Advertisement

ಭವನ ಬೀಳಿಸಲು ಹೋಗಿ ನೀರಿನ ಘಟಕ ಕೆಡವಿದ್ರು!

02:59 PM Jan 23, 2021 | Team Udayavani |

ನಂಜನಗೂಡು: ನಗರದ ಮಧ್ಯಭಾಗದಲ್ಲಿರುವ ಅಂಬೇಡ್ಕರ್‌ ಭವನ ಕಟ್ಟಡವನ್ನು ಬೀಳಿಸಲು ಹೋಗಿ ಅದರೊಂದಿಗೆ ಪಕ್ಕದಲ್ಲಿದ್ದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ವಸತಿ ನಿಲಯದ ಕಾಂಪೌಂಡ್‌ ಅನ್ನೂ ಕೆಡವಿರುವ ಘಟನೆ ಸಂಭವಿಸಿದೆ. ಸಂಸದ ಶ್ರೀನಿವಾಸ್‌ ಪ್ರಸಾದ್‌ ಅವರು ಇಲ್ಲಿನ ಶ್ರೀರಾಂಪುರ ಬಡಾವಣೆಯ ಜನತೆಯ ಅನುಕೂಲಕ್ಕಾಗಿ ತಮ್ಮ ಸಂಸದ ನಿಧಿಯಿಂದ ನಿರ್ಮಿಸಿದ್ದ ಅಂಬೇಡ್ಕರ್‌ ಭವನವು 17 ಕೇವಲ ವರ್ಷಕ್ಕೆ ಶಿಥಿಲವಾಗಿತ್ತು. ಈ ಕಟ್ಟಡ ಕೆಡವಿ 50 ಲಕ್ಷ ರೂ. ವೆಚ್ಚದಲ್ಲಿ ನೂತನ ಭವನ ನಿರ್ಮಿಸಲು ನಗರಸಭೆ ಯೋಜನೆ ರೂಪಿಸಿ, ಗುತ್ತಿಗೆದಾರರಿಗೆ ಕಾಮಗಾರಿ ಹೊಣೆ ನೀಡಿತ್ತು.

Advertisement

ಈ ಕಾಮಗಾರಿ ಪಡೆದ ಗುತ್ತಿಗೆದಾರರು ಹಳೆಯ ಕಟ್ಟಡವನ್ನು ಕೆಡವಲು ಆರಂಭಿಸಿದಾಗ, ಹಳೆಯ ಕಟ್ಟಡದ ಜೊತೆಗೆ ಪಕ್ಕದಲ್ಲಿದ್ದ ಶುದ್ಧ ಕುಡಿಯುವ ನೀರಿನ ಘಟಕವೂ ಸಂಪೂರ್ಣವಾಗಿ ನೆಲಕಚ್ಚಿದೆ. ಅಲ್ಲದೇ ಹಾಸ್ಟೆಲ್‌ ಕಾಂಪೌಡ್‌ ಕೂಡ ಧ್ವಂಸವಾಗಿದೆ. ಮಾಜಿ ಸಂಸದ ಆರ್‌.ಧ್ರುವನಾರಾಯಣ ಹಾಗೂ ಕಳಲೆ ಕೇಶವಮೂರ್ತಿ ಶಾಸಕರಾಗಿದ್ದಾಗ ಸುತ್ತಮುತ್ತಲಿನ ಜನತೆಯ ಅನುಕೂಲಕ್ಕಾಗಿ ನಿರ್ಮಿಸಿದ್ದ ಶುದ್ಧ ನೀರಿನ ಘಟಕ ನಿರ್ಮಿಸಲಾಗಿತ್ತು.

ಅಂಬೇಡ್ಕರ್‌ ಭವನ ಕಟ್ಟಡವನ್ನು ಕೆಡವಲು ಆರಂಭಿಸಿದಾಗ ನಗರಸಭೆಯ ಎಂಜಿನಿಯರ್‌ ಆಗಲಿ ಅಥವಾ ಗುತ್ತಿಗೆದಾರರಾಗಲಿಸ್ಥಳದಲ್ಲಿ ಇರಲಿಲ್ಲ. ಕೇವಲ ಕಾರ್ಮಿಕರು  ಮಾತ್ರ ಸ್ಥಳದಲ್ಲಿದ್ದು, ಹಿಂದೆ ಮುಂದೆ ನೋಡದೆ ಏಕಾಏಕಿ ಕಟ್ಟಡವನ್ನು ಬೀಳಿಸಲು ನಡೆಸಿದ ಪ್ರಯತ್ನವೇ ಈ ಅನಾಹುತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈಗ ಶ್ರೀರಾಂಪುರ, ಆನಂದಪುರ ಹಾಗೂ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗರು ಶುದ್ಧ ನೀರು ಘಟಕ ನೆಲಕಚ್ಚಿದ್ದರಿಂದ ಪರದಾಡುವಂತಾಗಿದೆ. ಅಲ್ಲದೇ ಸಮಾಜ ಕಲ್ಯಾಣ ಇಲಾಖೆಯ ಆಧೀನದ ಬಾಲಕಿಯರೇ ಇರುವ ವಸತಿ ನಿಲಯದ ಕಾಂಪೌಂಡ್‌ ಬಿದ್ದು ಹೋಗಿರುವುದರಿಂದ ಅಲ್ಲಿನ ಬಾಲಕಿಯರ ರಕ್ಷಣೆಯ ಸಮಸ್ಯೆ ಕೂಡ ಎದುರಾಗಿದೆ.

ಇದನ್ನೂ ಓದಿ:ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕೇಂದ್ರಕ್ಕೆ ಶಿಫಾರಸ್ಸು : ಕಟೀಲ್ ಹೇಳಿಕೆ

13 ಲಕ ರೂ.ವೆಚ್ಚದ ಶುದ್ಧಕುಡಿವ ನೀರಿನ ಘಟಕ ಧ್ವಂಸ

Advertisement

ಸೂಕ್ತ ಸಿದ್ಧತೆ, ಪೂರ್ವ ತಯಾರಿ ಇಲ್ಲದ ಕಾರಣ ಅಂಬೇಡ್ಕರ್‌  ವನವನ್ನು ಕೆಡವಿದ್ದರಿಂದ 13 ಲಕ್ಷ ವೆಚ್ಚದ ಶುದ್ಧ ನೀರಿನ ಘಟಕ ಧ್ವಂಸವಾಗಿದೆ. ಇದರ ಹೊಣೆ ಯಾರು ಹೊತ್ತುಕೊಳ್ಳಬೇಕು ಎಂಬುದು ಗೊಂದಲಕ್ಕೆ ಕಾರಣವಾಗಿದೆ. ಈಗಾಗಲೇ ನಗರಸಭೆ ಮುಖ್ಯಾಧಿಕಾರಿಗಳು ಕಟ್ಟಡದ ಹೊಣೆ ಹೊತ್ತಿರುವ ಗುತ್ತಿಗೆದಾರರೇ ಘಟಕ ಹಾಗೂ ಕಾಂಪೌಂಡ್‌ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಗುತ್ತಿಗೆದಾರರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಾರೆ ಅಧಿಕಾರಿಗಳು ಹಾಗೂ ಗುತ್ತೆದಾರರ ಎಡವಟ್ಟಿನಿಂದ ಸ್ಥಳೀಯ ನಿವಾಸಿಗಳು ಶುದ್ಧ ನೀರಿಗಾಗಿ ತೊಂದರೆ ಅನುಭವಿಸುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next