Advertisement

1,342 ಯೂನಿಟ್ ರಕ್ತ, 360 ಯುನಿಟ್ ಪ್ಲೇಟ್ಲೆಟ್ ಸಂಗ್ರಹ

01:03 AM Aug 03, 2019 | mahesh |

ಮಹಾನಗರ: ಡೆಂಗ್ಯೂ ಜ್ವರ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ವೆನ್ಲಾಕ್‌ ಪ್ರಾದೇಶಿಕ ರಕ್ತ ಮರುಪೂರಣ ಕೇಂದ್ರ ದಲ್ಲಿ ಈ ವರ್ಷದಲ್ಲೇ ಅತಿ ಹೆಚ್ಚು ರಕ್ತ ಸಂಗ್ರಹ ಜುಲೈ ತಿಂಗಳಲ್ಲಿ ಆಗಿದೆ. ಒಟ್ಟು 1,342 ಯೂನಿಟ್ ರಕ್ತ ಸಂಗ್ರಹವಾಗಿದೆ.

Advertisement

ಡೆಂಗ್ಯೂ ಜ್ವರದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈವರೆಗೆ 581 ಮಂದಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಸದ್ಯ 170ರಷ್ಟು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಬಹುತೇಕರು ಮಂಗಳೂರಿನ ಖಾಸಗಿ, ಸರಕಾರಿ ಆಸ್ಪತ್ರೆಗಳಲ್ಲೇ ದಾಖಲಾಗಿದ್ದಾರೆ. ಡೆಂಗ್ಯೂ ಬಾಧಿತರಿಗೆ ಅತಿಯಾದ ಪ್ಲೇಟ್ಲೆಟ್ ರಕ್ತಕಣಗಳ ಅವಶ್ಯವಿದೆ. ಹಾಗಾಗಿ ರಕ್ತದಾನಿಗಳ ಸಂಖ್ಯೆ ಹೆಚ್ಚಾಗಿದ್ದು, ರಕ್ತ ಸಂಗ್ರಹವೂ ಅಧಿಕಗೊಂಡಿದೆ.

6,464 ಯುನಿಟ್ ರಕ್ತ

ಒಟ್ಟಾರೆಯಾಗಿ ಜನವರಿಯಿಂದ ಜುಲೈ ವರೆಗೆ ಕೇಂದ್ರದಲ್ಲಿ 6,464 ಯುನಿಟ್ ರಕ್ತ ಸಂಗ್ರಹವಾಗಿದೆ. ಕೇಂದ್ರದಲ್ಲಿ ಜನ ವರಿಯಲ್ಲಿ 1,113 ಯುನಿಟ್ ರಕ್ತ ಸಂಗ್ರಹವಾಗಿದ್ದರೆ, ಬಳಿಕ ಸಂಗ್ರಹದ ಯುನಿಟ್ ಕಡಿಮೆಯಾಗುತ್ತಲೇ ಇತ್ತು. ಫೆಬ್ರವರಿಯಲ್ಲಿ 866, ಮಾರ್ಚ್‌ನಲ್ಲಿ 982, ಎಪ್ರಿಲ್ನಲ್ಲಿ 694, ಮೇಯಲ್ಲಿ 528, ಜೂನ್‌ ತಿಂಗಳಿನಲ್ಲಿ 939 ಯುನಿಟ್ ರಕ್ತ ಸಂಗ್ರಹವಾಗಿತ್ತು. ಮೇ ನಲ್ಲಿ ರಕ್ತದ ತೀವ್ರ ಕೊರತೆಯಾಗಿ ವೆನ್ಲಾಕ್‌, ಲೇಡಿಗೋಶನ್‌ ಸಹಿತ ಆಸ್ಪತ್ರೆಗಳಲ್ಲಿ ರಕ್ತಕ್ಕೆ ರೋಗಿಗಳು ಪರದಾಟವಂತಾಗಿತ್ತು. ಈಗ ಡೆಂಗ್ಯೂ ವ್ಯಾಪಕದ ಹಿನ್ನಲೆ ದಾನಿಗಳ ನೆರವಿನಿಂದಾಗಿ ರಕ್ತಕ್ಕೆ ಸಮಸೆಯಾಗಿಲ್ಲ ಎನ್ನು ತ್ತಾರೆ ವೆನ್ಲಾಕ್‌ ಪ್ರಾದೇಶಿಕ ರಕ್ತ ಮರು ಪೂರಣ ಕೇಂದ್ರದ ಮುಖ್ಯಸ್ಥ ಡಾ| ಶರತ್‌ಕುಮಾರ್‌.

