Advertisement

ಅಭಿಯಾನದಲ್ಲಿ 14 ಸಾವಿರ ಮಂದಿ:ರಘು

08:58 PM Apr 08, 2019 | Team Udayavani |

ಸಸಿಹಿತ್ಲು: ಜಿಲ್ಲೆಯ ಮತದಾರರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವಾಗಿ ಕಡಲ ತಡಿಯಲ್ಲಿ ಪ್ರಜಾಸಂಗಮವಾಗಿ ನಿರ್ಮಾಣವಾದ ಬೃಹತ್‌ ಮಾನವ ಸರಪಳಿಯಲ್ಲಿ ಸಸಿಹಿತ್ಲುವಿನಿಂದ ಸುರತ್ಕಲ್‌ವರೆಗೆ 14 ಕಿ.ಮೀ.ಗೆ ಉದ್ದದಲ್ಲಿ ಒಟ್ಟು 14 ಸಾವಿರಕ್ಕಿಂತಲೂ ಹೆಚ್ಚು ಮಂದಿ ಮುಕ್ತವಾಗಿ ಭಾಗವಹಿಸಿದ್ದಾರೆಎಂದು ಮಂಗಳೂರು ತಾ.ಪಂ.ನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ರಘು ಎ.ಇ. ಹೇಳಿದರು.

Advertisement

ಸಸಿಹಿತ್ಲುವಿನ ಮುಂಡ ಬೀಚ್‌ನಲ್ಲಿ ನಡೆದ ಮತದಾನದ ಜಾಗೃತಿ ಕಾರ್ಯಕ್ರಮವಾಗಿ ಪ್ರಜಾಸಂಗಮ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯ ಸಂಘ ಸಂಸ್ಥೆಗಳ ಸಹಕಾರ ಹಾಗೂ ಪ್ರಜ್ಞಾವಂತ ನಾಗರಿಕರ ಸಹಕಾರದಲ್ಲಿ ಈ ಸಾಧನೆ ಮಾಡಲು ಸಾಧ್ಯವಾಗಿದೆ ಈ ರೀತಿಯ ಕಾರ್ಯಕ್ರಮ ಇದೇ ಮೊದಲ ಬಾರಿ ಆಯೋಜಿಸಲಾಗಿತ್ತು. ತಲಪಾಡಿ, ಉಳ್ಳಾಲ, ಬೆಂಗ್ರೆ, ತಣ್ಣೀರುಬಾವಿ, ಪಣಂಬೂರು, ಸಸಿಹಿತ್ಲು ಮುಖ್ಯ ಪ್ರದೇಶಗಳ ಮೂಲಕ ಒಟ್ಟು 40 ಕಿ.ಮೀ. ಉದ್ದದಲ್ಲಿ ಮಾನವ ಸರಪಳಿ ನಿರ್ಮಾಣ ಮಾಡಲಾಯಿತು ಎಂದರು.

ಮಂಗಳೂರಿನ ನೆಹರೂ ಯುವ ಕೇಂದ್ರದ ರಘುವೀರ್‌ ಸೂಟರ್‌ಪೇಟೆ ಅವರು ಮತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌, ಜಿಲ್ಲಾ ಸೀÌಪ್‌ ಸಮಿತಿ, ಮಂಗಳೂರು ನೆಹರೂ ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆಸಲಾಯಿತು.

Advertisement

ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ನ್ಪೋಟ್ಸ್‌ ಕ್ಲಬ್‌ನ ಕಾರ್ಯದರ್ಶಿ ಸಂತೋಷ್‌ಕುಮಾರ್‌ ದೇವಾಡಿಗ ಪ್ರತಿಜ್ಞಾ ವಿಧಿ ಬೋಧಿಸಿದರು.

ಚೇಳಾçರುವಿನ ಗ್ರಾಮ ಪಂಚಾಯತ್‌ನ ಪಿಡಿಒ ವಿಶ್ವನಾಥ್‌, ಬಳುRಂಜೆ ಪಿಡಿಒ ಯಶವಂತ್‌, ಶಿರ್ತಾಡಿ ಪಂಚಾಯತ್‌ನ ಕಾರ್ಯದರ್ಶಿ ರವಿ, ಬಡಗ ಎಡಪದವಿನ ಪ್ರತಿಭಾ ಕುಡ್ತಡ್ಕ, ಜೋಕ ಟ್ಟೆಯ ಆಬ್ದುಲ್ಲಾ ಅಸಫ್‌, ಹಳೆಯಂಗಡಿ ಕಾರ್ಯದರ್ಶಿ ಶ್ರೀಶೈಲಾ ಅವರು ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದರು.

ಬೀದಿ ನಾಟಕ
ಈ ಸಂದರ್ಭ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ನ್ಪೋಟ್ಸ್‌ ಕ್ಲಬ್‌ ಹಾಗೂ ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿಯ ಸದಸ್ಯರು ಮತದಾನ ಜಾಗೃತಿಯ ಬೀದಿ ನಾಟಕವನ್ನು ಕಡಲ ಕಿನಾರೆಯಲ್ಲಿ ಪ್ರದರ್ಶಿಸಿದರು.

ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್‌, ಹಳೆಯಂಗಡಿ ಯುವತಿ ಮತ್ತು ಮಹಿಳಾ ಮಂಡಳಿ, ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ನ್ಪೋಟ್ಸ್‌ ಕ್ಲಬ್‌, ತೋಕೂರು ಯುವಕ ಮತ್ತು ಮಹಿಳಾ ಸಂಘ, ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿ, ತೋಕೂರು ಗಜಾನನ ನ್ಪೋಟ್ಸ್‌ ಕ್ಲಬ್‌, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತೋಕೂರು ಶ್ರೀದೇವಿ ಮಹಿಳಾ ಮಹಿಳಿ, ಪಕ್ಷಿಕೆರೆ ಸೈ. ಜೂಡ್‌ ಚರ್ಚ್‌, ಸಸಿಹಿತ್ಲು ಯುವಕ ಮತ್ತು ಯುವತಿ ಮಂಡಲ, ಸಸಿಹಿತ್ಲು ಹಳೇ ವಿದ್ಯಾರ್ಥಿ ಸಂಘ, ಸಸಿಹಿತ್ಲು ಉತ್ಥಾನ ಬಳಗ, ಲಚ್ಚಿಲ್‌ ಮೊಗವೀರ ಸಭಾ, ಕದಿಕೆ ಮೊಗವೀರಾ ಸಭಾ, ಅಂಗನವಾಡಿ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸ್ತ್ರೀ ಶಕ್ತಿ ಸದಸ್ಯರು, ಸ್ವಸಹಾಯ ಸಂಘದ ಸದಸ್ಯರು, ಮುಕ್ಕ ಶ್ರೀನಿವಾಸ್‌ ಕಾಲೇಜಿನ ವಿದ್ಯಾರ್ಥಿಗಳು, ಮಂಗಳೂರು ತಾಲೂಕಿನ 42 ಗ್ರಾಮ ಪಂಚಾಯತ್‌ನ ಪಿಡಿಒ, ಕಾರ್ಯದರ್ಶಿ, ಸಿಬಂದಿಗಳು, ಕಂದಾಯ ಇಲಾಖೆಯ ಸಿಬಂದಿಗಳು ಹಾಗೂ ನಾಗರಿಕರು ಮೊದಲಾದ ವರು ಭಾಗವಹಿಸಿದ್ದರು.

ಪಡುಪಣಂಬೂರು ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅನಿತಾ ಕ್ಯಾಥರಿನ್‌ ಕಾರ್ಯ ಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next