Advertisement

ಜಿಲ್ಲೆಯ ಸೋಂಕಿತರಿಗೆ 1,359 ಹಾಸಿಗೆ ವ್ಯವಸ್ಥೆ

03:09 PM Apr 22, 2021 | Team Udayavani |

ಹಾಸನ: ಜಿಲ್ಲೆಯಲ್ಲಿಯೂಕೊರೊನಾ ದಿನೇ ದಿನೆ ಹೆಚ್ಚುತ್ತಿದ್ದು,ಸೋಂಕಿತರ ಚಿಕಿತ್ಸೆಗೆ ಜಿಲ್ಲಾಡಳಿತವುಆಗತ್ಯ ಸಿದ್ಧತೆಗೆ ಮುಂದಾಗಿದೆ.ಹಾಸನದ ವೈದ್ಯಕೀಯ ಕಾಲೇಜು(ಹಿಮ್ಸ್‌ ) ಆಸ್ಪತ್ರೆ, ತಾಲೂಕುಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 1,359 ಹಾಸಿಗೆ ಗಳವ್ಯವಸ್ಥೆ ಮಾಡಲಾಗಿದ್ದು, ಆಸ್ಪತ್ರೆಗಳಿಗೆ309 ಮಂದಿ ದಾಖಲಾಗಿ ಚಿಕಿತ್ಸೆಪಡೆಯುತ್ತಿದ್ದಾರೆ ಇನ್ನುಳಿದುವರು ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಅವರಿಗೆ ಅಗತ್ಯವಿರುವ ಔಷಧಿಯನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Advertisement

ಹಿಮ್ಸ್‌ ಆಸ್ಪತ್ರೆಗೆ 209 ಮಂದಿ ಸೋಂಕಿತರುದಾಖಲಾಗಿದ್ದು, ಇನ್ನೂ 191 ಹಾಸಿಗೆಗಳು ಖಾಲಿ ಇವೆ.ತಾಲೂಕು ಕೇಂದ್ರದ ಆಸ್ಪತ್ರೆಗಳಲ್ಲಿ 98ಮಂದಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ 132 ಹಾಸಿಗೆಗಳುಖಾಲಿ ಇವೆ. ಖಾಸಗಿ ಆಸ್ಪತ್ರೆಗಳಲ್ಲಿ80 ಮಂದಿ ದಾಖ ಲಾಗಿದ್ದು, ನ್ನೂ390 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ.

ಕೊರೊನಾ ಕೇರ್‌ಕೇಂದ್ರದಲ್ಲಿ 9 ಮಂದಿ ಚಿಕಿತ್ಸೆಪಡೆಯುತ್ತಿದ್ದು, 437 ಹಾಸಿಗೆಗಳು ಸೋಂಕಿತರ ಸೇವೆಗೆ ಲಭ್ಯವಿವೆಎಂದು ಡೀಸಿ ಆರ್‌.ಗಿರೀಶ್‌ ತಿಳಿಸಿದ್ದಾರೆ.ಹಿಮ್ಸ್‌ ಆಸ್ಪತ್ರೆಯಲ್ಲಿ 400 ಹಾಸಿಗೆ ಗಳು ಕೊರೊನಾಸೋಂಕಿ ತರ ಚಿಕಿತ್ಸೆಗೆ ಮೀಸಲಿರಿಸಲಿದ್ದು, ಎಲ್ಲ ಹಾಸಿಗೆಗಳಿಗೂ ಆಮ್ಲಜನಕ ಪೂರೈಕೆ ಸೌಲಭ್ಯ ಮಾಡಲಾಗಿದೆ.

60 ಐ.ಸಿ. ಯು ಬೆಡ್‌ಗಳು ಹಾಗೂ 60 ವೆಂಟಿ ಲೇಟರ್‌ಗಳು ಲಭ್ಯವಿವೆ. ಇನ್ನೂ ಹೆಚ್ಚು ಹಾಸಿಗೆಗಳ ಅವಶ್ಯಕತೆಇದ್ದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದಕಾಲೇಜು, ಜಿಲ್ಲಾ ಕ್ರೀಡಾಂಗಣ ಪಕ್ಕದಲ್ಲಿರುವ ಜಿಲ್ಲಾತರಬೇತಿ ಸಂಸ್ಥೆ ಹಾಗೂ ಕೃಷಿ ಕಾಲೇಜಿನಲ್ಲಿ ಕೊರೊನಾಕೇರ್‌ ಕೇಂದ್ರ ತೆರೆಯಲಾಗುವುದು ಎಂದು ಹೇಳಿದ್ದಾರೆ.

ಅಗತ್ಯ ಲಸಿಕೆ ಲಭ್ಯ: ಜಿಲ್ಲೆಯಲ್ಲಿ ಅಗತ್ಯ ಲಸಿಕೆದಾಸ್ತಾನಿದ್ದು, 45 ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆಹಾಕಿಸಿಕೊಳ್ಳುತ್ತಿದ್ದಾರೆ. ಮೇ 1 ರಿಂದ 18 ವರ್ಷಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ಹಾಕಲು ಕೇಂದ್ರಸರ್ಕಾರ ತೀರ್ಮಾನಿಸಿದ್ದು, ಎಲ್ಲ ವಯಸ್ಕರೂ ಲಸಿಕೆಹಾಕಿಸಿಕೊಳ್ಳ ಬೇಕು ಎಂದು ಜಿಲ್ಲಾಧಿಕಾರಿ ಮನವಿಮಾಡಿದ್ದಾರೆ.

