ಕಲಬುರಗಿ: ಈ ಬಾರಿಯ ಯುಗಾದಿ ಹಬ್ಬ ಸಾರಿಗೆ ನೌಕರರ ಪಾಲಿಗೆ ಅಕ್ಷರಶಃ ಬೇವು-ಬೆಲ್ಲವಾಗಿ ಪರಿಣಮಿಸಿದೆ. ಕರ್ತವ್ಯ ನಿರ್ವಹಿಸಿದ ನೌಕರರು ಸಂಬಳದ”ಸಿಹಿ’ ಕಂಡದಿದ್ದರೆ, ಮುಷ್ಕರದ ಭಾಗವಾಗಿ ಕರ್ತವ್ಯದಿಂದ ದೂರು ಉಳಿದ ನೌಕರರು “ಕಹಿ’ ಅನುಭವಿಸುವಂತಾಗಿದೆ. ಮತ್ತೆ ಕೆಲ ನೌಕರರು ಕೆಲಸವನ್ನೇ ಕಳೆದುಕೊಂಡು ನೋವು ಪಡುವಂತೆ ಆಗಿದೆ.
ಆರನೇ ವೇತನ ಆಯೋಗದ ಅನ್ವಯ ಸಂಬಳ ಜಾರಿಮಾಡಬೇಕೆಂದು ಆಗ್ರಹಿಸಿ ಕಳೆದ ಆರು ದಿನಗಳಿಂದರಾಜ್ಯಾದ್ಯಂತ ಮುಷ್ಕರ ಮುಂದುವರಿದಿದೆ. ಮುಷ್ಕರದನಡುವೆಯೂ ಕರ್ತವ್ಯ ನಿರ್ವಹಿಸಿದ ನೌಕರರಿಗೆ ಸೋಮವಾರ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಮಾರ್ಚ್ ತಿಂಗಳ ವೇತನ ಪಾವತಿಸಿದೆ. ಈಶಾನ್ಯ ಸಾರಿಗೆಸಂಸ್ಥೆಯ ಕೇಂದ್ರ ಕಚೇರಿ ಮತ್ತು ಕಲ್ಯಾಣ ಕರ್ನಾಟಕದಏಳು ಜಿಲ್ಲೆಗಳು ಮತ್ತು ಪಕ್ಕದ ವಿಜಯಪುರ ಸೇರಿ ಒಟ್ಟು 8 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಿದ ಒಟ್ಟು 7,335 ಸಿಬ್ಬಂದಿಗೆ 14.5 ಕೋಟಿ ರೂ.ಗೂ ಅಧಿಕ ಸಂಬಳ ಪಾವತಿಸಲಾಗಿದೆ.
ನೌಕರರ ಮನವೊಲಿಸುವ ಮೂಲಕ ಸೋಮವಾರಸಂಜೆಯವರೆಗೆ ಒಟ್ಟು 506 ಸಾರಿಗೆ ಬಸ್‌ಗಳುಕಾರ್ಯಾಚರಣೆ ಮಾಡಲಾಗಿದೆ. ಈಶಾನ್ಯ ಸಾರಿಗೆಸಂಸ್ಥೆಯ ಎಲ್ಲ ಜಿಲ್ಲೆಗಳಲ್ಲಿ ಬೇರೆ-ಬೇರೆ ಮಾರ್ಗಗಳಲ್ಲಿಸಾರಿಗೆ ಬಸ್‌ಗಳನ್ನು ಓಡಿಸಲಾಗಿದೆ. ಮುಷ್ಕರದ ಮೊದಲದಿನ ಎಂದರೆ ಏ.7ರಂದು ಕೇವಲ 101 ಬಸ್‌ಗಳು, ನಂತರಏ.8ರಂದು 144 ಬಸ್‌ಗಳು, ಏ.9ರಂದು 221 ಬಸ್‌ಗಳು,ಏ.10ರಂದು 339 ಬಸ್‌ಗಳು ಸಂಚರಿಸಿದ್ದವು. ಸಾರ್ವಜನಿಕ ಪ್ರಯಾಣಿಕರಿಗೆ ಅನಾನುಕೂಲವಾಗದಂತೆ ಸಾರಿಗೆ ಬಸ್ ನಿಲ್ದಾಣಗಳ ಮೂಲಕವೇ ಖಾಸಗಿ ಬಸ್‌ಗಳನ್ನು ಸಂಚರಿಸಲಾಗುತ್ತಿದ್ದು, ಸೋಮವಾರ 421 ಖಾಸಗಿ ಬಸ್‌ಗಳು ಕಾರ್ಯಾಚರಣೆ ನಡೆಸಿವೆ.
ಅಲ್ಲದೇ, ನೆರೆ ರಾಜ್ಯದ ತೆಲಂಗಾಣ ಮತ್ತು ಆಂಧ್ರಪ್ರದೇಶದ 242 ಸಾರಿಗೆ ಬಸ್‌ಗಳು ಹಾಗೂ ಜೀಪ್, ಕ್ರೂಸರ್ ಸೇರಿದಂತೆ 2,776 ಇತರ ವಾಹನಗಳ ಕಾರ್ಯಾಚರಣೆ ಮಾಡಿಸಲಾಗಿದೆ.
ಮತ್ತಷ್ಟು ನೌಕರರ ವಜಾ: ಮುಷ್ಕರದಲ್ಲಿ ಪಾಲ್ಗೊಂಡುಕರ್ತವ್ಯಕ್ಕೆ ಗೈರಾದ ಮತ್ತಷ್ಟು ನೌಕರರನ್ನೂ ಸೇವೆಯಿಂದ ವಜಾಗೊಳಿಸಲಾಗಿದ್ದು, ಸೋಮವಾರ ಒಟ್ಟು ವಜಾಗೊಂಡವರ ಸಂಖ್ಯೆ 45ಕ್ಕೆ ಏರಿಕೆಯಾಗಿದೆ. ಇದರಲ್ಲಿ13 ಚಾಲಕರು, 6 ನಿರ್ವಾಹಕರು, 22 ಚಾಲಕರು ಕಂನಿರ್ವಾಹಕರು, ಇಬ್ಬರು ತಾಂತ್ರಿಕ ಸಹ ಸೇರಿದ್ದಾರೆ.ಮುಷ್ಕರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆಕೊಪ್ಪಳ ವಿಭಾಗದಲ್ಲಿ ಇಬ್ಬರು ನೌಕರರ ಹಾಗೂ ಕರ್ತವ್ಯಕ್ಕೆಹಾಜರಾಗಿ ಬಸ್ ಕಾರ್ಯಾಚರಣೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ವಿಜಯಪುರ ವಿಭಾಗದಲ್ಲಿ ಇಬ್ಬರುನೌಕರರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ.ಮುಷ್ಕರದ ಹಿನ್ನೆಲೆಯಲ್ಲಿ ಈಶಾನ್ಯ ಸಾರಿಗೆ ಸಂಸ್ಥೆಗೆಏ.7ರಿಂದ ಸೋಮವಾರದರವರೆಗೆ ಒಟ್ಟು 27 ಕೋಟಿ ರೂ.ಗಳಷ್ಟು ಆದಾಯ ಖೋತಾ ಆಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮಾರಾವ್ ತಿಳಿಸಿದ್ದಾರೆ.