತ್ರ ನೀಡಿದ ಅನಂತರದಲ್ಲಿ ಕಲ್ಲು ಗಣಿಗಾರಿಕೆಗೆ ಪರವಾನಿಗೆ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕರಾವಳಿ ಭಾಗದಲ್ಲಿ ಕೆಂಪು ಕಲ್ಲುಗಣಿಕಾರಿಗೆ (ಬಹು ತೇಕರು ಮನೆ ಕಟ್ಟಲು ಬಳಸುವ ಕಲ್ಲು) ಹೆಚ್ಚಿರುವು ದರಿಂದ ಇದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿ ಸಿದ್ಧಪಡಿ ಸುವ ಅಗತ್ಯವಿದೆ ಎಂಬ ಕೂಗು ಕೇಳಿಬಂದಿತ್ತು. ಆದರೆ, ಸರಕಾರ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುವ ಪ್ರಸ್ತಾವನೆ ಹೊಂದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ.

Advertisement

ಕಟ್ಟಡ ಕಲ್ಲು ಕ್ವಾರಿಗಳೇ ಹೆಚ್ಚು
ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಟ್ಟಡಕ್ಕೆ ಬಳಸುವ ಕಟ್ಟಡ ಕಲ್ಲು ಕ್ವಾರಿ ಹೆಚ್ಚಿವೆ. ಗುತ್ತಿಗೆ ಪರವಾನಿಗೆ ಪಡೆದಿರುವ 124 ಕಟ್ಟಡ ಕಲ್ಲು ಕ್ವಾರಿಗಳಿವೆ. ಪರವಾನಿಗೆ ಪಡೆಯದೆ ಇರುವ ಕ್ರಷರ್‌ ಹಾಗೂ ಕಲ್ಲು ಕ್ವಾರಿ ಗಣಿಗಾರಿಕೆಯ ಸಂಖ್ಯೆ ಇದಕ್ಕಿಂತ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಆಲಂಕಾರಿಕ ಶಿಲೆಗಳ ಗಣಿಗಾರಿಕೆ 7 ಕಡೆಗಳಲ್ಲಿ ನಡೆದರೆ, ಸಿಲಿಕಾ ಮರಳುಗಾರಿಕೆ 6, ಸಾಮಾನ್ಯ ಮರಳುಗಾರಿಗೆ 3, ಕೆಂಪುಕಲ್ಲು ಕ್ವಾರಿ 2 ಹಾಗೂ ಜೇಡಿ ಮಣ್ಣಿನ ಕ್ವಾರಿ 1 ಪರವಾನಿಗೆ ಪಡೆದು ಕಾರ್ಯನಿರ್ವಹಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next