Advertisement

ಭಿವಂಡಿ: 14ರ ಬಾಲಕಿಯ ಮೇಲೆ ಆಕೆಯ ಮನೆಯಲ್ಲೇ ಗ್ಯಾಂಗ್‌ ರೇಪ್‌, ಕೊಲೆ

11:26 AM Aug 24, 2018 | Team Udayavani |

ಥಾಣೆ : ಮಹಾರಾಷ್ಟ್ರದಲ್ಲಿ ಥಾಣೆ ಸಮೀಪದ ಭಿವಂಡಿಯಲ್ಲಿ 14 ವರ್ಷದ ಬಾಲಕಿಯನ್ನು ಅಪರಿಚಿತ ದುಷ್ಕರ್ಮಿಗಳು ಆಕೆಯ ಮನೆಯಲ್ಲೇ ಅತ್ಯಾಚಾರವೆಸಗಿ ಕೊಲೆಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ವಿದ್ಯುನ್ಮಗ್ಗ ಪಟ್ಟಣವಾಗಿರುವ ಭಿವಂಡಿಯಲ್ಲಿನ ತನ್ನ ಮನೆಯಲ್ಲಿ ಬಾಲಕಿಯು ಒಬ್ಬಳೇ ಇದ್ದ ವೇಳೆ ಆಕೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿದೆ ಎಂದು ಥಾಣೆ ಪೊಲೀಸ್‌ ಪಿಆರ್‌ಓ ಸುಖದ ನಾರ್ಕರ್‌ ತಿಳಿಸಿದ್ದಾರೆ. 

ಬಾಲಕಿಯ ಸಹೋದರಿಯು ಮನೆಗೆ ಮರಳಿದಾಗಲೇ ಈ ಘಟನೆ ಬೆಳಕಿಗೆ ಬಂತು. ಇದರಲ್ಲಿ ಎಷ್ಟು ಮಂದಿ ದುಷ್ಕರ್ಮಿಗಳು ಭಾಗಿಯಾಗಿದ್ದರು ಎಂಬುದು ಗೊತ್ತಾಗಿಲ್ಲ. ಬಾಲಕಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next