Advertisement

13 ಪ್ರಾಥಮಿಕ ಸಂಪರ್ಕಿತರಿಗೆ ಸೋಂಕು

06:20 AM Jun 09, 2020 | Team Udayavani |

ಬೆಂಗಳೂರು: ನಗರದಲ್ಲಿ ಸೋಮವಾರ ಒಟ್ಟು 18ಜನರಲ್ಲಿ ಕೋವಿಡ್‌ 19 ದೃಢಪಟ್ಟಿದ್ದು, ಇವರಲ್ಲಿ ಒಟ್ಟು 13ಜನ ಈಗಾಗಲೇ ಸೋಂಕು ದೃಢಪಟ್ಟವರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರಾಗಿದ್ದಾರೆ. ಈ ಮೂಲಕ ನಗರದಲ್ಲಿ ಒಟ್ಟು  ಸೋಂಕಿತರ ಸಂಖ್ಯೆ 493ಕ್ಕೆ ಏರಿಕೆಯಾದಂತಾಗಿದೆ. ಪಾರ್ವತಿಪುರಂನಲ್ಲಿ ಸೋಂಕು ದೃಢಪಟ್ಟ ವ್ಯಕ್ತಿಯ ಸಂಪರ್ಕದಲ್ಲಿದ್ದ ಏಳು ಜನರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ನಾಲ್ವರು ಪಾರ್ವತಿಪುರ ಹಾಗೂ ಮೂವರು ಕಲಾಸಿಪಾಳ್ಯಕ್ಕೆ  ಸೇರಿದವರಾಗಿದ್ದಾರೆ.

Advertisement

(ಪಾರ್ವತಿಪುರದಲ್ಲಿನ ನಾಲ್ವವರು ರೋಗಿ ಸಂಖ್ಯೆ -5460, 5461, 5462 ಹಾಗೂ 5467. ಕಲಾಸಿಪಾಳ್ಯದಲ್ಲಿನ ಮೂವರಲ್ಲಿ 5469,5470 ಹಾಗೂ 5471) ಸೇರಿದ್ದಾರೆ. ಇದೇ ರೀತಿ ಸೋಮೇಶ್ವರ ನಗರದಲ್ಲಿ ಸೋಂಕು ದೃಢಪಟ್ಟಿದ್ದ ರೋಗಿ ಸಂಖ್ಯೆ -2764ರ ಸಂಪರ್ಕದಲ್ಲಿದ್ದ ಮೂವರಿಗೆ (ರೋಗಿ ಸಂಖ್ಯೆ 5464, 5466 ಹಾಗೂ 5472)ಸೋಂಕು ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 26 ವರ್ಷದ ಯುವತಿ (ರೋಗಿ ಸಂಖ್ಯೆ -5456),  ಪಾವರ್ತಿಪುರ ಕಂಟೈನ್ಮೆಂಟ್‌ ಝೋನ್‌ನಲ್ಲಿನ 30 ವರ್ಷದ ಯುವಕ (ರೋಗಿ ಸಂಖ್ಯೆ -5457), ತಮಿಳುನಾಡಿನಿಂದ ಹಿಂದಿರುಗಿದ ಒಬ್ಬರಲ್ಲಿ (ರೋಗಿ ಸಂಖ್ಯೆ 5458).

