Advertisement

Athletics ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿಗಳಿಗೆ 14 ಪದಕ

10:46 PM Nov 29, 2023 | Team Udayavani |

ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಬೆಂಗಳೂರು ಹಾಗೂ ಶಾಲಾ ಶಿಕ್ಷಣ ಇಲಾಖೆ (ಪ.ಪೂ.) ಬೆಂಗಳೂರು ಉತ್ತರ ಅವುಗಳ ಸಂಯುಕ್ತ ಆಶ್ರಯದಲ್ಲಿ ನ. 23, 24ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಪೂ. ಕಾಲೇಜುಗಳ ರಾಜ್ಯಮಟ್ಟದ ಬಾಲ ಕರ ಆ್ಯತ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ಮೂಡುಬಿದಿರೆಯ ಆಳ್ವಾಸ್‌ ಪದವಿ ಪೂರ್ವ ಕಾಲೇಜು ಒಟ್ಟು 5 ಚಿನ್ನ, 4 ಬೆಳ್ಳಿ ಮತ್ತು 5 ಕಂಚಿನ ಪದಕಗಳ ಸಹಿತ 14 ಪದಕಗಳನ್ನು ಪಡೆದುಕೊಂಡಿದೆ.

Advertisement

ಫ‌ಲಿತಾಂಶ ವಿವರ: ದರ್ಶನ್‌ ಬಗಡಿ: 5 ಕಿ.ಮೀ. ನಡಿಗೆಯಲ್ಲಿ ಪ್ರಥಮ, ವಿನಾಯಕ್‌ : 5 ಕಿ.ಮೀ. ನಡಿಗೆಯಲ್ಲಿ ದ್ವಿತೀಯ ಯಶವಂತ್‌ ಕೆ.: 800 ಮೀ., 1,500 ಮೀ. ಓಟ ಮತ್ತು 4×400 ಮೀ.

ರಿಲೇಯಲ್ಲಿ ಪ್ರಥಮ
ದಯಾನಂದ ಹನುಮಂತ್‌: 400 ಮೀ. ಓಟ ದ್ವಿತೀಯ, 4×400 ಮೀ. ರಿಲೇ ಪ್ರಥಮ ರಾಮು: 800 ಮೀ. ಓಟ ದ್ವಿತೀಯ, 400 ಮೀ. ಓಟ ತೃತೀಯ, 4×400 ಮೀ. ರಿಲೇ ಪ್ರಥಮ ಶೋಭಿತ್‌ ದೇವಾಡಿಗ: ಚಕ್ರ ಎಸೆತ ದ್ವಿತೀಯ, ಗುಂಡು ಎಸೆತ ತೃತೀಯ ಮಂಜುನಾಥ ಶ್ರೀಶೈಲ್‌:

ತ್ರಿವಿಧ ಜಿಗಿತ ತೃತೀಯ
ತೇಜಲ್‌ ಕೆ.ಆರ್‌.: 110 ಮೀ. ಹರ್ಡಲ್ಸ್‌ ತೃತೀಯ ಅಬ್ದುಲ್‌ ರಜಕ್‌: ಹ್ಯಾಮರ್‌ ತ್ರೋ ತೃತೀಯ ಶಶಾಂಕ: 4×400 ಮೀ. ರಿಲೇ ಪ್ರಥಮ ವಿನೋದ್‌: 4×100 ಮೀ. ರಿಲೇ ಪ್ರಥಮ ಸರ್ವಜಿತ್‌: 4×100 ಮೀ. ರಿಲೇ ಪ್ರಥಮ

Advertisement

Udayavani is now on Telegram. Click here to join our channel and stay updated with the latest news.

Next