Advertisement

Ram Mandir; ಕರಾವಳಿಯ 1,400 ರಾಮಭಕ್ತರು ಅಯೋಧ್ಯೆಗೆ

12:24 AM Mar 07, 2024 | Team Udayavani |

ಮಂಗಳೂರು: ಬಿಜೆಪಿ ವತಿಯಿಂದ ಅಯೋಧ್ಯೆ ರಾಮಮಂದಿರ ದರ್ಶನ ಅಭಿಯಾನದ ಮೊದಲ ಹಂತದ ಕೊನೆಯ ರೈಲು 1,400 ಮಂದಿ ಯಾತ್ರಿಕರೊಂದಿಗೆ ಬುಧವಾರ ಮಂಗಳೂರಿನಿಂದ ತೆರಳಿದೆ.

Advertisement

ರಾಜ್ಯದಿಂದ ಕಳೆದ ಒಂದು ತಿಂಗಳಲ್ಲಿ 12 ರೈಲುಗಳ ಮೂಲಕ ರಾಜ್ಯದ 20 ಸಾವಿರ ಮಂದಿ ರಾಮ ಭಕ್ತರು ಅಯೋಧ್ಯೆಗೆ ತೆರಳಿ ಶ್ರೀರಾಮ ದೇವರ ದರ್ಶನ ಮಾಡಿದ್ದಾರೆ ಎಂದು ರಾಮಮಂದಿರ ದರ್ಶನ ಅಭಿಯಾನ ರಾಜ್ಯ ಸಂಚಾಲಕ ಜಗದೀಶ್‌ ಹಿರೇಮನಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಿಜೆಪಿ ಆಯೋಜಿಸಿರುವ ರಾಮಮಂದಿರ ದರ್ಶನ ಅಭಿಯಾನದಂಗವಾಗಿ ಆಸಕ್ತ ಭಕ್ತರಿಂದ ರೈಲು ಪ್ರಯಾಣದ ವೆಚ್ಚವಾಗಿ 3 ಸಾವಿರ ರೂ. ಪಾವತಿಸಿಕೊಂಡು “ಆಸ್ಥಾ’ ಹೆಸರಿನ ವಿಶೇಷ ರೈಲಿನ ಮೂಲಕ ಅಯೋಧ್ಯೆ ಯಾತ್ರೆ ಆಯೋಜಿಸಲಾಗಿದೆ. ಎರಡನೇ ಹಂತದ ಅಯೋಧ್ಯೆ ದರ್ಶನ ಲೋಕಸಭಾ ಚುನಾವಣೆ ಬಳಿಕ ಮುಂದುವರಿಯಲಿದೆ ಎಂದು ವಿವರಿಸಿದರು.

1400 ಮಂದಿ ಯಾತ್ರಿಗಳು
ಮಂಗಳೂರು ಸೆಂಟ್ರಲ್‌ನಿಂದ ಬುಧವಾರ ಹೊರಟ ವಿಶೇಷ ರೈಲಿನಲ್ಲಿ 1,400 ಮಂದಿ ಅಯೋಧ್ಯೆಗೆ ತೆರಳಿದ್ದಾರೆ. ದಕ್ಷಿಣ ಕನ್ನಡದ 640 ಮಂದಿ, ಉಡುಪಿಯ 400 ಮಂದಿ ಇದ್ದಾರೆ. ಉಳಿದ ಪ್ರಯಾಣಿಕರು ಉತ್ತರ ಕನ್ನಡ ಜಿಲ್ಲೆಯವರಾಗಿದ್ದಾರೆ. ಮಂಗಳೂರಿನಿಂದ ಬುಧವಾರ ಹೊರಟ ರೈಲು ಮಾ. 9ರಂದು ಅಯೋಧ್ಯೆ ತಲುಪಲಿದೆ. ಮಾ. 10ರಂದು ವಾಪಸ್‌ ಹೊರಟು ಮಾ.13ರಂದು ಮಂಗಳೂರು ತಲುಪಲಿದೆ.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಅಭಿಯಾನದ ರಾಜ್ಯ ಸಹಸಂಚಾಲಕ ವಿಜಯೇಂದ್ರ, ದ.ಕ. ಜಿಲ್ಲಾ ಸಂಚಾಲಕಿ ಕಸ್ತೂರಿ ಪಂಜ, ಸಹ ಸಂಚಾಲಕರಾದ ರಾಮದಾಸ ಬಂಟ್ವಾಳ, ದೇವದಾಸ ಶೆಟ್ಟಿ, ಜಿತೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next