Advertisement

ಯಾದಗಿರಿಯಲ್ಲಿ ಮತ್ತೆ 14 ಜನರಿಗೆ ಸೋಂಕು ದೃಢ: ಜಿಲ್ಲೆಯಲ್ಲಿ ಹೆಚ್ಚಿದ ಆತಂಕ

03:31 PM May 26, 2020 | keerthan |

ಯಾದಗಿರಿ: ಸೋಮವಾರವಷ್ಟೇ 15 ಜನರಿಗೆ ವಕ್ಕರಿಸಿದ್ದ ಮಹಾಮಾರಿ ಕೋವಿಡ್-19 ಸೋಂಕು ಮಂಗಳವಾರ ಮತ್ತೆ 14 ಜನರಲ್ಲಿ ಪತ್ತೆಯಾಗಿದ್ದು, ಜಿಲ್ಲೆಗೆ ಎಡೆಬಿಡದೇ ಕಾಡುತ್ತಿದೆ.

Advertisement

ಜಿಲ್ಲೆಯ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿದ್ದ 6 ವರ್ಷದ ಬಾಲಕ ಪಿ- 2198, ಸೇರಿದಂತೆ ಒಟ್ಟು 14 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಇವರೆಲ್ಲಾ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.

ಇಂದಿನ ಹೊಸ 14 ಸೋಂಕು ಪ್ರಕರಣಗಳ ಕಾರಣದಿಂದ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 140 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು ಒಟ್ಟು ನೂರು ಪ್ರಕರಣಗಳು ಪತ್ತೆಯಾಗಿದೆ. ಇದಿರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2282ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 44 ಜನರು ಸೋಂಕಿನ ಕಾರಣದಿಂದ ಸಾವನ್ನಪ್ಪಿದರೆ, ಇಬ್ಬರು ಸೋಂಕಿತರು ಕೋವಿಡ್ ಅಲ್ಲದ ಕಾರಣದಿಂದ ಮರಣ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next