ಇನ್ನು ಕೋವಿಡ್‌ 19 ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ಸೋಂಕು ಪರೀಕ್ಷಗೆ ಒಳಪಟ್ಟ ಕಲಾಸಿಪಾಳ್ಯ ಕಂಟೈನ್ಮೆಂಟ್‌ ಝೋನ್‌ 23 ವರ್ಷದ ಯುವಕ (ರೋಗಿ ಸಂಖ್ಯೆ -5459), ಅದೇ ರೀತಿ ಕಲಾಸಿಪಾಳ್ಯದಲ್ಲಿ ಸೋಂಕು ದೃಢಪಟ್ಟ 5342ರ ಸಂಪರ್ಕದಲ್ಲಿದ್ದ 18 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ. ಮಾರುತಿ ಲೇಔಟ್‌ನಲ್ಲಿನ ಸೋಂಕು ದೃಢಪಟ್ಟ ರೋಗಿ ಸಂಖ್ಯೆ -2900ರ ಸಂಪರ್ಕದಲ್ಲಿದ್ದ 23 ವರ್ಷದ ಯುವಕ (ರೋಗಿ ಸಂಖ್ಯೆ 5465) ಹಾಗೂ ರೋಗಿ ಸಂಖ್ಯೆ -2519ರ ಸಂಪರ್ಕದಲ್ಲಿದ್ದ ಬಸವೇಶ್ವರ ನಗರದ 45 ವರ್ಷದ  ಮಹಿಳೆ (ರೋಗಿ ಸಂಖ್ಯೆ -5473)ಗೆ ಕೋವಿಡ್‌ 19 ದೃಢಪಟ್ಟಿದೆ. ಇನ್ನು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 65 ವರ್ಷದ ಮಹಿಳೆ (ರೋಗಿ ಸಂಖ್ಯೆ -5468) ಅವರು ಮೃತಪಟ್ಟಿದ್ದು, ಸೋಮವಾರ ದೃಢಪಟ್ಟ ಪ್ರಕರಣಗಳಲ್ಲಿ  ಇದನ್ನು ಸೇರಿಸಲಾಗಿದೆ.

ಭಾನುವಾರ ನಗರದಲ್ಲಿ ಸೋಂಕಿನಿಂದ ಮೂವರು ಮೃತಪಟ್ಟಿದ್ದು, ಕೋವಿಡ್‌ 19ದಿಂದ ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾದಂತಾಗಿದೆ. ಹೃದಯ ಸಂಬಂಧಿ ಸಮಸ್ಯೆ ಎದುರಿಸುತ್ತಿದ್ದ 67  ವರ್ಷದ ವೃದಟಛಿ (ರೋಗಿ ಸಂಖ್ಯೆ -4851) ಜೂ.4ಕ್ಕೆ ಆಸ್ಪತ್ರೆ ದಾಖಲಾಗಿದ್ದರು. ಚಿಕಿತ್ಸೆ ಫ‌ಲಿಸದೆ ಸೋಮವಾರಮೃತಪಟ್ಟಿದ್ದಾರೆ. ಇನ್ನು ಸೋಂಕಿನ ಲಕ್ಷಣಗಳಿಂದ ಸಮಸ್ಯೆ ಎದುರಿಸುತ್ತಿದ್ದ 48 ವರ್ಷದ ಮಹಿಳೆ (ರೋಗಿ ಸಂಖ್ಯೆ -5335)  ಹಾಗೂ 65 ವರ್ಷದ ವೃದ್ಧೆ (ರೋಗಿ ಸಂಖ್ಯೆ 5468) ಸಹ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆ ಸೀಲ್‌ಡೌನ್‌: ಬೆಂಗಳೂರು-ಪೊಲೀಸ್‌ ವಶದಲ್ಲಿದ್ದ ಮೂವರು ಆರೋಪಿಗಳ ಪೈಕಿ ಒಬ್ಬನಿಗೆ ಕೋವಿಡ್‌ 19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯನ್ನು  ಸಂಪೂರ್ಣವಾಗಿ ಸೀಲ್‌ ಡೌನ್‌ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಸುಲಿಗೆ ಪ್ರಕರಣವೊಂದರಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಎರಡು ದಿನ ಪೊಲೀಸ್‌ ವಶದಲ್ಲಿ ಇಡಲಾಗಿತ್ತು. ಅಲ್ಲದೆ, ಜೂನ್‌ ರಂದು ಮೂವರು ಆರೋಪಿಗಳಿಗೆ ಕೋವಿಡ್‌ 19 ಪರೀಕ್ಷೆ ನಡೆಸಲಾಗಿತ್ತು. ಶನಿವಾರ ವರದಿ ಬಂದಿದ್ದು, ಒಬ್ಬನಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿದೆ. ಇಬ್ಬರಿಗೆ ನೆಗೆಟಿವ್‌ ಬಂದಿದೆ ಎಂಬುದು ಗೊತ್ತಾಗಿದೆ ಎಂದು ಠಾಣೆಯ  ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

