1. ನಾಸ್ತಿಕತೆ
2. ಸುಳ್ಳು
3. ಸಿಟ್ಟು
4. ಅನವಧಾನ
5. ನಿಧಾನವಾಗಿ ತಡೆದು ಕೆಲಸಮಾಡುವುದು.
6. ಪ್ರಾಜ್ಞರಾದ ಸಜ್ಜನರೊಡನೆ ಸೇರದಿರುವುದು.
7. ಸೋಮಾರಿತನ.
8. ಪಂಚೇಂದ್ರಿಯಗಳಿಗೆ ಅಧೀನರಾಗಿ ಇಂದ್ರಿಯ ಚಾಪಲ್ಯದಲ್ಲಿ ಮುಳುಗಿರುವುದು.
9. ಯಾರೊಡನೆಯೂ ಸಮಾಲೋಚಿಸದೆ ಏಕಪಕ್ಷೀಯವಾದ ನಿರ್ಧಾರ.
10. ಅನುಭವವಿಲ್ಲದವರ ಜೊತೆಗೆ ಮಂತ್ರಾಲೋಚನೆ.
11. ನಿಶ್ಚಯಿಸಿದ ಕಾರ್ಯವನ್ನು ಆರಂಭಿಸದಿರುವುದು.
12. ಮಂತ್ರಾಲೋಚನೆಯನ್ನು ರಹಸ್ಯವಾಗಿ ಉಳಿಸಿಕೊಳ್ಳದಿರುವುದು.
13. ಮಂಗಳಕರವಾದ ಶುಭಕಾರ್ಯವನ್ನು ಮಾಡದಿರುವುದು.
14. ಎಲ್ಲ ಶತ್ರುಗಳ ಮೇಲೂ ಏಕಕಾಲದಲ್ಲಿ ಯುದ್ಧಾರಂಭ.
ಇವು ಬದುಕಿನಲ್ಲಿ ಯಶಸ್ಸು ಪಡೆಯಬೇಕು ಎನ್ನುವಾತ ಅನುಸರಿಸಬೇಕಾದ ಸೂತ್ರಗಳೇ ಆಗಿವೆ. ಬದುಕು ಎಂಬುದು ಒಂದು ಸುಂದರ ಪಯಣವಂತೂ ಅಲ್ಲವೇ ಅಲ್ಲ. ಅದನ್ನು ಸುಂದರವಲ್ಲದಿದ್ದರೂ ಸರಳವಾಗಿಸಿಕೊಂಡು, ಅಷ್ಟರÇÉೇ ನೆಮ್ಮದಿಯನ್ನು ಕಾಣುವುದಕ್ಕೆ ಈ ಸೂತ್ರಗಳು ಸಹಾಯಕ. ಮನುಷ್ಯ ಹುಟ್ಟಿನಿಂದ ಸಾವಿನತನಕವೂ ಪರಾವಲಂಬಿ. ಹಲವು ವೈವಿಧ್ಯಗಳ, ವೈರುಧ್ಯಗಳ ನಡುವೆ ಬಾಳನ್ನು ಕಟ್ಟಿಕೊಳ್ಳುವಾಗ ಈ ಹದಿನಾಲ್ಕೂ ದೋಷಗಳಿಂದ ದೂರವಿರಬೇಕಾದ ಅನಿವಾರ್ಯತೆ ಈ ಕಲಿಯುಗದಲ್ಲಿ ಖಂಡಿತವಾಗಿಯೂ ಇದೆ.
Advertisement
ಆಸ್ತಿಕತೆ ಒಂದು ಉತ್ಸಾಹಕ್ಕೆ ಕಾರಣವಾದರೆ, ನಾಸ್ತಿಕತೆಯಲ್ಲಿ ನಕಾರಾತ್ಮಕ ಗುಣಗಳತ್ತ ನಮ್ಮನ್ನು ಒಯ್ಯುವ ಅವಕಾಶ ಜಾಸ್ತಿ. ಸುಳ್ಳು ಎಂಬುದು ಒಂದು ಬಗೆಯ ಆತ್ಮವಂಚನೆ. ನಮ್ಮ ಆತ್ಮವನ್ನೇ ವಂಚಿಸಿಕೊಂಡು ಮಾಡುವ ಕಾರ್ಯ, ಆಡುವ ಮಾತು ನಮ್ಮ ಏಳಿಗೆಗೇ ಅಡ್ಡಿಯಾಗುತ್ತದೆ. ಸಿಟ್ಟು ಮನುಷ್ಯನ ಮಹಾನ್ ವೈರಿ. ಪರಾವಲಂಬಿಯಾದವನು ಮೊದಲು ಬಿಡಬೇಕು. ಸಿಟ್ಟಿನಿಂದ ದ್ವೇಷ, ಅಸೂಯೆ, ಅಶಾಂತಿಯೇ ನೆಲೆಯಾಗುವ ಸಂಭವವೇ ಹೆಚ್ಚಿರುವಾಗ ಇದು ಬದುಕನ್ನು ಹಾಳುಗೆಡುವುದರಲ್ಲಿ ಸಂಶಯವಿಲ್ಲ. ಅನವಧಾನ ನಮ್ಮ ಅರಿವಿನ ಹಾದಿಯನ್ನು ವಿಸ್ತಾರಗೊಳಿಸದು. ಹಾಗಾಗಿ, ಒಂದಿಷ್ಟು ಅವಧಾನ ಅಥವಾ ಏಕಚಿತ್ತತೆ ಇರಲೇ ಬೇಕು.ಯಾವುದೇ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿದರೆ ಮಾತ್ರ ತಕ್ಕ ಫಲ ಸಿಗುವುದು. ಇಲ್ಲದಿದ್ದರೆ ನಿರಾಶೆ ಕಟ್ಟಿಟ್ಟ ಬುತ್ತಿ. ಇನ್ನು, ಸಜ್ಜನರ ಸಂಗ ಹೆಜ್ಜೆàನು ಸವಿದಂತೆ. ಇದು ನಮಗೆ ಗೊತ್ತೇ ಇದೆ. ಸೋಮಾರಿತನ ಬದುಕನ್ನು ಹರಿಯಗೊಡುವುದಿಲ್ಲ. ಇದು ಬದುಕನ್ನು ನಿಧಾನವಾಗಿ ಕೊಲ್ಲುವ ವಿಷ. ಇಂದ್ರಿಯಗಳನ್ನು ಗೆಲ್ಲದೆ ಯಾವುದೇ ಸಾಧನೆಯೂ ಅಸಾಧ್ಯ.