Advertisement
2020ರಲ್ಲಿ ಕೆಲವು ದೇವಾಲಯ ತೆರವು: 2009ರ ಹಿಂದೆ ನಿರ್ಮಿಸಲಾದ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವು, ಸ್ಥಳಾಂತರಸಂಬಂಧ ಜಿಲ್ಲೆಯಾದ್ಯಂತ ಸಾರ್ವಜನಿಕ ರಸ್ತೆ, ಉದ್ಯಾನ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡ ಗಳನ್ನು ಗುರುತಿಸಲಾಗಿತ್ತು. ಅದರಂತೆ 2020ರಲ್ಲಿ ಕೆಲವು ದೇವಾಲಯ ತೆರವುಗೊಳಿಸಲಾಗಿತ್ತು.
Related Articles
Advertisement
13 ದೇವಾಲಯ ಸ್ಥಳಾಂತರ: ಜಿಲ್ಲೆಯಲ್ಲಿರುವ 13 ದೇವಾಲಯ ಸ್ಥಳಾಂತರ ಮಾಡಲಾಗಿದೆ. ಇವುಗಳು ಸಾರ್ವಜನಿಕವಾಗಿ ಸ್ವಲ್ಪ ತೊಂದರೆ ಇದ್ದುದ್ದರಿಂದ ಹಾಗೂ ಸಾರ್ವಜನಿಕರು, ಭಕ್ತರ ಒತ್ತಡಕ್ಕೆ ಮಣಿದು ಸ್ಥಳಾಂತರ ಮಾಡಲಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ ಜಿಲ್ಲೆ ಯಾದ್ಯಂತ ಸಾರ್ವಜನಿಕವಾಗಿ ಯಾವುದೇ ತೊಂದರೆ ಇಲ್ಲದ ಹಾಗೂ ಕೆಟಿಸಿಪಿ ಕಾಯ್ದೆ ಮುನಿಸಿಪಾಲಿಟಿ ಕಾಯ್ದೆ, ಪುರಸಭೆ, ಸ್ಥಳೀಯ ಕಾನೂನು ಕಾಯ್ದೆಗಳಿಗೆ ವ್ಯತಿರಿಕ್ತವಾಗಿಲ್ಲದಿರುವ ಕಾರಣ ಅನಧಿಕೃತ 51 ದೇವಾಲಯಗಳನ್ನು ಅ ಧಿಕೃತಗೊಳಿಸಲಾಗಿದೆ. ಅಲ್ಲದೆ, 13 ದೇವಾಲಯ ಸ್ಥಳಾಂತರ ಮಾಡಿರುವುದರಿಂದ ಒಟ್ಟು 64 ದೇವಾಲಯ ಅಧಿಕೃತಗೊಳಿಸಲಾಗಿದೆ.
ಜಿಲ್ಲೆಯಲ್ಲಿ ಅಧಿಕೃತವಾದ ದೇವಾಲಯಗಳ ವಿವರಮಂಡ್ಯ ನಗರದ ರೈಲ್ವೆ ಸ್ಟೇಷನ್‌ನ ಮುಂಭಾಗದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ, ಕಲ್ಲಹಳ್ಳಿಯ ಶ್ರೀ ಆದಿಶಕ್ತಿ ಮಾರಮ್ಮ, ಹಳೇ ತಾಲೂಕು ಕಚೇರಿ ಆವರಣದ ಶ್ರೀ ಚಾಮುಂಡೇಶ್ವರಿ, ಕೆಎಚ್‌ಬಿ ಬಡಾವಣೆಯ ಗಣೇಶ, ಶಂಕರನಗರದ ಮಹದೇಶ್ವರ, ಸ್ವರ್ಣಸಂದ್ರದ ಎಡಮುರಿ ಗಣಪತಿ, ಅಬಕಾರಿ ಕಚೇರಿ ಮುಂಭಾಗದ ಶ್ರೀ ಸುಬ್ರಹ್ಮಣ್ಯ ನಾಗರಕಟ್ಟೆ, ಸಕ್ಕರೆ ನಗರದ ಶ್ರೀ ಮಾರಮ್ಮ, ಹೌಸಿಂಗ್ ಬೋರ್ಡ್ ಕಾಲೋನಿಯ ಶ್ರೀ ಗಣಪತಿ-ಬಸವೇಶ್ವರ, ಕುವೆಂಪು ನಗರದ ಶ್ರೀ ಪ್ರಶಾಂತ ಬಲಮುರಿ ಗಣಪತಿ ಅ ಧಿಕೃತಗೊಳಿಸಲಾಗಿದೆ. ಸಂತೆಮಾಳದಲ್ಲಿದ್ದ ಶ್ರೀ ಮಾರಮ್ಮ ಕಾಳಮ್ಮ ದೇವಾಲಯವನ್ನು ತೆರವುಗೊಳಿಸಿರುವುದರಿಂದ ಪಟ್ಟಿಯಿಂದ ಕೈಬಿಡಲಾಗಿದೆ. ಅದರಂತೆ ಮದ್ದೂರಿನ ಶ್ರೀ ದಂಡಿನ ಮಾರಮ್ಮ, ಶಿವಪುರದ ಶ್ರೀ ಅರಳಿಕಟ್ಟೆ ಬಸವೇಶ್ವರ ದೇವಸ್ಥಾನ ಅಧಿಕೃತಗೊಳಿಸಲಾಗಿದೆ. ಉಳಿದಂತೆ ಚನ್ನೇಗೌಡನದೊಡ್ಡಿಯ ಮಹದೇಶ್ವರ ದೇವಸ್ಥಾನ ತೆರವುಗೊಳಿಸಲಾಗಿದೆ. ಶ್ರೀ ಆಂಜನೇಯಸ್ವಾಮಿ ದೇವಾಲಯ ಖಾಸಗಿ ಸ್ವತ್ತಾಗಿರುವುದರಿಂದ ತೆರವು ಪಟ್ಟಿಯಿಂದ ಕೈಬಿಡಲಾಗಿದೆ. ಶಿವಪುರ ಶ್ರೀ ಬಸವೇಶ್ವರ ದೇವಸ್ಥಾನ ಕೈಬಿಡಲಾಗಿದೆ. ಮಳವಳ್ಳಿಯ ಗಾಜನೂರಿನ ಶ್ರೀ ಆಂಜನೇಯಸ್ವಾಮಿ, ಪಟ್ಟಣದ ಮಹದೇಶ್ವರ, ಜಾಲಿಮರದ ಕಟ್ಟೆ, ಅಂಕನಹಳ್ಳಿಯ ಕುಳ್ಳಿàರಮ್ಮ, ಕೋಡಿಪುರದ ಕ್ಯಾತಮ್ಮ, ಹಾಡ್ಲಿ ಗ್ರಾಮದ
ಬಸವೇಶ್ವರ, ಆಗಸನಪುರದ ಬಸವೇಶ್ವರ, ಕಿರುಗಾವಲಿನ ನಾಗರಕಲ್ಲು ಅರಳೀಕಟ್ಟೆ, ರಾಮಂದೂರಿನ ಕಾಳಿಕಾಂಭ, ಮಿಕ್ಕೆರೆಯ ವೀರ ಭದ್ರೇಶ್ವರ, ಬಂಡೂರಿನ ಬಸವೇಶ್ವರ, ಮಲಿಯೂರಿನ ನಾಗರಕಲ್ಲು ವಿನಾಯಕ, ಬೆಂಡರವಾಡಿಯ ಗಣೇಶ ದೇವಸ್ಥಾನ, ಕಲ್ಕುಣಿಯಏಳೂರಮ್ಮ. ವಿಜಯನಗರೇಶ್ವರಿ, ರಾಗಿಬೊಮ್ಮನಹಳ್ಳಿಯ ಬೊಮ್ಮಲಿಂಗೇಶ್ವರ, ಹೊನಗನಹಳ್ಳಿಯ ಚೌಡೇಶ್ವರಿ, ದೇಶಹಳ್ಳಿಯ ರಾಮ ಮಂದಿರ, ದೇವಮ್ಮ, ಮಸೀದಿ, ಸುಜ್ಜಲೂರಿನ ಮಾರಿಗುಡಿ, ಶನೇಶ್ವರ, ಚಿಕ್ಕವಾಗಿಲು ಬಸವೇಶ್ವರಮಠ, ಮುಟ್ಟನ ಹಳ್ಳಿಯ ದೊಡ್ಡಮ್ಮ ತಾಯಿ, ಬಿ.ಜಿ.ಪುರದ ಶನೇಶ್ವರ, ಮಂಟೇಸ್ವಾಮಿ, ದಾಸನದೊಡ್ಡಿಯ ಬಸವೇಶ್ವರ, ನೆಟ್ಕಲ್‌ನ ಮಹದೇಶ್ವರ.ದಬ್ಬಳ್ಳಿಯ 2 ಶನೇಶ್ವರ ದೇವಾಲಯ, ಶಿರಮಹಳ್ಳಿಯ ಮಾರಮ್ಮ, ಬೆಳಕವಾಡಿಯ ಸಿದ್ದಪ್ಪಾಜಿ, ಹಾಲುಕಲ್ಲು ಬಸವೇಶ್ವರ, ಬಾಚಹಳ್ಳಿಯ ಆಂಜನೇಯ, ಲಿಂಗಪಟ್ಟಣದ ಶನೇಶ್ವರ, ಹಲಗೂರಿನ ಕಾಳಮ್ಮ ದೇವಾಲಯಗಳನ್ನು ಅಧಿಕೃತಗೊಳಿಸಲಾಗಿದೆ. ಕೆ.ಆರ್.ಪೇಟೆ ತಾಲೂಕಿನ ಬೊಮ್ಮೇನಹಳ್ಳಿಯ ಶನೇಶ್ವರ, ಬಸವೇಶ್ವರ, ರಂಗನಾಥಪುರ ಕ್ರಾಸ್‌ನ ಚಾಮುಂಡೇಶ್ವರಿ, ಆಂಜನೇಯ, ನಾರ್ಗೋನಹಳ್ಳಿಯ ಆಂಜನೇಯ, ಪಟ್ಟಣದ ಬಸವನ ಕಟ್ಟೆ, ಹೊಸಹೊಳಲುವಿನ ಬಸವೇಶ್ವರ, ಹರಳಹಳ್ಳಿಯ ಬಸವೇಶ್ವರ, ಶೀಳನೆರೆಯ ಬಸವೇಶ್ವರ ದೇವಾಲಯಗಳನ್ನು ಅಧಿಕೃತಗೊಳಿಸಲಾಗಿದೆ. ಈಗಾಗಲೇ ಅನಧಿಕೃತವಾಗಿ ದೇವಾಲಯಗಳನ್ನು ತೆರವುಗೊಳಿಸಲಾಗಿದೆ. ಈ ವರ್ಷವೂ ಅನಧಿಕೃತ ದೇವಾಲಯಗಳ ಬಗ್ಗೆ ಪರಿಷ್ಕರಣೆ
ನಡೆಸಲಾಗಿದ್ದು, ಸಾರ್ವಜನಿಕವಾಗಿ ಯಾವುದೇ ತೊಂದರೆ ಇಲ್ಲದಿರುವುದರಿಂದ 51 ದೇವಾಲಯಗಳನ್ನು ಅಧಿಕೃತಗೊಳಿಸಲಾಗಿದೆ. ಇದರ ಪ್ರಕ್ರಿಯೆ ಆಡಳಿತಾತ್ಮಕ ವಾಗಿ ಚರ್ಚೆ ನಡೆಸಿ ಮುಂದಿನ ಕ್ರಮ ವಹಿಸಲಾಗುವುದು.
– ಅರುಣ್‌ಸಾಗರ್, ಶಿರಸ್ತೇದಾರ್,
ಧಾರ್ಮಿಕ ದತ್ತಿ ವಿಭಾಗ, ಮಂಡ್ಯ – ಎಚ್.ಶಿವರಾಜ