Advertisement

2 ದಿನದಲ್ಲಿ 13 ಬಾರಿ ಕಾರು ತಪಾಸಣೆ: ಸಿಎಂ

02:57 AM Apr 05, 2019 | Team Udayavani |

ಕಾರವಾರ: “ಬುಧವಾರದಿಂದ ಕಾರಿನಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಎರಡು ದಿನದಲ್ಲಿ ಒಟ್ಟು 13 ಸಲ ನನ್ನ ಕಾರು ತಪಾಸಣೆ ಮಾಡಲಾಗಿದೆ’ಎಂದು ಸಿಎಂ ಕುಮಾರಸ್ವಾಮಿ ಚುನಾವಣಾ ಆಯೋಗದ ವಿರುದ್ಧ ಅಸಮಾಧಾನ ಹೊರಹಾಕಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕನ್ನಡದಲ್ಲೇ ಗೋಕರ್ಣದಿಂದ ಕಾರವಾರ ತಲುಪುವ ವೇಳೆಗೆ ಎರಡು ಸಲ ವಾಹನ ತಪಾಸಣೆ ಮಾಡಲಾಗಿದೆ. ಬೆಂಬಲಿಗರ ವಾಹನಗಳನ್ನು ಸಹ ತಪಾಸಣೆ ಮಾಡಲಾಗುತ್ತಿದೆ. ಮಂಡ್ಯದಲ್ಲಿ ಎದುರಾಳಿಗಳ ವಾಹನಗಳಲ್ಲಿ ಏನು ಸಾಗಿಸಬೇಕೋ ಅದನ್ನು ಆರಾಮದಿಂದ ಸಾಗಿಸುತ್ತಲೇ ಇದ್ದಾರೆ. ಹಣ ಎಲ್ಲಿ ಸೇರಬೇಕು ಅಲ್ಲಿ ಸೇರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮನ್ನು ಗುರಿ ಮಾಡಿ ತಪಾಸಣೆ ಮಾಡುವುದು ಎಷ್ಟು ಸರಿ? ಇದನ್ನು ಚುನಾವಣಾ ಆಯೋಗ ಪರಿಶೀಲಿಸಬೇಕು. ಈ ತಾರತಮ್ಯ ಯಾಕೆ? ಅಧಿ ಕಾರಿಗಳು ಚುನಾವಣಾ ಆಯೋಗದ ನಿರ್ದೇಶನವಿದೆ ಎಂದು ಹೇಳುತ್ತಿದ್ದಾರೆ. ನಾನು ಸಹ ತಪಾಸಣೆ ಮಾಡಿಕೊಳ್ಳಿ ಎನ್ನುತ್ತಿದ್ದೇನೆ. ಆದರೆ ಎರಡು ದಿನದಲ್ಲಿ 13 ಕಡೆ ತಪಾಸಣೆ ಮಾಡಲಾಗಿದೆ ಯಾವುದೂ ಅತಿಯಾಗಬಾರದು ಎಂದರು.

ಬಾಲಕೃಷ್ಣ ಏನು ಹೇಳ್ತಾರೆ ಈಗ?: ಐಟಿ ಅಧಿಕಾರಿ ಮೇಲೆ ನಡೆದ ಸಿಬಿಐ ದಾಳಿಯಲ್ಲಿ 15 ಲಕ್ಷ ನಗದು ಮೊದಲು ಸಿಕ್ಕಿದೆ. ನಂತರ ಅಧಿ ಕಾರಿಯ ಮನೆಯಲ್ಲಿ 1 ಕೋಟಿಗೂ ಹೆಚ್ಚಿನ ಹಣ ಸಿಕ್ಕಿದೆ. ಇದು ಐಟಿ ನಿರ್ದೇಶಕ ಬಾಲಕೃಷ್ಣ ಅವರ ಕೆಳಗಿನ ಅಧಿ ಕಾರಿಗಳ ಕತೆ. ಇಂಥ ಭ್ರಷ್ಟರನ್ನು ಇಟ್ಟುಕೊಂಡು ಐಟಿ ನಿರ್ದೇಶಕ ಕಾಂಗ್ರೆಸ್‌-ಜೆಡಿಎಸ್‌ ನಾಯಕರು ಮತ್ತು ಆಪ್ತರ ಮನೆಯ ಮೇಲೆ ದಾಳಿ ಮಾಡಿಸುತ್ತಾರೆ. ಮಂಡ್ಯ, ಹಾಸನದ ಗುತ್ತಿಗೆದಾರರ ಮೇಲೆ ದಾಳಿ ಮಾಡಲಾಗುತ್ತದೆ. ಉಳಿದ ಜಿಲ್ಲೆಗಳಲ್ಲಿ ಗುತ್ತಿಗೆದಾರರು ಇಲ್ಲವೇ? ಬಿಜೆಪಿ ನಾಯಕರ ಮನೆಗಳು ಇವರಿಗೆ ಕಾಣುವುದಿಲ್ಲವೇ? ಎಲ್ಲವನ್ನೂ ಜನತೆ ನೋಡುತ್ತಿದ್ದಾರೆ. ಇದಕ್ಕೆ ಜನರೇ ಐಟಿ ಅಧಿಕಾರಿಗಳಿಗೆ ಉತ್ತರ ಕೊಡುವ ಸಮಯ ಬರಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next