Advertisement

240 ಮನೆಗಳ ನಿರ್ಮಾಣಕ್ಕೆ 1.41 ಕೋಟಿ: ದೇಶಪಾಂಡೆ

03:14 PM Jan 09, 2018 | Team Udayavani |

ಹಳಿಯಾಳ: ಬಡವರಿಗೆ 504 ಮನೆಗಳನ್ನು ನಿರ್ಮಿಸಿ ಕೊಡುವ ಯೋಜನೆ ಹಲವು ವರ್ಷಗಳಿಂದ ಕೆಲವು ತಾಂತ್ರಿಕ ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು. ಅವುಗಳನ್ನು ಸರಿಪಡಿಸಿ ಇದೀಗ ಮೊದಲನೇ ಹಂತದಲ್ಲಿ 240 ಮನೆಗಳ ನಿರ್ಮಾಣಕ್ಕಾಗಿ 1.41 ಕೋಟಿ ರೂ ಅನುದಾನವನ್ನು
ಮಂಜೂರಾತಿ ನೀಡುವುದರ ಜೊತೆಗೆ ಇನ್ನೂಳಿದ ಮನೆಗಳ ನಿರ್ಮಾಣಕ್ಕೆ ಶೀಘ್ರದಲ್ಲಿಯೇ ಇನ್ನಷ್ಟು ಅನುದಾನ ಬಿಡುಗಡೆಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದರು.

Advertisement

ಪುರಸಭೆ ಸಭಾಭವನದಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬಡವರಿಗೆ ಸೂರು ನೀಡುವ ಬಹುದಿನಗಳ ಕನಸು ಶೀಘ್ರದಲ್ಲಿಯೇ ಈಡೇರಲಿದೆ. ಅಲ್ಲದೇ ಬಡವರಿಗಾಗಿಯೇ ಜಿ ಪ್ಲಸ್‌ ಟೂ ಮನೆಗಳ ಸಮುಚ್ಚಯ ನಿರ್ಮಾಣಕ್ಕಾಗಿ 1.41 ಕೋಟಿ ರೂ ಅನುದಾನವನ್ನು ಮಂಜೂರು ಮಾಡಲಾಗಿದ್ದು ಕಾಮಗಾರಿಗಳು ಇನ್ನೆರಡು ವಾರದಲ್ಲಿ ಆರಂಭವಾಗಲಿವೆ ಎಂದರು. 

240 ಮನೆಗಳ ನಿರ್ಮಾಣಕ್ಕೆ ಫಲಾನುಭವಿಗಳಿಂದ 90 ಲಕ್ಷ ರೂಗಳ ವಂತಿಗೆ ಸಂಗ್ರಹಿಸಲಾಗಿದ್ದು ಕರ್ನಾಟಕ ಗೃಹ ನಿರ್ಮಾಣ ಮಂಡಳಿಗೆ  ಉಸ್ತುವಾರಿ ನೀಡಲಾಗಿದ್ದು ಬಡವರಿಗೆ ಹೊರೆಯಾಗದ ಹಾಗೇ ನೋಡಿಕೊಳ್ಳಲು ಮರುಟೆಂಡರ್‌ ಕರೆಯಲಾಗಿದ್ದು ಅದನ್ನು ಸಹ ಕೆಲವೇ ದಿನಗಳಲ್ಲಿ ಸರಿಪಡಿಸಿ ಮುಂದಿನ ಕಾಮಗಾರಿಗಳಿಗೆ ಅನುವು ಮಾಡಿಕೊಡಲಾಗುವುದೆಂದರು. ಪಟ್ಟಣದ ಗುಡ್ನಾಪುರ ಬ್ಲಾಕ್‌ ನಂ. 36/1ರಲ್ಲಿರುವ
1.09 ಎಕರೆ ಭೂಮಿಯಲ್ಲಿ 20×30 ಅಳತೆಯ 27 ನಿವೇಶನಗಳನ್ನು ರಚಿಸಿ ಅರ್ಹ ಬಡವರಿಗೆ ವಿತರಿಸುವಂತೆ ಪುರಸಭೆ ಅಧಿಕಾರಿಗಳಿಗೆ ಆದೇಶ ನೀಡಿದರು.

