Advertisement

14 ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಬಡ್ತಿ

09:46 AM Jan 01, 2018 | |

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ 30 ಮಂದಿ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಜತೆಗೆ, 14 ಮಂದಿ ಹಿರಿಯ ಐಪಿಎಸ್‌ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಾಲ್ವರಿಗೆ ಹೆಚ್ಚುವರಿ ಪೊಲೀಸ್‌
ಮಹಾನಿರ್ದೇಶಕರು, ಮೂವರು ಐಜಿಪಿ ಹಾಗೂ ಏಳು ಮಂದಿಯನ್ನು ಡಿಐಜಿಗಳನ್ನಾಗಿ ಮುಂಬಡ್ತಿ ನೀಡಲಾಗಿದೆ.

Advertisement

ಮುಂಬಡ್ತಿ-ಡಾ ಎಂ.ಎ.ಸಲೀಂ (ಅಪರಾಧ ಮತ್ತು ತಾಂತ್ರಿಕ ಸೇವೆಗಳು ಹಾಗೂ ಸಂಚಾರ ಮತ್ತು ರಸ್ತೆ ಸುರಕ್ಷಾ ಆಯುಕ್ತರು), ಕೆ.ಎಸ್‌.ಆರ್‌.ಚರಣ್‌ ರೆಡ್ಡಿ (ಪೊಲೀಸ್‌ ತರಬೇತಿ), ಕೆ.ರಾಮಚಂದ್ರರಾವ್‌ (ಮಾನವ ಹಕ್ಕುಗಳು ಹಾಗೂ ನಾಗರೀಕ ಹಕ್ಕುಗಳ
ನಿರ್ದೇಶನಾಲಯ), ಮಾಲಿನಿ ಕೃಷ್ಣಮೂರ್ತಿ(ಲಾಜಿಸ್ಟಿಕ್‌ ಮತ್ತು ಆತ್ಯಾಧುನಿಕ ವಿಭಾಗ) ಇವರಿಗೆ ಹೆಚ್ಚುವರಿ ಪೊಲೀಸ್‌
ಮಹಾನಿರ್ದೇಶಕ (ಎಡಿಜಿಪಿ) ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಅದೇ ರೀತಿ ಮೂವರು ಅಧಿಕಾರಿಗಳಿಗೆ ಐಜಿಪಿ ಹುದ್ದೆಗೆ ಮುಂಬಡ್ತಿ ನೀಡಲಾಗಿದ್ದು, ದಿವ್ಯಜ್ಯೋತಿ ರಾಯ್‌(ಐಜಿಪಿ, ಸದ್ಯ ಕೇಂದ್ರ ಸೇವೆಯಲ್ಲಿದ್ದಾರೆ). ಡಿ.ರೂಪಾ(ಗೃಹರಕ್ಷಕ ದಳ ಹೆಚ್ಚುವರಿ ಕಮಾಡೆಂಟ್‌), ಎನ್‌.ಶಿವಪ್ರಸಾದ್‌ (ಐಜಿಪಿ ಬಳ್ಳಾರಿ ವಲಯ).

