Advertisement

14 ದಿನ ಮೈಸೂರು ಬಹುತೇಕ ಸ್ತಬ್ಧ

03:35 PM Apr 28, 2021 | Team Udayavani |

ಮೈಸೂರು: ಕೊರೊನಾ 2ನೇ ಅಲೆ ತೀವ್ರವಾಗುತ್ತಿರುವುದರಿಂದ ಸೋಂಕು ಹರಡುವಿಕೆ ತಡೆಯಲು ಸರ್ಕಾರ 14ದಿನಗಳ ಕಾಲ ರಾಜ್ಯಾದ್ಯಂತ ಕರ್ಫ್ಯೂವಿಧಿಸಿದ್ದು, ಇಂದಿನಿಂದ ಮೇ10ರವರೆಗೆ ಮೈಸೂರು ಸ್ತಬ್ಧವಾಗಲಿದೆ.ಸೋಂಕು ಹರಡುವಿಕೆ ತಡೆಯಲುವಾರಾಂತ್ಯ ಕರ್ಫ್ಯೂ ವಿಧಿಸಿದ್ದ ಸರ್ಕಾರಅದನ್ನು 14 ದಿನ ವಿಸ್ತರಣೆ ಮಾಡಿರುವಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಮಂಗಳವಾರ ರಾತ್ರಿ 9 ಗಂಟೆಯಿಂದಲೇಜಾರಿಗೆ ಬಂದಿದ್ದು, ಮೇ 10ರ ರಾತ್ರಿ 9ರವರೆಗೆ ಮೈಸೂರು ಸ್ತಬ್ಧವಾಗಲಿದೆ.

Advertisement

ಅಗತ್ಯ ವಸ್ತುಗಳ ಮಳಿಗೆಗಳನ್ನು ಹೊರತುಪಡಿಸಿ ವಾಣಿಜ್ಯ ಮಳಿಗೆಗಳು ಬಂದ್‌ ಆಗಲಿವೆ. ವೈದ್ಯಕೀಯ ಸೇವೆ,ಆಹಾರ ಹೊರತುಪಡಿಸಿ ಎಲ್ಲಾ ತರಹದ ಅಂಗಡಿಗಳನ್ನು ಬಂದ್‌ ಮಾಡಬೇಕಿದೆ.ದಿನಸಿ, ಹಾಲು, ಹಣ್ಣು, ತರಕಾರಿಯನ್ನೂಸಮೀಪದ ಅಂಗಡಿಯಲ್ಲೇ ಖರೀದಿಮಾಡಬೇಕಿದ್ದು, ಬೆಳಗ್ಗೆ 6ರಿಂದ 10ರವರೆಗೆ ಮಾತ್ರ ಅವಕಾಶ ಇದೆ. ನಂತರದಿನಸಿ ಅಂಗಡಿಗಳೂ ಮುಚ್ಚಲಿವೆ.

ಚಿತ್ರಮಂದಿರ, ಮಾಲ್‌ಗ‌ಳು,ದೇವಸ್ಥಾನಗಳು, ಚರ್ಚ್‌ಗಳು,ಮಸೀದಿಗಳು, ಧಾರ್ಮಿಕ ಕೇಂದ್ರಗಳು,ಬಟ್ಟೆ ಅಂಗಡಿಗಳು, ಪಾರ್ಕ್‌ಗಳುಬಂದ್‌ ಆಗಲಿವೆ. ಕಾರ್ಖಾನೆಗಳಿಗೆಅವಕಾಶ ನೀಡಲಾಗಿದ್ದು, ಗಾರ್ಮೆಂಟ್ಸ್‌ಕಾರ್ಖಾನೆಗೆ ಅವಕಾಶ ನೀಡಲಾಗಿಲ್ಲ. ಪ್ರವಾಸಿಗರಿಗೆ ಅರಮನೆ, ಮೃಗಾಲಯಮತ್ತು ಕಾರಂಜಿ ಕೆರೆ ವೀಕ್ಷಣೆಯನ್ನುನಿಬಂìಧಿಸಲಾಗಿದೆ. ಬಸ್‌ ಸಂಚಾರವನ್ನೂ ಬಂದ್‌ ಮಾಡಲಾಗಿದ್ದು,ದೂರದ ಊರುಗಳಿಂದ ಬರುವವರುಟಿಕೆಟ್‌ ಹೊಂದಿರಬೇಕು.

ಅಗತ್ಯವಸ್ತುಗಳನ್ನು ಕೊಳ್ಳುವವರು ತಮ್ಮ ಬಡಾವಣೆಗಳಲ್ಲೇ ಕೊಳ್ಳಬೇಕು. ಸುಮ್ಮನೆನಗರದಲ್ಲಿ ಸುತ್ತಾಡಿದರೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.

ಪಾರ್ಸಲ್‌ಗೆ ಮಾತ್ರ ಅವಕಾಶ: ಕಟ್ಟಡನಿರ್ಮಾಣ, ಕೃಷಿ ಚಟುವಟಿಕೆಗಳಿಗೆಅವಕಾಶ ಇದೆ. ಹೋಟೆಲ್‌ ಹಾಘೂಬಾರ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರಅವಕಾಶವಿದೆ.  ಮದುವೆಗೆ 50 ಜನರಿಗೆಮಾತ್ರ ಅವಕಾಶ ನೀಡಿದ್ದು,ಅಂತ್ಯಕ್ರಿಯೆಗೆ 5 ಜನರಿಗೆ ಮಾತ್ರಅವಕಾಶ ನೀಡಲಾಗಿದೆ. ನಗರದಎಪಿಎಂಸಿ ಮಾರುಕಟ್ಟೆಗಳು ಬಂದ್‌ಆಗಲಿವೆ. ಹೊರಗಡೆಯಿಂದ ಬರುವವರಿಗೂ ಅವಕಾಶ ಇಲ್ಲ. ನಗರದ ವಿವಿಧವೃತ್ತಗಳಲ್ಲಿ ಸಂಚಾರ ಪೊಲೀಸರುನಾಕಾಬಂದಿ ಹಾಕಲಿದ್ದು, ಸುಮ್ಮನೆರಸ್ತೆಗಿಳಿಯುವವರ ವಿರುದ್ಧ ಕ್ರಮಕೈಗೊಳ್ಳಲಿದ್ದಾರೆ.

Advertisement

ಕೊರೊನಾ ಸೋಂಕು ಹರಡುವಿಕೆತಡೆಗೆ ಮೇ 10ರವರೆಗೆ ಕರ್ಫ್ಯೂಜಾರಿಯಲ್ಲಿರಲಿದ್ದು, ಸಾರ್ವಜನಿಕರುಅನಗತ್ಯವಾಗಿ ಓಡಾಡಬಾರದು. ಅಗತ್ಯವಸ್ತುಗಳನ್ನು ನಿಗದಿತ ಸಮಯದಲ್ಲಿತಮ್ಮ ಬಡಾವಣೆಗಳಲ್ಲೇ ಕೊಳ್ಳುವಮೂಲಕ ಸೋಂಕಿಗೆ ಕಡಿವಾಣ ಹಾಕಲುಸಹಕರಿಸಬೇಕು ಎಂದು ನಗರಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next