Advertisement

17 ಮಂದಿ ಕ್ವಾರಂಟೈನ್‌: ಈ ಹಿನ್ನೆಲೆಯಲ್ಲಿ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂವರು ಸಬ್‌ ಇನ್‌ ಸ್ಪೆಕ್ಟರ್‌ ಸೇರಿ 17 ಮಂದಿಯನ್ನು ಹೋಮ್‌ ಕ್ವಾರಂಟೈನ್‌ ಮಾಡಲಾಗಿದ್ದು, ಚಿಕಿತ್ಸೆಗೂ  ಸೂಚಿಸಲಾಗಿದೆ. ಈ ಅಧಿಕಾರಿ-ಸಿಬ್ಬಂದಿ ಆರೋಪಿಯ ಪ್ರಾಥಮಿಕ ಸಂಪರ್ಕದಲ್ಲಿದ್ದರು. ಹೀಗಾಗಿ ಕ್ವಾರಂಟೈನ್‌ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಮಹಾರಾಷ್ಟ್ರದಿಂದ ಬರುವವರಿಗೆ ಏಳು ದಿನ ಮಾತ್ರ ಗೃಹ ದಿಗ್ಬಂಧನ: ಮಹಾರಾಷ್ಟ್ರದಿಂದ ರಾಜ್ಯ ಪ್ರವೇಶಿಸುವವರಿಗೆ ಏಳು ದಿನಗಳ ಸಾಂಸ್ಥಿಕ ದಿಗ್ಬಂಧನ ಹಾಗೂ ಏಳು ದಿನಗಳ ಗೃಹ ದಿಗ್ಬಂಧನ ವಿಧಿಸಿ ರಾಜ್ಯ ಸರ್ಕಾರ ಸೋಮವಾರ  ಆದೇಶ ಹೊರಡಿಸಿದೆ. ಸೋಮವಾರದಿಂದ ಜಾರಿಯಾಗಿರುವ ಅನ್‌ಲಾಕ್‌ 1ರ ಅಡಿ ಅಂತಾರಾಜ್ಯ ಪ್ರಯಾಣಿಕರು ರಾಜ್ಯ ಪ್ರವೇಶಿಸುವುದಕ್ಕೆ ಸಂಬಂಧಪಟ್ಟಂತೆ ಶಿಷ್ಟಾಚಾರ ನಿಯಮಗಳಿಗೆ ಸಂಬಂಧಪಟ್ಟಂತೆ ಮುಖ್ಯ ಕಾರ್ಯದರ್ಶಿ  ಟಿ.ಎಂ. ವಿಜಯ ಭಾಸ್ಕರ್‌ ಆದೇಶ ಹೊರಡಿಸಿದ್ದಾರೆ. ಅದರಂತೆ ಮಹಾರಾಷ್ಟ್ರದಿಂದ ರಾಜ್ಯ ಪ್ರವೇಶಿಸುವವರಿಗೆ ಈವರೆಗೆ ಏಳು ದಿನಗಳ ಸಾಂಸ್ಥಿಕ ದಿಗ್ಬಂಧನ ಹಾಗೂ 15 ದಿನಗಳ ಗೃಹ ದಿಗ್ಬಂಧನ ವಿಧಿಸಲಾಗಿತ್ತು.

ಇದೀಗ ಗೃಹ  ದಿಗ್ಬಂಧನ ಅವಧಿಯನ್ನು 15 ದಿನದಿಂದ ಏಳು ದಿನಕ್ಕೆ ಇಳಿಕೆ ಮಾಡಲಾಗಿದೆ. ವ್ಯಾಪಾರ ವಹಿವಾಟು ಹಿನ್ನೆಲೆಯಲ್ಲಿ ಎರಡು ದಿನದ ಪಾಸ್‌ ಪಡೆದು ರಾಜ್ಯಕ್ಕೆ ಬರುವವರಿಗೆ ಈ ಹಿಂದೆ ಸೋಂಕು ಪರೀಕ್ಷೆ ಕಡ್ಡಾಯವಿತ್ತು. ಇದೀಗ ಅದರಿಂದ  ವಿನಾಯಿತಿ ನೀಡಲಾಗಿದೆ. ಹೊರ ರಾಜ್ಯದಿಂದ ಬಂದವರು 48 ಗಂಟೆಗಳ ಕಾಲಮಿತಿಯಲ್ಲಿ ತೆರಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅದೇ ರೀತಿ ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ವ್ಯಾಪಾರ ವಹಿವಾಟು ಕಾರಣಕ್ಕೆ ಹೋದಾಗ  ಅಲ್ಲಿಯೂ ಸೋಂಕು ಪರೀಕ್ಷೆ ಇರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next