ಈ ಅಂಕಿ ಅಂಶ ವೆನ್ಲಾಕ್‌ ಆಸ್ಪತ್ರೆಯ ರಕ್ತನಿಧಿ ಕೇಂದ್ರದ್ದಾಗಿದೆ. ಆದರೆ ಜಿಲ್ಲೆಯಲ್ಲಿ 13 ಬ್ಲಿಡ್‌ ಬ್ಯಾಂಕ್‌ಗಳಿದ್ದು, ಅವುಗಳಲ್ಲಿ ಸಂಗ್ರಹವಾಗಿರುವ ಯುನಿಟ್ ರಕ್ತವನ್ನು ಲೆಕ್ಕ ಹಾಕಿದರೆ, ರಕ್ತ ಸಂಗ್ರಹದ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತದೆ.

Advertisement

360 ಯುನಿಟ್ ಪ್ಲೇಟ್ಲೆಟ್

ಪ್ಲೇಟ್ಲೆಟ್ ರಕ್ತಕಣಗಳ ಸಂಗ್ರಹವೂ ಜುಲೈ ತಿಂಗಳಲ್ಲೇ ಹೆಚ್ಚಿದ್ದು, ಒಟ್ಟು 360 ಯುನಿಟ್ ಪ್ಲೇಟ್ಲೆಟ್ ರಕ್ತಕಣ ಸಂಗ್ರಹವಾಗಿದೆ. ಜನವರಿಯಿಂದ ಜುಲೈವರೆಗೆ ಒಟ್ಟು 1,298 ಯುನಿಟ್ ಪ್ಲೇಟ್ಲೆಟ್ ಸಂಗ್ರಹವಾಗಿದೆ. ಜನವರಿಯಲ್ಲಿ 240, ಫೆಬ್ರವರಿಯಲ್ಲಿ 77, ಮಾರ್ಚ್‌- 87, ಎಪ್ರಿಲ್- 129, ಮೇ- 205, ಜೂನ್‌- 200 ಯುನಿಟ್ ಪ್ಲೇಟ್ಲೆಟ್ ರಕ್ತಕಣ ಸಂಗ್ರಹವಾಗಿತ್ತು. ಮೇ ನಲ್ಲಿ ಅತಿಯಾದ ರಕ್ತದ ಕೊರತೆಯಿಂದಾಗಿ ಅಲ್ಲಲ್ಲಿ ಶಿಬಿರ ಏರ್ಪಡಿಸಿದ ಹಿನ್ನೆಲೆ ದಾನಿಗಳು ರಕ್ತ ನೀಡಲು ಮುಂದೆ ಬಂದ ಹಿನ್ನೆಲೆಯಲ್ಲಿ ಪ್ಲೇಟ್ಲೆಟ್ ಸಂಗ್ರಹವಾಗಿತ್ತು. ರಕ್ತ ಪಡೆದುಕೊಂಡ ಬಳಿಕವಷ್ಟೇ ಅದರಿಂದ ಪ್ಲೇಟ್ಲೆಟ್ನ್ನು ಬೇರ್ಪಡಿಸಬೇಕಾಗುತ್ತದೆ.

•ನಗರದಲ್ಲಿ ಡೆಂಗ್ಯೂ ವ್ಯಾಪಕ
•ಆಸ್ಪತ್ರೆಗಳಲ್ಲಿ ಹೆಚ್ಚಿನ ರಕ್ತ ಸಂಗ್ರಹ
•6,464 ಯುನಿಟ್ ರಕ್ತ ಸಂಗ್ರಹ

ರಕ್ತದ ಆವಶ್ಯಕತೆ ಹೆಚ್ಚಿತ್ತು

ಈ ವರ್ಷಾರ್ಧದಲ್ಲಿ ಜುಲೈ ತಿಂಗಳಲ್ಲೇ ಅತಿ ಹೆಚ್ಚು ರಕ್ತದಾನ ವಾಗಿದೆ. ದಾನಿಗಳ ನೆರವಿನಿಂದ ಇಷ್ಟು ರಕ್ತ ಸಂಗ್ರಹವಾಗಲು ಸಾಧ್ಯವಾಗಿದೆ. ಡೆಂಗ್ಯೂ ಜ್ವರವೂ ವ್ಯಾಪಕವಾಗಿದ್ದ ಹಿನ್ನೆಲೆಯಲ್ಲಿ ರಕ್ತದ ಆವಶ್ಯಕತೆ ಬಹಳವಿತ್ತು.
– ಡಾ| ಶರತ್‌ಕುಮಾರ್‌,

ವೆನ್ಲಾಕ್‌ ಪ್ರಾದೇಶಿಕ ರಕ್ತ ಮರುಪೂರಣ ಕೇಂದ್ರದ ಮುಖ್ಯಸ್ಥ
Advertisement

Udayavani is now on Telegram. Click here to join our channel and stay updated with the latest news.

Next