ಬೆಂಗಳೂರು “ಉದಯವಾಣಿ’ ಕಚೇರಿ ಯಲ್ಲಿ ಬುಧವಾರ ನಡೆದ “ಸಂವಾದ” ದಲ್ಲಿ ಮಾತನಾಡಿದ ಅವರು, ತಾವು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಒಂದೂವರೆ ವರ್ಷದಲ್ಲಿ 14 ಸಾವಿರ ಪ್ರಕರಣಗಳು ದಾಖಲಾಗಿವೆ. 6,220 ಪ್ರಕರಣ ಇತ್ಯರ್ಥಗೊಳಿಸಲಾಗಿದೆ ಎಂದರು. 16,704 ಪ್ರಕರಣಗಳು ಬಾಕಿ ಇವೆ. ಎಸಿಬಿ ರದ್ದುಗೊಂಡು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಬಲ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಸಿಕ್ಕಿದ ಬಳಿಕ ಒಟ್ಟು 444 ಪ್ರಕರಣ ದಾಖಲಾಗಿದೆ ಎಂದರು.
Advertisement
ಅಕ್ರಮ ಆಸ್ತಿ, 87 ದಾಳಿಆದಾಯಕ್ಕೆ ಮೀರಿದ ಆಸ್ತಿ ಸಂಗ್ರಹಣೆಗೆ ಸಂಬಂಧಿಸಿ 87 ದಾಳಿಗಳು ನಡೆದಿವೆ. ಸರಕಾರಿ ಅಧಿ ಕಾರಿ ಗಳು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಒಟ್ಟು 307 ಟ್ರ್ಯಾಪ್ ನಡೆಸಿದ್ದಾರೆ ಎಂದು ಲೋಕಾ ಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ವಿವರಿಸಿದರು. ಇತರ 50 ಪ್ರಕರಣ ದಾಖಲಾಗಿವೆ. ಎಸಿಬಿ ರದ್ದಾದ ಬಳಿಕ ಅಲ್ಲಿ ದಾಖಲಾಗಿದ್ದ 1,171 ಪ್ರಕರಣ ಗಳು ತನಿಖೆ ಗಾಗಿ ಲೋಕಾಯುಕ್ತ ಅಂಗಳಕ್ಕೆ ಬಂದಿವೆ ಎಂದರು.
ಲೋಕಾಯುಕ್ತದಲ್ಲಿ ತನಿಖೆ ನಡೆಸಲು ಬೇಕಾದ ಮೂಲಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಮಿತಿ ಮಾಡಿದ್ದೇವೆ. ಅಗತ್ಯ ಸೌಕರ್ಯ ಒದಗಿಸುವಂತೆ ಸರಕಾರಕ್ಕೆ ಪತ್ರ ಬರೆದಿದ್ದೇವೆ. ಸರಕಾರ ಹಂತ ಹಂತವಾಗಿ ಸಿಬಂದಿ ಒದಗಿಸುತ್ತಿದೆ. ಎಸಿಬಿ ರದ್ದಾದಾಗ ಅಲ್ಲಿನ ಪ್ರಕರಣಗಳನ್ನೆಲ್ಲ ಲೋಕಾಯುಕ್ತಕ್ಕೆ ವರ್ಗಾಯಿಸಿದರು. ಆದರೆ ಶೇ. 50ರಷ್ಟು ಸಿಬಂದಿಯನ್ನು ಲೋಕಾಯುಕ್ತಕ್ಕೆ ಕಳುಹಿಸಿದ್ದಾರೆ. ಈಗಿರುವ ಲೋಕಾಯುಕ್ತ ಕಚೇರಿಯಲ್ಲಿ ಎರಡು ಮಹಡಿಯನ್ನು ಕೊಡುವಂತೆ ಕೇಳಿದ್ದೇವೆ. ಲೋಕಾಯುಕ್ತ ಕಚೇರಿ ಪಕ್ಕದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಖನಿಜ ಭವನದಲ್ಲಿ ಜಾಗ ಕೊಟ್ಟಿದ್ದಾರೆ. ಈ ಎರಡು ಕಟ್ಟಡಗಳ ಜಾಗ ಉಪಯೋಗಿಸಿದರೂ ಕಚೇರಿ ಸ್ಥಳ ಸಾಲುತ್ತಿಲ್ಲ. ಲೋಕಾಯುಕ್ತದಲ್ಲಿ ಆನ್‌ಲೈನ್, ಡಿಜಿಟಲೈಸೇಶನ್ ವ್ಯವಸ್ಥೆಗೆ ಹೆಚ್ಚಿನ ಒತ್ತು ಕೊಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.