Advertisement

Flash Flood: ಜಲಪ್ರಳಯಕ್ಕೆ ನಲುಗಿದ ಸಿಕ್ಕಿಂ: 14 ಮೃತ್ಯು, 23ಯೋಧರ ಸಹಿತ 102ಮಂದಿ ನಾಪತ್ತೆ

08:23 AM Oct 05, 2023 | sudhir |

ಗ್ಯಾಂಗ್ಟಕ್‌: ಮೇಘ ಸ್ಫೋಟ ಹಾಗೂ ಅಣೆಕಟ್ಟಿನಿಂದ ಏಕಾಏಕಿ ನೀರು ಬಿಡುಗಡೆ ಮಾಡಿದ ಕಾರಣ ಸಿಕ್ಕಿಂನಲ್ಲಿ ಮಂಗಳವಾರ ತಡರಾತ್ರಿ ದಿಢೀರ್‌ ಪ್ರವಾಹ ಸೃಷ್ಟಿಯಾಗಿದ್ದು, ರಾತ್ರಿ ಬೆಳಗಾಗುವುದರೊಳಗೆ 23 ಯೋಧರು ಸಹಿತ 102 ಮಂದಿ ನಾಪತ್ತೆಯಾಗಿ, 14 ಮಂದಿ ಮೃತಪಟ್ಟಿದ್ದಾರೆ. ಕ್ಷಣ ಮಾತ್ರದಲ್ಲಿ ಸೇತುವೆಗಳು, ವಾಹನಗಳು, ಮನೆ- ಕಟ್ಟಡಗಳು ಕೊಚ್ಚಿ ಹೋಗಿದ್ದು, ಈ ದುರಂತವನ್ನು ಸಿಕ್ಕಿಂ ಸರಕಾರ “ವಿಪತ್ತು’ ಎಂದು ಘೋಷಿಸಿದೆ.

Advertisement

ಲ್ಹೋನಾಕ್‌ ಲೇಕ್‌ ಪರಿಸರದಲ್ಲಿ ಸುರಿದ ಭಾರೀ ಮಳೆಯಿಂದ ಮಂಗಳವಾರ ತಡರಾತ್ರಿ 1.30ಕ್ಕೆ ಟೀಸ್ಟಾ ನದಿಯಲ್ಲಿ ಪ್ರವಾಹ
ಉಂಟಾಗಿತ್ತು. ಇದೇ ಸಮಯದಲ್ಲಿ ಚುಂಗ್‌ಥಾಂಗ್‌ ಅಣೆಕಟ್ಟಿನಿಂದ ನೀರನ್ನೂ ಬಿಡುಗಡೆ ಮಾಡಿದ್ದು ಪರಿಸ್ಥಿತಿಯನ್ನು ಮತ್ತಷ್ಟು ಬಿಗ ಡಾಯಿಸಿತು. ನೀರಿನ ಮಟ್ಟವು ಕ್ಷಣಮಾತ್ರದಲ್ಲಿ 15-20 ಅಡಿ ಏರಿ, ಸುತ್ತಮುತ್ತಲಿನ ಪ್ರದೇಶಗಳನ್ನು ಕಬಳಿಸುತ್ತಾ ಸಾಗತೊಡಗಿತು. ವೇಳೆ ಸಿಂಗ್ಟಂ ಪ್ರದೇಶದ ಬರ್ದಾಂಗ್‌ನಲ್ಲಿ ನಿಲ್ಲಿಸಲಾಗಿದ್ದ ಸೇನಾ ವಾಹನಗಳು ಕೊಚ್ಚಿ ಹೋದವು. ಹಲವಾರು ವಾಹನಗಳು ಕೆಸರಿನಲ್ಲಿ ಸಿಲುಕಿವೆ ಎಂದು ಸೇನೆ ತಿಳಿಸಿದೆ.

Advertisement

ಮುಂದಿನ 2 ದಿನ ಭಾರೀ ಮಳೆ ಮುಂದುವರಿಯಲಿದ್ದು, ಗ್ಯಾಂಗ್ಟಕ್‌, ಗ್ಯಾಲ್ಶಿಂಗ್, ಪಕ್ಯಾಂಗ್‌ ಮತ್ತು ಸೊರೆಂಗ್‌ ಜಿಲ್ಲೆಗಳಿಗೆ ಆರೆಂಜ್‌ ಹಾಗೂ ಮಂಗಾನ್‌ ಮತ್ತು ನಾಮಚಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಟೀಸ್ಟಾ ನದಿ ಪ್ರವಾಹದ ಕಾರಣ ಪಶ್ಚಿಮ ಬಂಗಾಲ ಮತ್ತು ಬಾಂಗ್ಲಾ ದೇಶಕ್ಕೂ ಎಚ್ಚರಿಕೆ ರವಾನಿಸಲಾಗಿದೆ. ಪ.ಬಂ.ದ ಜಲ್‌ಪಾಯಿಗುರಿ ಆಡ ಳಿತವು ತಗ್ಗುಪ್ರದೇಶಗಳ ಜನರನ್ನು ಸ್ಥಳಾಂತರಿಸಲು ಆರಂಭಿಸಿದೆ. ಬುಧ ವಾರ 10 ಸಾವಿರ ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಸಿಕ್ಕಿಂ ಸಿಎಂ ಜತೆ ಮೋದಿ ಮಾತುಕತೆ
ಬುಧವಾರ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಾಂಗ್‌ ಗೋಲೆ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಎಲ್ಲ ರೀತಿಯ ನೆರವು ನೀಡುವುದಾಗಿ ತಿಳಿಸಿದ್ದಾರೆ. ಜತೆಗೆ, ಸಂತ್ರಸ್ತರ ಸುರಕ್ಷೆಗಾಗಿ ಪ್ರಾರ್ಥಿ ಸುವುದಾಗಿಯೂ ಹೇಳಿದ್ದಾರೆ.

ಇದನ್ನೂ ಓದಿ: Cricket World Cup 2023: ಸಚಿನ್‌ ತೆಂಡುಲ್ಕರ್‌ ಜಾಗತಿಕ ರಾಯಭಾರಿ

Advertisement

Udayavani is now on Telegram. Click here to join our channel and stay updated with the latest news.

Next