Advertisement

14.90 ಕೋಟಿ ನಗದು ಜಪ್ತಿ

11:32 PM Apr 12, 2019 | Team Udayavani |

ಚುನಾವಣಾ ನೀತಿ ಸಂಹಿತೆ ಜಾರಿ ತಂಡಗಳು ಕಳೆದ 24 ಗಂಟೆಗಳಲ್ಲಿ ರಾಜ್ಯಾದ್ಯಂತ 14.90 ಕೋಟಿ ನಗದು, 61.25 ಲಕ್ಷ ಮೌಲ್ಯದ ಮದ್ಯ, 6.42 ಲಕ್ಷ ಮೌಲ್ಯದ ಮಾದಕ ದ್ರವ್ಯ, 2.17 ಕೋಟಿ ರೂ. ಮೊತ್ತದ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಂಡಿವೆ. ಈವರೆಗೆ ವಶಪಡಿಸಿಕೊಂಡ ಒಟ್ಟು ನಗದು 66.81 ಕೋಟಿ.

Advertisement

14.20 ಲಕ್ಷ ರೂ. ವಶ: ದಾವಣಗೆರೆ ನಗರದ ಬೇತೂರು ರಸ್ತೆ ಚೆಕ್‌ಪೋಸ್ಟ್‌ನಲ್ಲಿ ಶುಕ್ರವಾರ ಬೆಳಗ್ಗೆ ಬೈಕ್‌ ಸವಾರನಿಂದ ದಾಖಲೆರಹಿತ 14.20 ಲಕ್ಷ ರೂ.ಗಳನ್ನು ಎಫ್‌ಎಸ್‌ಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಭದ್ರಾವತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಚುನಾವಣಾ ಫ್ಲೆಯಿಂಗ್‌ ಸ್ಕ್ವಾಡ್‌ ಶುಕ್ರವಾರ ದಾಖಲಾತಿ ಇಲ್ಲದ ಒಟ್ಟು 8 ಲಕ್ಷದ 56 ಸಾವಿರ ರೂ.ಗಳನ್ನು ವಶಪಡಿಸಿಕೊಂಡಿದೆ. ಬೆಳಗ್ಗೆ ಕೂಡ್ಲಿಗೆರೆ ಚೆಕ್‌ಪೋಸ್ಟ್‌ ವ್ಯಾಪ್ತಿಯ ನಾಗತಿಬೆಳಗಲು ಬಳಿ ದಾಖಲಾತಿಯಿಲ್ಲದೆ ಸಾಗಿಸುತ್ತಿದ್ದ ರೂ. 1 ಲಕ್ಷದ 56 ಸಾವಿರ ರೂ. ವಶಕ್ಕೆ ಪಡೆದಿದೆ. ನಂತರ ಅದೇ ಸ್ಥಳದಲ್ಲಿ ದಾಖಲಾತಿಯಿಲ್ಲದೆ ಕೊಂಡೊಯ್ಯಲಾಗುತ್ತಿದ್ದ 7 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚೆಕ್‌ ಪೋಸ್ಟ್‌ನಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಹೋಂಡಾ ಶೈನ್‌ ಬೈಕ್‌ನಲ್ಲಿ ಬಂದ ಬಸಾಪುರ ಗ್ರಾಮದ ಆರ್‌.ಕೆ. ಬಸವರಾಜ್‌ರಿಂದ ಹಣ ವಶಪಡಿಸಿಕೊಳ್ಳಲಾಗಿದೆ.

ಹಣ ಕೊಂಡೊಯ್ಯುತ್ತಿರುವ ಬೈಕ್‌ ಸವಾರ ಬಸವರಾಜ್‌ ದಾಖಲೆ ಹಾಜರುಪಡಿಸಲು ವಿಫಲರಾಗಿದ್ದು, ಹಣ ವಶಕ್ಕೆ ಪಡೆಯಲಾಗಿದೆ. ಈ ವೇಳೆ ಎಫ್‌.ಎಸ್‌.ಟಿ. ಮುಖ್ಯಸ್ಥರಾದ ರವಿ, ಸಿ. ಗಂಗಾಧರ, ಕೃಷ್ಣಾನಾಯ್ಕ, ಹೆಡ್‌ಕಾನ್‌ಸ್ಟೇಬಲ್‌ ಬಸವರಾಜ್‌ ಹಾಗೂ ರವೀಂದ್ರ ಇದ್ದರು ಎಂದು ಪ್ರಕಟಣೆ ತಿಳಿಸಿದೆ.

Advertisement

ಎಚ್‌ಎಂ ಅಮಾನತು: ರಾಜಕೀಯ ಹಿನ್ನೆಲೆಯ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಭಾಷಣ ಮಾಡಿ, ಪ್ರಚಾರ ಕೈಗೊಂಡು ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಉಡುಪಿ ಜಿಲ್ಲೆ ಕೊಡವೂರು ಸ.ಮಾ.ಹಿ.ಪ್ರಾ. ಶಾಲೆ ಮುಖ್ಯೋಪಾಧ್ಯಾಯ ಸುಂದರ್‌ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಏ.7ರಂದು ಕಾರ್ಕಳದಲ್ಲಿ ನಡೆದ ಸಮಾಲೋಚನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಜೆಡಿಎಸ್‌ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಮತ್ತಿತರರ ಸಮ್ಮುಖದಲ್ಲಿ ಸುಂದರ್‌ ಮಾತನಾಡಿದ್ದರು. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ರಾಜಕೀಯ ಚುನಾವಣಾ ಪ್ರಚಾರ, ಸಭೆ ಸಮಾರಂಭಗಳಲ್ಲಿ ಸರಕಾರಿ ನೌಕರರು ಭಾಗವಹಿಸಲು ಅವಕಾಶವಿಲ್ಲ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next