ಮಧ್ಯಪ್ರದೇಶ/ಧಾರ್: ಮಹಾರಾಷ್ಟ್ರದ ಸರ್ಕಾರಿ ಸಾರಿಗೆ ಬಸ್ ಸೋಮವಾರ (ಜುಲೈ 18) ಮಧ್ಯಪ್ರದೇಶದ ನರ್ಮದಾ ನದಿಗೆ ಉರುಳಿ ಬಿದ್ದ ಪರಿಣಾಮ 13 ಪ್ರಯಾಣಿಕರು ಸಾನ್ನಪ್ಪಿದ್ದು, 15 ಜನರನ್ನು ರಕ್ಷಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಮತ್ತೆ ಮುಖಾಮುಖಿ; ಮುನಿರತ್ನ ಕೈಹಿಡಿಯಲು ಬಂದರೆ ಡಿಕೆ ಶಿವಕುಮಾರ್ ಮಾಡಿದ್ದೇನು?
ಈ ಬಸ್ ಮಧ್ಯಪ್ರದೇಶದ ಇಂದೋರ್ ನಿಂದ ಪುಣೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಧಾರ್ ಜಿಲ್ಲೆಯ ಆಗ್ರಾ-ಮುಂಬೈ ಹೆದ್ದಾರಿಯಲ್ಲಿನ ಸೇತುವೆ ದಾಟುತ್ತಿದ್ದ ವೇಳೆ ಸ್ಕಿಡ್ ಆಗಿ ಸೇತುವೆಯಿಂದ ನರ್ಮದಾ ನದಿಗೆ ಬಿದ್ದಿರುವುದಾಗಿ ವರದಿ ವಿವರಿಸಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಡಳಿತ ಭೇಟಿ ನೀಡಿದೆ. ನದಿಗೆ ಬಿದ್ದ ಬಸ್ ಅನ್ನು ಮೇಲಕ್ಕೆತ್ತಲಾಗಿದೆ. ಅಪಘಾತ ಘಟನೆ ಕುರಿತು ಜಿಲ್ಲಾಡಳಿತದ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿರುವುದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ಟೀಟ್ ನಲ್ಲಿ ತಿಳಿಸಿದ್ದಾರೆ.
ಬಸ್ ನಲ್ಲಿ 40ರಿಂದ 50 ಮಂದಿ ಪ್ರಯಾಣಿಕರಿದ್ದು, 15ಕ್ಕೂ ಅಧಿಕ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಎನ್ ಡಿಆರ್ ಎಫ್ ತಂಡ ಬಸ್ ಅನ್ನು ಮೇಲಕ್ಕೆತ್ತಿರುವುದಾಗಿ ವರದಿ ತಿಳಿಸಿದೆ. ಧಾರ್ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.