Advertisement

13ಕ್ಕಿಳಿದ ಸಕ್ರಿಯ ಸೋಂಕಿತರು: ಕಿತ್ತಳೆ ವಲಯದತ್ತ ಮೈಸೂರು?

12:56 AM May 05, 2020 | Sriram |

ಮೈಸೂರು: ಕೋವಿಡ್‌-19 ವೈರಸ್‌ ಹಾಟ್‌ಸ್ಪಾಟ್‌ ಎಂದೇ ಕರೆಯಲಾಗುತ್ತಿದ್ದ ಜಿಲ್ಲೆಯಲ್ಲಿ ವಾರದಿಂದ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, ಕೆಲವೇ ದಿನಗಳಲ್ಲಿ ಮೈಸೂರು ಕೆಂಪು ವಲಯದಿಂದ ಕಿತ್ತಳೆ ವಲಯದತ್ತ ಮುಖ ಮಾಡುವ ಲಕ್ಷಣಗಳು ನಿಚ್ಚಳವಾಗಿವೆ.

Advertisement

ಆರಂಭದಲ್ಲಿ ನಂಜನಗೂಡು ತಾಲೂಕು ಜ್ಯುಬಿಲಿಯಂಟ್‌ ಕಾರ್ಖಾನೆ ಮತ್ತು ತಬ್ಲಿಘಿ ಜಮಾಅತ್‌ ಪ್ರಕರಣಗಳಿಂದ ಕೋವಿಡ್‌-19 ಹಾಟ್‌ಸ್ಪಾಟ್‌ ಆಗಿದ್ದ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಕೇವಲ 2 ಪ್ರಕರಣಗಳು ಮಾತ್ರ ವರದಿಯಾಗಿವೆ. ಈ ವರೆಗೆ 90 ಮಂದಿ ಸೋಂಕಿತರಲ್ಲಿ 79 ಮಂದಿ ಗುಣಮುಖರಾಗಿದ್ದು, 11 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಖ್ಯವಾಗಿ ಕೋವಿಡ್‌-19 ಸೋಂಕಿನೊಂದಿಗೆ ಇತರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ 72 ವರ್ಷದ ಸೋಂಕಿತ ವ್ಯಕ್ತಿಯೂ ಗುಣಮುಖರಾಗಿದ್ದಾರೆ. ಇನ್ನು ಮೂರ್‍ನಾಲ್ಕು ದಿನಗಳಲ್ಲಿ ಉಳಿದ ಸಕ್ರಿಯ ಸೋಂಕಿತರು ಗುಣಮುಖರಾಗಲಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಕೇವಲ 93 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 4,762 ಜನರ ಮೇಲೆ ನಿಗಾ ವಹಿಸಲಾಗಿದ್ದು ಅದರಲ್ಲಿ 4,658 ಮಂದಿ 14 ದಿನಗಳ ಐಸೊಲೇಶನ್‌ ಮುಗಿಸಿದ್ದಾರೆ. ಇವರಲ್ಲಿ 3,623 ಮಂದಿಗೆ ಮಾದರಿ ಪರೀಕ್ಷೆ ನಡೆಸಲಾಗಿದೆ. ಇನ್ನು 93 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದು ಅವರಿಗೆ ಮಾದರಿ ಪರೀಕ್ಷೆ ನಡೆಸಬೇಕಾಗಿದೆ.

ನಂಜನಗೂಡು ನಿರಾಳ
ಜ್ಯುಬಿಲಿಯಂಟ್‌ ಕಾರ್ಖಾನೆಯ ಸೋಂಕಿನಿಂದ ಸಾವಿರಕ್ಕೂ ಹೆಚ್ಚು ಮಂದಿ ಕ್ವಾರಂಟೈನ್‌ಗೆ ಒಳಗಾಗಿದ್ದ ನಂಜನಗೂಡು ಈಗ ಕ್ವಾರಂಟೈನ್‌ನ 14 ದಿನಗಳ ಅವಧಿ ಮುಗಿದಿದ್ದು, ಸೋಂಕಿನ ಪ್ರಕರಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಜನರು ನಿರಾಳರಾಗಿದ್ದಾರೆ.ಮುಂಜಾಗ್ರತೆ ಕ್ರಮವಾಗಿ ಪಟ್ಟಣದ ಕೆಲವು ಬಡಾವಣೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

3 ದಿನಗಳಲ್ಲಿ 250 ಟೆಸ್ಟಿಂಗ್‌ ಮುಗಿದಿದೆ. ಕೆಲವು ಗ್ರಾಮಗಳಿಂದಲೂ ಸ್ಯಾಂಪಲ್‌ಗ‌ಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಈಗಾಗಲೇ ಮೈಸೂರು ತಾಲೂಕಿನಲ್ಲಿ ಎಲ್ಲ ಪರೀಕ್ಷೆ ಮುಗಿದಿದೆ. ಜಿಲ್ಲೆಯಲ್ಲಿ ಕೋವಿಡ್‌-19 ನಿಯಂತ್ರಣಕ್ಕೆ ಬಂದಿದ್ದು, ಜಿಲ್ಲೆ ಕಿತ್ತಳೆ ವಲಯದತ್ತ ಮುಖಮಾಡಲಿದೆ. ಈ ಹಿಂದಿನಂತೆ ಎಚ್ಚರಿಕೆ ವಹಿಸುವುದು ಅಗತ್ಯ.
– ಅಭಿರಾಮ್‌ ಜಿ. ಶಂಕರ್‌,
ಜಿಲ್ಲಾಧಿಕಾರಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next