Advertisement
ಚಿದಾನಂದ ಹಾಗೂ ಸ್ನೇಹಿತರು ಖಾಸಗಿ ವಾಹನದಲ್ಲಿ ಗಂಗಾವತಿಗೆ ತೆರಳುತ್ತಿದ್ದು, ಸರಕಾರಿ ಕರ್ತವ್ಯದಲ್ಲಿ ತೆರಳುತ್ತಿರುವ ಕಾರಣ ಟೋಲ್ ಶುಲ್ಕ ನೀಡುವುದಿಲ್ಲ ಕಟ್ಟುವುದಿಲ್ಲ ಎಂದಿದ್ದಾರೆ. ಆಗ ಟೋಲ್ ಸಿಬಂದಿಯು ನೀವು ಖಾಸಗಿ ವಾಹನದಲ್ಲಿ ಸಂಚರಿಸುತ್ತಿದ್ದೀರಿ ಎಂದು ಹೇಳಿದ್ದು, ಬಳಿಕ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಟೋಲ್ ಸಿಬಂದಿಯ ಪರವಾಗಿ ಗ್ರಾಮಸ್ಥರೂ ಆಗಮಿಸಿ ಚಿದಾನಂದ ಹಾಗೂ ಸ್ನೇಹಿತರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಹಲ್ಲೆಕೋರರು ಅಧಿಕಾರಿ ಚಿದಾನಂದರ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ. ಚಿದಾನಂದರು ತಲೆ ಬಗ್ಗಿಸಿ ನಿಂತು, “ಎಷ್ಟು ಬೇಕಾದರೂ ಹೊಡೆಯಿರಿ’ ಎಂದು ಹೇಳಿದ್ದರು. ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಆಗಮಿಸಿದರೂ ಕಿಡಿಗೇಡಿಗಳು ಲೆಕ್ಕಿಸದೆ ಥಳಿಸಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ :ಶನಿವಾರ ಇನ್ನಷ್ಟು ಮಾಹಿತಿ ಬಹಿರಂಗ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ
Related Articles
ಎಇಇ ಕರ್ತವ್ಯದಲ್ಲಿದ್ದು, ಅವರಿದ್ದ ಖಾಸಗಿ ವಾಹನವನ್ನೂ ಸರಕಾರಿ ಸೇವೆಗೆ ಪಡೆಯಲಾಗಿತ್ತು. ಅವರು ಗುರುತಿನ ಚೀಟಿ ತೋರಿಸಿದರೂ ಹಲ್ಲೆ ಮಾಡಲಾಗಿದೆ. ಈ ಸಂಬಂಧ ಟೋಲ್ ಮ್ಯಾನೇಜರ್ ಸಹಿತ 14 ಜನರನ್ನು ಬಂಧಿ ಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement