ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿಂದು ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಅಧಿಕ ಇದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 1301 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ತಗುಲಿದ್ದು, 17 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಆ.27) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ 1614 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಬಿಡುಗಡೆಯಾದವರ ಸಂಖ್ಯೆ 2888520 ಆಗಿದೆ.
ಇನ್ನು ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 18970 ಇದೆ. ಪಾಟಿಸಿಟಿವಿಟಿ ದರ 0.69% ಹಾಗೂ ಡೆತ್ ರೇಟ್ 1.30 % ಇದೆ .
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-1, ಬಳ್ಳಾರಿ-5, ಬೆಳಗಾವಿ-19, ಬೆಂಗಳೂರು ಗ್ರಾಮಾಂತರ-13, ಬೆಂಗಳೂರು ನಗರ-386, ಬೀದರ್-1, ಚಾಮರಾಜನಗರ-5, ಚಿಕ್ಕಬಳ್ಳಾಪುರ-2, ಚಿಕ್ಕಮಗಳೂರು-25, ಚಿತ್ರದುರ್ಗ-5, ದಕ್ಷಿಣ ಕನ್ನಡ-248, ದಾವಣಗೆರೆ-14, ಧಾರವಾಡ-6, ಗದಗ-1, ಹಾಸನ-117, ಹಾವೇರಿ-4, ಕಲಬುರಗಿ-7, ಕೊಡಗು-78, ಕೋಲಾರ-14, ಕೊಪ್ಪಳ-1, ಮಂಡ್ಯ-26, ಮೈಸೂರು-72, ರಾಯಚೂರು-0, ರಾಮನಗರ-3, ಶಿವಮೊಗ್ಗ-62, ತುಮಕೂರು-37, ಉಡುಪಿ-106, ಉತ್ತರ ಕನ್ನಡ-38, ವಿಜಯಪುರ-4, ಯಾದಗಿರಿ-1.