ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದರಲ್ಲಿ ಪ್ರಸರಣ ಮತ್ತು ವಿತರಣೆ ವೇಳೆ ನಷ್ಟವಾಗುತ್ತಿದ್ದ ವಿದ್ಯುತ್ ಪ್ರಮಾಣ 2005-06ರಲ್ಲಿ ಶೇ. 30.96ರಷ್ಟು ಇತ್ತು. ಈ ಪ್ರಮಾಣ 2015-16ಕ್ಕೆ ಶೇ.17.62ಕ್ಕೆ ಇಳಿಕೆಯಾಗಿದೆ.
Advertisement
ಪ್ರಸರಣ ಮತ್ತು ವಿತರಣೆ ನಷ್ಟ ಇಳಿಕೆಯಿಂದ 910 ಕೋಟಿ ಯೂನಿಟ್ ವಿದ್ಯುತ್ ಉಳಿಯುತ್ತಿದ್ದು, ಇದರ ಮೊತ್ತ 5,300 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಮೊತ್ತದಲ್ಲಿ ಗ್ರಾಹಕರ ಮೇಲಿನ ಒಂದು ವರ್ಷದ ವಿದ್ಯುತ್ ದರ ಏರಿಕೆಹೊರೆ ತಗ್ಗಿಸಬಹುದೆಂದು ಮೂಲಗಳು ತಿಳಿಸಿವೆ.
Related Articles
ನಷ್ಟದ ಪ್ರಮಾಣ ಪ್ರಶ್ನಾರ್ಹವಾಗಿದೆ ಎಂದು ಇಂಧನ ತಜ್ಞರು ಅಭಿಪ್ರಾಯಪಡುತ್ತಾರೆ.
Advertisement
ವ್ಯತಿರಿಕ್ತ ಅಂಶಗಳು: ಈ ಮಧ್ಯೆ 2012-13ರಿಂದ 2014-15ರ ವರೆಗಿನ ಕೇಂದ್ರದ ಇಂಧನ ಹಣಕಾಸು ನಿಗಮ (ಪವರ್ ಫೈನಾನ್ಸ್ ಕಾರ್ಪೋರೇಷನ್) ವರದಿ ಹಾಗೂ ಕರ್ನಾಟಕ ಆರ್ಥಿಕ ಸಮೀಕ್ಷೆ ವರದಿಯಲ್ಲಿ ನೀಡಿರುವ ತಾಂತ್ರಿಕ ಮತ್ತು ವಾಣಿಜ್ಯ ನಷ್ಟ (ಎಟಿ ಆ್ಯಂಡ್ ಸಿ ನಷ್ಟ)ದ ಅಂಕಿ-ಅಂಶಗಳಲ್ಲಿ ವ್ಯತ್ಯಾಸ ಇದೆ. ಇಂಧನ ಹಣಕಾಸು ನಿಗಮದಪ್ರಕಾರ ನಷ್ಟದ ಪ್ರಮಾಣ 2012-13ರಲ್ಲಿ ಶೇ.20.78 ಹಾಗೂ 2013-14ರಲ್ಲಿ ಶೇ.22.02 ಮತ್ತು 2014-15ರಲ್ಲಿ ಶೇ.18.71 ಇದೆ. ಆದರೆ, ಆರ್ಥಿಕ ಸಮೀಕ್ಷೆಯಲ್ಲಿ ಇದರ ಪ್ರಮಾಣ ಕ್ರಮವಾಗಿ ಶೇ.19.1 ಹಾಗೂ ಶೇ.18.25 ಮತ್ತು ಶೇ.17.08 ಇದೆ. ಆದ್ದರಿಂದ ಎನರ್ಜಿ ಆಡಿಟ್‌ನಿಂದ ಮಾತ್ರ ಗೊಂದಲ ಬಗೆಹರಿಸಬಹುದು ಎನ್ನುತ್ತವೆ ಇಂಧನ
ಇಲಾಖೆ ಮೂಲಗಳು. ನಿರ್ವಹಣೆ ದಕ್ಷತೆಗೆ 30,339 ಕೋಟಿ ರೂ. ಖರ್ಚು
ಪ್ರಸರಣ ಮತ್ತು ವಿತರಣೆಯಲ್ಲಿ ನಷ್ಟವನ್ನು ತಗ್ಗಿಸಲು ಸಾವಿರಾರು ಕೋಟಿ ರೂ. ವ್ಯಯಿಸಲಾಗಿದೆ. 2005-06ರಿಂದ ಈವರೆಗೆ 30,339 ಕೋಟಿ ರೂ. ಖರ್ಚು ಮಾಡಲಾಗಿದೆ. ಇದು ವಿದ್ಯುತ್ ನಿರ್ವಹಣೆಯಲ್ಲಿ ದಕ್ಷತೆಯನ್ನು ತರಲು ಅತ್ಯಗತ್ಯ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ಹೇಳುತ್ತಾರೆ. ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುವ ಎಚ್‌ಟಿ ಲೈನ್‌ಗಳಲ್ಲಿ ನಷ್ಟದ ಪ್ರಮಾಣ ಕಡಿಮೆ. ಲೋಟೆನÒನ್ ಮಾರ್ಗದಲ್ಲಿ ವಿದ್ಯುತ್ ಕಳ್ಳತನದಂತಹ ನಷ್ಟ ಹೆಚ್ಚು ಎಂದು ತಿಳಿಸಿದ್ದಾರೆ.