ಹೊಸದಿಲ್ಲಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಆಪರೇಷನ್ ಗಂಗಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಸೋಮವಾರ 1,314 ಭಾರತೀಯರನ್ನು 7 ನಾಗರಿಕ ವಿಮಾನಗಳ ಮೂಲಕ ಸ್ವದೇಶಕ್ಕೆ ಕರೆತರಲಾಗಿದೆ.
ಮಂಗಳವಾರ ಸಸೇವಾ, ರೊಮೇನಿಯಾದಿಂದ ಎರಡು ವಿಶೇಷ ವಿಮಾನಗಳು ಕಾರ್ಯಾಚರಣೆ ನಡೆಸಲಿದ್ದು, 400 ಭಾರತೀಯರನ್ನು ವಾಪಸ್ ಕರೆತರಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ.
ಗಾಯಾಳು ವಿದ್ಯಾರ್ಥಿ ಆಗಮನ: ಉಕ್ರೇನ್‌ನಿಂದ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಕೀವ್‌ನಲ್ಲಿ ಗುಂಡೇಟು ತಗುಲಿ ಗಾಯಗೊಂಡಿದ್ದ ಪಂಜಾಬ್‌ನ ವಿದ್ಯಾರ್ಥಿ ಹರ್‌ಜೋತ್ ಸಿಂಗ್ (31) ಅವರು ಸೋಮವಾರ ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿದ್ದಾರೆ. ಕೇಂದ್ರ ಸಚಿವ ವಿ.ಕೆ.ಸಿಂಗ್ ಹಾಗೂ 200 ವಿದ್ಯಾರ್ಥಿಗಳನ್ನು ಹೊತ್ತ ವಾಯುಪಡೆಯ ವಿಮಾನ ಹಿಂಡನ್ ವಾಯುನೆಲೆಯಲ್ಲಿ ಬಂದಿಳಿದಿದೆ.
ಹಂಗೇರಿಯಿಂದ ಕೊನೆಯ ವಿಮಾನವು ಭಾರತ ತಲುಪಿದ್ದು, 6177 ವಿದ್ಯಾರ್ಥಿಗಳನ್ನು ಕರೆತರಲಾಗಿದೆ. ಪ್ರತಿ ಯೊಬ್ಬ ಭಾರತೀಯರನ್ನೂ ವಾಪಸ್ ಕರೆತರಲು ಪ್ರಧಾನಿ ಮೋದಿ ಬದ್ಧರಾಗಿದ್ದಾರೆ ಎಂದು ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಇದೇ ವೇಳೆ, ಪಕ್ಷಪಾತೀಯ ಪ್ರಚಾರದಲ್ಲಿ ತೊಡಗದೇ ಕೇಂದ್ರ ಸರಕಾರವು ಎಲ್ಲ ಭಾರತೀಯರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಕೆಲಸ ಮಾಡಬೇಕು. ಇದು ಭಾರತ ಸರಕಾರದ ಕರ್ತವ್ಯ ವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.