ಹಾಗೆಯೇ ಏಳು ಮಂದಿಯನ್ನು ಡಿಐಜಿಯಾಗಿ ಮುಂಬಡ್ತಿ ನೀಡಲಾಗಿದೆ. ಸಂದೀಪ್‌ ಪಾಟೀಲ್‌ (ಕೆಎಸ್‌ಆರ್‌ಪಿ,ಬೆಂಗಳೂರು), ಪಿ.ಎಸ್‌.ಹರ್ಷಾ, (ವಾರ್ತಾ ಇಲಾಖೆ ನಿರ್ದೇಶಕರು), ಲಾಬೂರಾವ್‌ (ಸದ್ಯ ಗುಪ್ತಚರ ಇಲಾಖೆ ಕೇಂದ್ರ ಸೇವೆಯಲ್ಲಿದ್ದಾರೆ), ವಿಕಾಸ್‌ ಕುಮಾರ್‌ ವಿಕಾಸ್‌( ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ,), ಟಿ.ಡಿ.ಪವಾರ್‌(ಎಸಿಬಿ), ಅಣ್ಣೆಗೇರಿ ಮಂಜುನಾಥ್‌(ನಾಗರಿಕ ಹಕ್ಕುಗಳ ನಿರ್ದೇ ಶನಾಲಯ), ರವಿಕುಮಾರ್‌ ಎಚ್‌ .ನಾಯಕ್‌(ಗುಪ್ತಚರ ಇಲಾಖೆ) ಮುಂಬಡ್ತಿ ನೀಡಲಾಗಿದೆ. ಇದೇ ವೇಳೆ ಅಭಿಷೇಕ್‌ ಗೋಯಲ್‌, ಕೌಶಲೇಂದ್ರ ಕುಮಾರ್‌, ರಮಣಗುಪ್ತ (ಕೇಂದ್ರ ಸೇವೆಯಲ್ಲಿದ್ದಾರೆ.), ಬಿ.ಆರ್‌.ರವಿಕಾಂತೇಗೌಡ, 
ಆರ್‌.ದಿಲೀಪ್‌, ಎಸ್‌.ಎನ್‌.ಸಿದ್ದರಾಮಪ್ಪ, ಆರ್‌. ರಮೇಶ್‌, ಎಸ್‌.ಡಿ.ಶರಣಪ್ಪ, ಎಂ.ಎನ್‌.ಅನುಚೇತ್‌, ಶಾಂತನು ಸಿನ್ಹಾ, ಬೊರಸೆ ಭೂಷಣ್‌ ಗುಲಾಬ್‌ ರಾವ್‌, ಸಿ. ವಂಶಿ ಕೃಷ್ಣ, ಅಭಿನವ್‌ ಖರೆ, ಬಿ.ರಮೇಶ್‌, ಈಡ ಮಾರ್ಟಿನ್‌, ರವಿ ಡಿ.ಚನ್ನಣ್ಣನವರ್‌ ಇವರಿಗೆ
ಎಸ್ಪಿ ದರ್ಜೆಯಲ್ಲೇ ಮುಂಬಡ್ತಿ(ಕಿರಿಯ ಆಡಳಿತ) ನೀಡಲಾಗಿದ್ದು, ಪ್ರಸ್ತುತ ಸ್ಥಳದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವರ್ಗಾವಣೆ ಅಲೋಕ್‌ ಮೋಹನ್‌(ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಎಸಿಬಿ), ಅಲೋಕ್‌ ಕುಮಾರ್‌(ಉತ್ತರ ವಲಯ ಐಜಿಪಿ, ಬೆಳಗಾವಿ), ಬಿ.ಕೆ.ಸಿಂಗ್‌(ಪಶ್ಚಿಮ ವಲಯ ಹೆಚುrವರಿ ಪೊಲೀಸ್‌ ಆಯುಕ್ತ ಹಾಗೂ ಗೌರಿ ಹತ್ಯೆಯ ಪ್ರಕರಣದ ವಿಶೇಷ ತನಿಖಾ ದಳ), ಎಸ್‌.ಮುರುಗನ್‌(ಈಶಾನ್ಯ ವಲಯ, ಕಲಬುರಗಿ), ಕೆ.ವಿ.ಶರತ್‌ ಚಂದ್ರ(ಪೂರ್ವ ವಲಯ, ದಾವಣಗೆರೆ), ಸೌಮೇಂದ್ರ
ಮುಖರ್ಜಿ(ಐಜಿಪಿ, ವಿಶೇಷ ತನಿಖಾ ದಳ). ಆರ್‌. ರಮೇಶ್‌(ಕಮಾಡೆಂಡ್‌ ಗೃಹ ರಕ್ಷಕ ದಳ), ವರ್ತಿಕಾ ಕಟಿಯಾರ್‌(ಸಿಎಆರ್‌, ಬೆಂಗಳೂರು), ಅರುಣ್‌ ಕೆ, ಎಂ.ಎಸ್‌.ಮೊಹಮ್ಮದ್‌ ಸುಜಿತಾ (ಲೋಕಾಯುಕ್ತ ವಿಶೇಷ ತನಿಖಾ ದಳ, ಬೆಂಗಳೂರು) ಹಾಗೂ
ಸಂಜೀವ್‌ ಎಂ.ಪಾಟೀಲ್‌(ಡಿಸಿಪಿ ಆಡಳಿತ ವಿಭಾಗ,ಬೆಂಗಳೂರು) ಇಲ್ಲಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next