Advertisement

Laos ಸೈಬರ್‌ ಕೇಂದ್ರಗಳಲ್ಲಿ ಸಿಲುಕಿದ್ದ ಭಾರತೀಯರ ರಕ್ಷಣೆ

01:06 AM Jul 22, 2024 | Team Udayavani |

ಹೊಸದಿಲ್ಲಿ: ಲಾವೋಸ್‌ನ ಹಲವು ಸೈಬರ್‌ ಸ್ಕ್ಯಾಮಿಂಗ್‌ ಕೇಂದ್ರಗಳಿಗೆ ಆಕರ್ಷಿತರಾಗಿ ಹೋಗಿ ಸಿಲುಕಿಕೊಂಡಿದ್ದ 13 ಮಂದಿ ಭಾರತೀಯರನ್ನು ರಕ್ಷಿಸಿ ತಾಯ್ನಾಡಿಗೆ ಕಳುಹಿಸಲಾಗಿದೆ ಎಂದು ಅಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಭಾರತೀಯರ ಸುರಕ್ಷತೆ ಹಾಗೂ ಕ್ಷೇಮಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ರಾಯಭಾರ ಕಚೇರಿಯು 13 ಭಾರತೀಯರನ್ನು ಲಾವೋಸ್‌ನ ಸೈಬರ್‌ ಸ್ಕ್ಯಾಮಿಂಗ್‌ ಕೇಂದ್ರಗಳಿಂದ ರಕ್ಷಿಸಿ ಸ್ವದೇಶಕ್ಕೆ ಕಳುಹಿಸಿದೆ. ಈವರೆಗೆ 518 ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಟ್ವೀಟ್‌ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next