Advertisement

131 ಜನರಿಗೆ ಕೋವಿಡ್‌ ಸೋಂಕು

07:15 PM Apr 29, 2021 | Team Udayavani |

ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್‌-19 ವೈರಸ್‌ಗೆ ಸಂಬಂ ಧಿಸಿದಂತೆ ಬುಧವಾರದವರದಿಯಲ್ಲಿ 131 ಜನರಿಗೆ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ16,990ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ ತಾಲೂಕಿನಲ್ಲಿ 59, ಚಳ್ಳಕೆರೆ 18, ಹಿರಿಯೂರು11, ಹೊಳಲ್ಕೆರೆ 11, ಹೊಸದುರ್ಗ 27, ಮೊಳಕಾಲ್ಮೂರು ತಾಲೂಕಿನಲ್ಲಿ 04 ಹಾಗೂ ಹೊರಜಿಲ್ಲೆಯ 01 ಪ್ರಕರಣ ಸೇರಿದಂತೆ ಒಟ್ಟು 131 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ.ಜಿಲ್ಲೆಯ ಹಲವೆಡೆ ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಬುಧವಾರ 55 ಜನರುಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

Advertisement

ಬುಧವಾರ ಒಟ್ಟು 2287 ಜನರ ಗಂಟಲು,ಮೂಗು ದ್ರವ ಮಾದರಿ ಸಂಗ್ರಹಿಸಿದ್ದು, ವರದಿಯಲ್ಲಿ 131 ಜನರಿಗೆ ಕೋವಿಡ್‌ ಸೋಂಕುಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 16,990 ಕ್ಕೆ ಏರಿಕೆಯಾಗಿದೆ. ಕೋವಿಡ್‌ನಿಂದ ಈವರೆಗೆಒಟ್ಟಾರೆ 71 ಜನ ಮೃತಪಟ್ಟಿದ್ದು, ಎರಡನೇ ಅಲೆಯಿಂದ ಇಬ್ಬರು ಮೃತರಾಗಿದ್ದಾರೆ.

ಸೋಂಕಿತರ ಪೈಕಿ ಈಗಾಗಲೆ 15,937 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು,ಜಿಲ್ಲೆಯಲ್ಲಿ ಸದ್ಯ 982 ಸಕ್ರಿಯ ಪ್ರಕರಣಗಳು ಇವೆ. ಸೋಂಕಿತರಿಗೆ ಸಂಬಂ ಧಿಸಿದಂತೆಒಟ್ಟು 1,36,979 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನುಗುರುತಿಸಲಾಗಿದೆ.

ಈವರೆಗೆ 4,11,379 ಜನರ ಮಾದರಿ ಸಂಗ್ರಹಿಸಲಾಗಿದ್ದು, 3,92,664ಜನರ ವರದಿ ನೆಗೆಟಿವ್‌ ಬಂದಿದೆ. ಉಳಿದ 1016 ಜನರ ವರದಿ ಬರುವುದು ಬಾಕಿ ಇದೆ.709 ಮಾದರಿಗಳು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲದ ಕಾರಣ ತಿರಸ್ಕೃತಗೊಂಡಿವೆಎಂದು ಜಿಲ್ಲಾ ಸರ್ವೇಕ್ಷಣಾಧಿ ಕಾರಿ ಡಾ.ತುಳಸಿರಂಗನಾಥ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next