Advertisement

ಹಿಮ್ಸ್‌ ಆಸ್ಪತ್ರೆಯಲ್ಲಿ 13 ಸಾವಿರ ಕಿ.ಲೀ. ಸಾಮರ್ಥ್ಯದ ಆಮ್ಲಜನಕ ಪೂರೈಕೆ ಘಟಕವಿದ್ದು,ಪ್ರತಿದಿನ 2600 ಲೀಟರ್‌ ಆಮ್ಲಜನಕಖರ್ಚಾಗುತ್ತಿದೆ. ನಾಲ್ಕು ದಿನಗಳಿಗೊಮ್ಮೆ ಟ್ಯಾಂಕರ್‌ನಲ್ಲಿ ದಾಬಸ್‌ಪೇಟೆಯಿಂದ ಆಮ್ಲಜನಕವನ್ನು ತಂದುಹಿಮ್ಸ್‌ ಘಟಕಕ್ಕೆ ರೀಫಿಲ್‌ ಮಾಡಲಾಗುತ್ತಿದೆ. 400ಬೆಡ್‌ಗಳಿಗೂ ಪೈಪ್‌ಲೈನ್‌ ಮೂಲಕ ಆಮ್ಲಜನಕಪೂರೈಕೆಯಾಗುತ್ತಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಾದಡಾ. ಕೃಷ್ಣಮೂರ್ತಿ ತಿಳಿಸಿದ್ದಾರೆ.

ಪಿಪಿಇ ಕಿಟ್‌, ರೆಮ್‌ಡಿಸಿವರ್‌ ಚುಚ್ಚುಮದ್ದು, ಹಾಗೂ ಔಷಧಿಗಳುನಿರಂತರವಾಗಿ ಪೂರೈಕೆಯಾಗುತ್ತಿದ್ದು ಅಗತ್ಯಕ್ಕೆ ಅನುಗುಣವಾಗಿ ಸೋಂಕಿತರಿಗೆ ರೆಮ್‌ಡೀವರ್‌ ಚುಚ್ಚುಮದ್ದು ನೀಡಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರು ಮಾಹಿತಿ ನೀಡಿದ್ದಾರೆ.ಮಾರುಕಟ್ಟೆಯಲ್ಲಿ ಮುಂಜಾಗ್ರತೆ ಮಾಯಆಲೂರು: ಕೊರೊನಾ ಸೋಂಕಿನ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿದ್ದು, ಒಂದು ಕಡೆಯಾದರೆ ಪಟ್ಟಣದಲ್ಲಿ ಬುಧುವಾರದ ಸಂತೆ ದಿನವಹಿ ಮಾರುಕಟ್ಟೆಯಲ್ಲಿಕೊಳ್ಳುವವರ ಮುಖದಲ್ಲಿ ಮಾಸ್ಕ್  ಸಾಮಾಜಿಕ ಅಂತರ ಮಾಯವಾಗಿರುವುದು ಕಂಡುಬಂತು.

ಆಲೂರು ಪಟ್ಟಣದಲ್ಲಿ ಇರುವ ತರಕಾರಿ ಮಾರುಕಟ್ಟೆ ಆವರಣ ಹಾಗೂಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ದಿನವಹಿ ಮಾರುಕಟ್ಟೆಯಲ್ಲಿ ವಹಿವಾಟುನಡೆಯಿತು. ಈ ವೇಳೆ ತರಕಾರಿ ವ್ಯಾಪಾರಿಗಳು ಮತ್ತು ಕೊಳ್ಳವವರು ಸೇರಿದಂತೆ ಇತರೆವ್ಯಾಪಾರಿಗಳು ಮಾಸ್ಕ್ ಹಾಕಿಕೊಂಡಿರಲಿಲ್ಲ.

ಜತೆಗೆ ಕೆಲವು ಮೂಗಿನ ಕೆಳಗಡೆ ಮಾತ್ರಮಾಸ್ಕ್ ಹಾಕಿಕೊಂಡಿದ್ದರು ಅಲ್ಲದೆ ಸಾಮಾಜಿಕ ಅಂತರವನ್ನೂ ಕಾಯ್ದುಕೊಂಡಿರಲಿಲ್ಲ.ಸರ್ಕಾರ ಮಾರ್ಗಸೂಚಿ ನೀಡಿದ್ದರೂ, ಸಾಕಷ್ಟು ಪ್ರಚಾರ ಮತ್ತು ಜಾಗೃತಿ ಮೂಡಿಸುತ್ತಿದ್ದರೂ ಸಾರ್ವಜನಿಕರು ಮಾತ್ರ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ. ಇದಕ್ಕೆ ಪಟ್ಟಣದಲ್ಲಿ ಭಾನುವಾರ ನಡೆದ ವಹಿವಾಟು ಸಾಕ್ಷಿಯಾಗಿತ್ತು. ಪಟ್ಟಣ ಸೇರಿದಂತೆ ಕೆಲಗ್ರಾಮೀಣ ಪ್ರದೇಶದ ಜನರು ಸಂತೆಗೆ ಆಗಮಿಸಿದ್ದರು. ಆದರೆ, ಅಲ್ಲಲ್ಲಿ ಒಬ್ಬಿಬ್ಬರಮುಖದಲ್ಲಿ ಮಾಸ್ಕ್ ಕಂಡಿದ್ದು ಬಿಟ್ಟರೆ ಬಹುತೇಕ ಜನರು ಮಾಸ್ಕ್ ಧರಿಸಿರಲಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next