Advertisement

ಬಾಗಲಕೋಟೆ: ಅರ್ಧಶತಕ ದಾಟಿದ ಸಾವಿನ ಸಂಖ್ಯೆ ; 131 ಹೊಸ ಪಾಸಿಟಿವ್ ಪ್ರಕರಣ

09:58 PM Aug 02, 2020 | Hari Prasad |

ಬಾಗಲಕೋಟೆ: ವಿಶ್ವ ಗುರು ಬಸವಣ್ಣನವರ ಐಕ್ಯನಾಡು ಬಾಗಲಕೋಟೆ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನ ಆರ್ಭಟ ದಿನೇ ದಿನೇ ಹೆಚ್ಚುತ್ತಲೇ ಇದೆ.

Advertisement

ರವಿವಾರ ಕೋವಿಡ್‌ನಿಂದ ಮತ್ತೆ ಇಬ್ಬರು ಮೃತಪಟ್ಟಿದ್ದಾರೆ. ಈವರೆಗೆ ಈ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಒಟ್ಟು ಕೋವಿಡ್ 19 ಸೋಂಕಿತರ ಸಂಖ್ಯೆ 1944ಕ್ಕೆ ತಲುಪಿದೆ.

ರಬಕವಿ: ಬನಹಟ್ಟಿ ತಾಲೂಕಿನ ರಬಕವಿಯ 62 ವರ್ಷದ ಪುರುಷ ಜುಲೈ 28ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮಧುಮೇಹ ಹಾಗೂ ಹೃದಯ ರೋಗ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಸ್ಥಳೀಯ ರ್‍ಯಾಪಿಡ್ ಟೆಸ್ಟ್ ನಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ರವಿವಾರ ಆ ವ್ಯಕ್ತಿ ಮೃತಪಟ್ಟಿದ್ದಾರೆ.

ಅಲ್ಲದೇ ಬಾದಾಮಿ ತಾಲೂಕು ತಿಮ್ಮಸಾಗರದ 67 ವರ್ಷದ ಪುರುಷ ಜು. 27ರಂದು ಕೋವಿಡ್ 19 ಸೋಂಕಿನ ಲಕ್ಷಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ರಕ್ತದೊತ್ತಡ, ಉಸಿರಾಟದ ತೊಂದರೆಯಿಂದ ರವಿವಾರ ಮೃತಪಟ್ಟಿದ್ದಾರೆ. ಮೃತಪಟ್ಟ ಇಬ್ಬರ ಅಂತ್ಯಕ್ರಿಯೆಯನ್ನೂ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಡಿಎಚ್‌ಒ ಡಾ|ಅನಂತ ದೇಸಾಯಿ ತಿಳಿಸಿದ್ದಾರೆ.

Advertisement

ಮುಂದುವರೆದ ಸೋಂಕಿನ ಅಟ್ಟಹಾಸ
ಜಿಲ್ಲೆಯಲ್ಲಿ ಕೋವಿಡ್ ಕಿನ ರಣಕೇಕೆ ಮುಂದುವರೆದಿದ್ದು, ಭೀತಿ ಹೆಚ್ಚುತ್ತಲೇ ಇದೆ. ಒಟ್ಟು ಸೋಂಕಿತರ ಸಂಖ್ಯೆ 2 ಸಾವಿರ ಗಡಿಯತ್ತ ದಾಪುಗಾಲಿಡುತ್ತಿದೆ. ಎರಡೇ ದಿನದಲ್ಲಿ ಜಿಲ್ಲೆಯ 17 ಹೊಸ ಪ್ರದೇಶಗಳಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 176 ಕಂಟೈನ್‌ಮೆಂಟ್ ಝೋನ್‌ಗಳಿವೆ.

ಕೋವಿಡ್ ಆಸ್ಪತ್ರೆ ಸಿಬ್ಬಂದಿಗೂ ಕೋವಿಡ್19:
ನವನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯ ಮೂವರು ಸಿಬ್ಬಂದಿಗೂ ಕೋವಿಡ್ 19 ಸೋಂಕು ತಗುಲಿದೆ. ಇಬ್ಬರು ಲ್ಯಾಬ್ ಟೆಕ್ನಿಶಿಯನ್ಸ ಸಹಿತ ಮೂವರಿಗೆ ಸೋಂಕು ದೃಢಪಟ್ಟಿದೆ. 45 ಮತ್ತು 25 ವರ್ಷದ ಇಬ್ಬರು ಮಹಿಳೆಯರು, 58 ವರ್ಷದ ಓರ್ವ ಪುರುಷ ಸಿಬ್ಬಂದಿಗೆ ಸೋಂಕು ತಗುಲಿರುವುದು ರವಿವಾರದ ಹೆಲ್ತ್ ಬುಲೆಟಿನ್ ನಲ್ಲಿ ಖಚಿತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next