ಪಟ್ಟಣದ ಮಧ್ಯಭಾಗದಲ್ಲಿ ಪುರಸಭೆಯ ನೂತನ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದ್ದು ಸಿಟಿಎಸ್‌ ನಂ 577/13ರಲ್ಲಿ ವಾಸಿಸುವ ರಹವಾಸಿಗಳಿಗೆ ವಾಜಪೇಯಿ ನಗರ ನಿವೇಶನ ಯೋಜನೆಯಡಿ ಪರ್ಯಾಯ ನಿವೇಶಗಳನ್ನು ನೀಡುವ ಕುರಿತು ಚರ್ಚೆ ನಡೆಯಿತು. ಅಕ್ರಮ ಬಡಾವಣೆಗಳ ಬಗ್ಗೆ ಚರ್ಚಿಸಿದ ಸಚಿವರು, ಬಡವರು ಮತ್ತು ಮಧ್ಯಮ ವರ್ಗದವರು ತಮ್ಮ ಶ್ರಮದ ಹಣದಿಂದ ಬಡಾವಣೆಗಳಲ್ಲಿ ನಿವೇಶನಗಳನ್ನು ಪಡೆದು ನಂತರ ಪರಿತಪಿಸುವಂತಹ ವ್ಯವಸ್ಥೆ ಕಂಡು ಬಂದಿದ್ದು ಕೆಲ ಸಾರ್ವಜನಿಕರು ಸಹ ತಮಗೆ ಭೇಟಿಯಾಗಿ ತಮ್ಮ ನೋವನ್ನು ತೊಡಿಕೊಂಡಿದ್ದು ಇದರ ಕುರಿತು ಪುರಸಭೆ ಅಧಿಕಾರಿಗಳು ಗಂಭೀರವಾಗಿ ಪರಿಶೀಲನೆ ನಡೆಸಿ, ಅಕ್ರಮ ಬಡಾವಣೆಗಳನ್ನು ಗುರುತಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಮುಂದಾಗಬೇಕು ಎಂದರು. 

ಹಳಿಯಾಳ ಪಟ್ಟಣವನ್ನು ಕಸಮುಕ್ತ ಹಾಗೂ ಮಾದರಿ ಪಟ್ಟಣವನ್ನಾಗಿ ಮಾಡಲು ಜ.15 ರಿಂದ ಪಟ್ಟಣದಲ್ಲಿ ಸ್ವಚ್ಛತಾ ಅಭಿಯಾನ ಆರಂಭಿಸಿ ನೈರ್ಮಲ್ಯ ಮತ್ತು ಆರೋಗ್ಯದ ಅರಿವು ಮೂಡಿಸಲು ತಹಶೀಲದಾರ ಮತ್ತು ಪುರಸಭೆ ಮುಖ್ಯಾಧಿಕಾರಿಗೆ ಆದೇಶಿಸಿದರು. 

Advertisement

ವಿಪ ಸದಸ್ಯ ಎಸ್‌.ಎಲ್‌. ಘೋಟೆ°ಕರ, ಹಂಗಾಮಿ ಅಧ್ಯಕ್ಷ ಅರುಣ ಬೂಬಾಟಿ, ತಹಶೀಲ್ದಾರ ವಿದ್ಯಾಧರ ಗುಳಗುಳಿ, ಆಶ್ರಯ ಸಮಿತಿ ಸದಸ್ಯರಾದ ಪರಶುರಾಮ ಹರ್ಲಿ, ಜಿ.ಡಿ.  ಗಂಗಾಧರ, ವಿಮಲಾಬಾಯಿ ವಡ್ಡರ, ಗುಲಾಭಶಾ ಲತೀಪನವರ ಇದ್ದರು. 

ಬಡವರಿಗೆ ಹೊರೆಯಾಗದ ಹಾಗೇ ನೋಡಿಕೊಳ್ಳಲು ಮರುಟೆಂಡರ್‌ ಕರೆಯಲಾಗಿದ್ದು ಅದನ್ನು ಸಹ ಕೆಲವೇ ದಿನಗಳಲ್ಲಿ ಸರಿಪಡಿಸಿ ಮುಂದಿನ ಕಾಮಗಾರಿಗೆ ಅನುವು ಮಾಡಿಕೊಡಲಾಗುವುದು. ಗುಡ್ನಾಪುರ ಬ್ಲಾಕ್‌ ನಂ. 36/1ರಲ್ಲಿರುವ 1.09 ಎಕರೆ ಭೂಮಿಯಲ್ಲಿ 20×30 ಅಳತೆಯ 27 ನಿವೇಶನ ರಚಿಸಿ ಅರ್ಹರಿಗೆ ವಿತರಿಸಲಾಗುವುದು. 
ಆರ್‌.ವಿ.ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next