Advertisement

1428 ಮಂದಿಗೆ ಸಾಂಸ್ಥಿಕ ಕ್ವಾರಂಟೈನ್‌

07:36 AM May 19, 2020 | Suhan S |

ಶಿವಮೊಗ್ಗ: ಬೇರೆ ರಾಜ್ಯಗಳಿಂದ ಜಿಲ್ಲೆಗೆ ಇದುವರೆಗೆ ಆಗಮಿಸಿರುವ 1428 ಮಂದಿಯನ್ನು ಸಾಂಸ್ಥಿಕ ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್‌ ತಿಳಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊರ ಜಿಲ್ಲೆಗಳಿಂದ ಆಗಮಿಸಿದ್ದವರ ಪೈಕಿ 802 ಮಂದಿಯ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದ್ದು, 14 ಪಾಸಿಟಿವ್‌ ಬಂದಿವೆ. ಇನ್ನುಳಿದವರ ಪರೀಕ್ಷೆಯನ್ನು ಒಂದೆರಡು ದಿನಗಳಲ್ಲಿ ಪೂರ್ಣಗೊಳಿಸಲಾಗುವುದು. ಇದುವರೆಗೆ ಒಟ್ಟು 4554 ಸ್ಯಾಂಪಲ್‌ಗ‌ಳ ಪರೀಕ್ಷೆ ನಡೆಸಲಾಗಿದ್ದು, 4349 ವರದಿ ಬಂದಿವೆ. ಇನ್ನೂ 191 ಸ್ಯಾಂಪಲ್‌ಗ‌ಳ ವರದಿ ಬರಬೇಕಿದೆ ಎಂದು ಹೇಳಿದರು.

ಕ್ವಾರಂಟೈನ್‌ ವ್ಯವಸ್ಥೆ: ಪ್ರಸ್ತುತ 916 ಮಂದಿ ಸಾಂಸ್ಥಿಕ ಕ್ವಾರೆಂಟೈನ್‌ ಮತ್ತು 64 ಮಂದಿ ಹೋಂ ಕ್ವಾರಂಟೈನ್‌ ನಲ್ಲಿದ್ದಾರೆ ಎಂದು ಹೇಳಿದರು. ಕ್ವಾರಂಟೈನ್‌ ವ್ಯವಸ್ಥೆಗಾಗಿ 50 ವಸತಿ ಶಾಲೆಗಳು, ಹೊಟೇಲ್‌ಗ‌ಳು ಮತ್ತು ಗ್ರಾಮೀಣ ಭಾಗದಲ್ಲಿ 7 ಶಾಲೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪಾಸಿಟಿವ್‌ ಬಂದ ಪ್ರಕರಣಗಳಿಗೆ ಸಂಬಂಧಿಸಿದಂತೆ 67 ಮಂದಿ ಪ್ರಾಥಮಿಕ ಸಂಪರ್ಕ ಹೊಂದಿದವರು ಹಾಗೂ 150 ಮಂದಿ ದ್ವಿತೀಯ ಹಂತದ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಕ್ವಾರಂಟೈನ್‌ನಲ್ಲಿರುವವರಿಗೆ ಪ್ರತಿದಿನ ಇಡ್ಲಿ, ಬಾಳೆ ಹಣ್ಣು, ಅನ್ನ ಸಾಂಬಾರು, ಪಲ್ಯ, ಚಪಾತಿ, ಮೊಟ್ಟೆ ಸೇರಿದಂತೆ ಉತ್ತಮ ಆಹಾರವನ್ನು ಒದಗಿಸಲಾಗುತ್ತಿದೆ. ಕ್ವಾರಂಟೈನ್‌ನಲ್ಲಿರುವವರು ತಮ್ಮ ಅಹವಾಲುಗಳನ್ನು ಸಲ್ಲಿಸಲು 24ಹಿ7 ಕಂಟ್ರೋಲ್‌ ರೂಂ ತೆರೆಯಲಾಗಿದ್ದು, 08182-220082 ಸಂಖ್ಯೆಗೆ ಮಾಹಿತಿ ನೀಡಬಹುದಾಗಿದೆ ಎಂದು ಅವರು ಹೇಳಿದರು.

