ರಾಜಸ್ಥಾನ : ತಾಯಿಯ ಜೊತೆ ಮೇಕೆ ಮೇಯಿಸಲು ಹೋಗಿ ನಾಪತ್ತೆಯಾಗಿದ್ದ ಯುವತಿಯ ದೇಹ ತನ್ನದೇ ಊರಿನಲ್ಲಿದ್ದ ಇಟ್ಟಿಗೆ ಗೂಡಿನ ನಡುವೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ರಾಜಸ್ಥಾನದ ಭಿಲ್ವಾರದಲ್ಲಿ ಘಟನೆ ನಡೆದಿದ್ದು. ಬುಧವಾರ ತನ್ನ ತಾಯಿಯ ಜೊತೆ ಮೇಕೆ ಮೇಯಿಸಲು ಹೋಗಿದ್ದ ವೇಳೆ ಯುವತಿ ನಾಪತ್ತೆಯಾಗಿದ್ದಳು, ಮಗಳು ಇಲ್ಲೇ ಎಲ್ಲೋ ಇರಬೇಕು ಮನೆಗೆ ಬರುತ್ತಾಳೆ ಎಂದು ಮನೆಗೆ ಹೋಗಿದ್ದರು ಆದರೆ ಸಂಜೆಯಾದರೂ ಮಗಳು ಮನೆಗೆ ಬಾರದೇ ಇರುವುದನ್ನು ಕಂಡು ಭಯಗೊಂಡ ತಾಯಿ ಮನೆಯವರಲ್ಲಿ ವಿಚಾರ ಹೇಳಿದ್ದಾರೆ, ಬಳಿಕ ನೆರೆಹೊರೆಯವರಲ್ಲೂ ವಿಚಾರಿಸಿದ್ದಾರೆ ಆಗಲೂ ಮಾಹಿತಿ ಸಿಗದೇ ಇದ್ದಾಗ ಊರಿನವರು ಸೇರಿ ಹುಡುಕಾಟ ನಡೆಸಿದ್ದಾರೆ ಆದರೆ ಎಲ್ಲೂ ಯುವತಿಯ ಸುಳಿವು ಸಿಗಲಿಲ್ಲ.
ಗುರುವಾರ ಬೆಳಿಗ್ಗೆ ಊರಿನ ಗದ್ದೆಯ ಬಳಿ ಇರುವ ಇಟ್ಟಿಗೆ ಗೂಡಿನ ಬಳಿ ಯುವತಿಯ ಮೃತ ದೇಹ ಸುಟ್ಟುಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ, ದೇಹ ಸಂಪೂರ್ಣ ಸುಟ್ಟು ಹೋಗಿದ್ದು ಸ್ಥಳದಲ್ಲಿ ಸಿಕ್ಕಿದ ಕಾಲುಂಗುರ, ಧರಿಸಿದ್ದ ಬೂಟು, ಹಾಗೂ ಮೂಳೆಗಳ ಆಧಾರದಲ್ಲಿ ಯುವತಿಯದ್ದೇ ದೇಹ ಎಂದು ಪೋಷಕರು ಒಪ್ಪಿಕೊಂಡಿದ್ದಾರೆ.
ಅಲ್ಲದೆ ಹತ್ಯೆ ಮಾಡುವ ಮುನ್ನ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರಬಹುದು ಎಂದು ಶಂಕಿಸಲಾಗಿದ್ದು. ಘಟನೆಗೆ ಸಂಬಂಧಿಸಿ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇತ್ತ ಯುವತಿಯ ಹತ್ಯೆ ನಡೆದಿರುವುದು ಗೊತ್ತಾಗುತ್ತಲೇ ಊರಿನ ಜನ ನ್ಯಾಯ ಸಿಗುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ ನಾಪತ್ತೆ ಪ್ರಕರಣ ದಾಖಲಿಸಿದ ವೇಳೆ ಪೊಲೀಸರು ಸರಿಯಾಗಿ ಸ್ಪಂದಿಸಿಲ್ಲ ಎಂದು ಪೋಷಕರು ಪೊಲೀಸರ ಕಾರ್ಯ ವೈಖರಿಯನ್ನು ಟೀಕಿಸಿದ್ದಾರೆ. ಇತ್ತ ಪ್ರತಿಭಟನೆ ನಡೆಯುತ್ತಿದ್ದಂತೆ ದೊಡ್ಡ ದೊಡ್ಡ ರಾಜಕೀಯ ನಾಯಕರು ಸ್ಥಳದಲ್ಲಿ ಬೀಡುಬಿಟ್ಟು ನ್ಯಾಯ ಸಿಗುವಂತೆ ಆಗ್ರಹಿಸಿದ್ದಾರೆ . ಅಲ್ಲದೆ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಹಿಳೆಯರು, ಯುವತಿಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸರಕಾರವನ್ನು ದೂರಿದ್ದಾರೆ.
ಇದನ್ನೂ ಓದಿ: Inspiration: 78ನೇ ವಯಸ್ಸಿನಲ್ಲೂ ಸಮವಸ್ತ್ರ ತೊಟ್ಟು 9ನೇ ತರಗತಿಯಲ್ಲಿ ಪಾಠ ಕೇಳುವ ವೃದ್ಧ