Advertisement

ಸ್ಯಾಮ್‌ಸಂಗ್‌ ಕ್ಯಾಂಟೀನ್‌ನಲ್ಲಿ 13 ಟನ್‌ ಅನ್ನ!

08:30 PM Dec 15, 2019 | Lakshmi GovindaRaj |

ಯಾವುದೇ ದೇಶದ ಆರ್ಥಿಕ ಪ್ರಗತಿಯನ್ನು ಜಿಡಿಪಿ ಮೂಲಕ ಅಳೆಯಲಾಗುತ್ತದೆ. ಜಿಡಿಪಿಯನ್ನು ಮಾಪನ ಮಾಡುವಾಗ, ಕೃಷಿ, ಗಣಿಗಾರಿಕೆ, ಕಾರ್ಖಾನೆಗಳು, ಅರಣ್ಯ, ಮೀನುಗಾರಿಕೆ, ವ್ಯಾಪಾರ, ಸಾರಿಗೆ, ರಿಯಲ್‌ ಎಸ್ಟೇಟ್‌. ಸಾರ್ವಜನಿಕ ಸ್ವತ್ತು ಇನ್ನೂ ಹಲವು ಕ್ಷೇತ್ರಗಳ ಸ್ಥಿತಿಗತಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವಿಯೆಟ್ನಾಮ್‌ ದೇಶದ ಜಿಡಿಪಿ 6.8% ನಷ್ಟಿದೆ.

Advertisement

ಅದರ ಜಿಡಿಪಿಯಲ್ಲಿ ಶೇ. 28ರಷ್ಟು ಪಾಲು ಸ್ಯಾಮ್‌ಸಂಗ್‌ ಸಂಸ್ಥೆಯೊಂದರಿಂದಲೇ ಬರುತ್ತಿದೆ ಎನ್ನುವುದು ಅಚ್ಚರಿಯ ಸಂಗತಿ. ಖಾಸಗಿ ಸಂಸ್ಥೆಯೊಂದು ದೇಶದ ಆರ್ಥಿಕ ಪ್ರಗತಿಯಲ್ಲಿ ಈ ಮಟ್ಟದಲ್ಲಿ ಪ್ರಭಾವ ಬೀರುತ್ತಿದೆ ಎಂದರೆ ಅ ಸಂಸ್ಥೆ ಯಾವ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.

ಪ್ರಪಂಚದ ಯಾವ ದೇಶದಲ್ಲೂ ಇಲ್ಲಿ ತಯಾರಾಗುವಷ್ಟು ಸ್ಮಾರ್ಟ್‌ಫೋನುಗಳು ತಯಾರಾಗದು. ಅಲ್ಲಿ, ತನ್ನ ಸಂಸ್ಥೆಯ ನೌಕರರಿಗೆಂದೇ ಕಟ್ಟಿರುವ ಮೂರು ಕ್ಯಾಂಟೀನ್‌ಗಳಲ್ಲಿ ದಿನಕ್ಕೆ ತಯಾರಾಗುವ ಅನ್ನದ ಪ್ರಮಾಣ 13 ಟನ್‌ಗಳಷ್ಟು. ಸಂಸ್ಥೆ, ವಿಯೆಟ್ನಾಮ್‌ನಲ್ಲಿ 17 ಶತಕೋಟಿ ಡಾಲರ್‌ನಷ್ಟು ಹಣವನ್ನು ಬಂಡವಾಳದ ರೂಪದಲ್ಲಿ ವಿನಿಯೋಗಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next