5.12 ಲಕ್ಷ ಜನರ ಆರೋಗ್ಯದ ಮೇಲೆ ನಿಗಾ: ಜಿಲ್ಲೆಯಲ್ಲಿ ಎರಡನೇ ಹಂತದ ಮನೆ- ಮನೆ ಆರೋಗ್ಯ ಸಮೀಕ್ಷೆ ಪೂರ್ಣಗೊಂಡಿದ್ದು, 3.26ಜನರ ಆರೋಗ್ಯದ ಮಾಹಿತಿ ಪಡೆಯಲಾಗಿದೆ. ಇದೀಗ ಮೂರನೇ ಹಂತದ ಸಮೀಕ್ಷೆ ಆರಂಭಿಸಲಾಗಿದ್ದು, ಒಟ್ಟು 5.12 ಲಕ್ಷ ಜನರ ಆರೋಗ್ಯ ಮಾಹಿತಿ ಪಡೆಯಲಾಗುವುದು. ಇದರಲ್ಲಿ 18 ಸಾವಿರ ಮಂದಿ ಗರ್ಭಿಣಿಯರು, 83 ಸಾವಿರ ಮಂದಿ ಡಯಾಬಿಟಿಸ್‌ ವ್ಯಕ್ತಿಗಳು, 60 ವರ್ಷ ಮೇಲ್ಪಟ್ಟವರು ಸೇರಿದ್ದಾರೆ. ಆಶಾ ಕಾರ್ಯಕರ್ತೆಯರು ಮತ್ತು ಬಿಎಲ್‌ ಒಗಳು ಸಮೀಕ್ಷೆ ಕಾರ್ಯ ಕೈಗೊಂಡಿದ್ದಾರೆ ಎಂದರು.

5200 ಮಂದಿಗೆ ಪಾಸ್‌: ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಹಾಗೂ ರಾಜ್ಯಗಳಿಗೆ ತೆರಳಲು ಇದುವರೆಗೆ 5200 ಮಂದಿಗೆ ಪಾಸ್‌ ನೀಡಲಾಗಿದೆ. ಇದರಲ್ಲಿ 281 ಉತ್ತರ ಪ್ರದೇಶ, 79 ಮಂದಿ ಜಾರ್ಖಂಡ್‌, 316 ಮಂದಿ ಬಿಹಾರ, 150 ಮಂದಿ ಪಶ್ಚಿಮ ಬಂಗಾಳ, 250 ಮಂದಿ ರಾಜಸ್ತಾನ, 36 ಮಂದಿ ಮಧ್ಯಪ್ರದೇಶದವರು ಸೇರಿದ್ದಾರೆ. ಇದೇ ವೇಳೆ ಬೇರೆ ಜಿಲ್ಲೆಗಳಿಂದ ಆರಂಭಿಕ ಹಂತದಲ್ಲಿ 59 ಸಾವಿರ ಮಂದಿ ಬಳಿಕ 3300 ಮಂದಿ ಪಾಸ್‌ ಬಳಸಿಕೊಂಡು ಬಂದಿದ್ದಾರೆ. ಸುಮಾರು 150 ಮಂದಿ ಪಾಸ್‌ ಇಲ್ಲದೇ ಜಿಲ್ಲೆಗೆ ಬರುವ ಪ್ರಯತ್ನ ಮಾಡಿದ್ದು, ಅಂತವರನ್ನು ಚೆಕ್‌ಪೋಸ್ಟ್‌ಗಳಲ್ಲಿ ಪತ್ತೆ ಹಚ್ಚಿ ಕ್ವಾರಂಟೈನ್‌ಗೆ ಕ್ರಮ ಕೈಗೊಳ್ಳಲಾಗಿದೆ. ಕಳ್ಳಹಾದಿಯಲ್ಲಿ ಬಂದವರನ್ನು ಸಾರ್ವಜನಿಕರ ಸಹಕಾರದೊಂದಿಗೆ ಪತ್ತೆ ಹಚ್ಚಲು ಸಾಧ್ಯವಾಗಿದೆ. ಅಂತಹ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು 08182-221010 ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next