Advertisement
ಶೃತಿ ಸ್ಮತಿಗಳಾಗಿ ಭಾರತೀಯ ವಾಗ್ಮಿಯ ಬಹಳ ಹಿಂದೆಯೇ ಅಕ್ಷರ ರೂಪವನ್ನು ತಾಳಿತಷ್ಟೆ. ಅಂದಿನ ಬರಹಗಾರರು ಕಲ್ಲು ಗಿಡದ ತೊಗಟೆ ತಾಡವೋಲೆ ಮುಂತಾದ ಮಾಧ್ಯಮಗಳನ್ನು ಉಪಯೋಗಿಸುತ್ತಿ ದ್ದರು. ಹೀಗೆ ಕಾಲಾನುಕ್ರಮದಲ್ಲಿ ಗ್ರಂಥಗಳನ್ನು ಸಂಗ್ರಹಿಸುವ, ಕೂಡಿಸುವ, ಪ್ರತಿ ಮಾಡುವ ಕಾರ್ಯಗಳು ಅನೂಚಾನವಾಗಿ ಹಾಗೂ ಅವ್ಯಾಹತವಾಗಿ ನಡೆದು ಬಂದಿವೆ. ಆದರೆ ಗ್ರಂಥಾಲಯ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಓರಣಗೊಳಿಸಿದ ಕೀರ್ತಿ ಸಲ್ಲಬೇಕಾದದ್ದು ಅಗ್ರಗಣ್ಯರಾದ ಡಾ. ಎಸ್. ಆರ್. ರಂಗನಾಥನ್ ಅವರಿಗೆ. ಇವರ ಪೂರ್ಣ ಹೆಸರು ಶಿಯಾಳಿ ರಾಮಾಮೃತ ರಂಗನಾಥನ್.
Related Articles
Advertisement
ಡಾ. ಎಸ್. ಆರ್. ರಂಗನಾಥನ್ ಗ್ರಂಥಾಲಯ, ಗ್ರಂಥಾಲಯ ವಿಜ್ಞಾನವನ್ನು ಕುರಿತು 60ಕ್ಕೂ ಹೆಚ್ಚು ಮಹತ್ವದ ಗ್ರಂಥಗಳನ್ನು ಹಾಗೂ ಸುಮಾರು 2500 ಲೇಖನಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಗ್ರಂಥಾಲ ಯದ ಪಂಚ ಸೂತ್ರಗಳು, ರಾಮಾನುಜನ್-ದ ಮ್ಯಾನ್ ಆ್ಯಂಡ್ ಮೆತಮಟೀಷಿಯನ್, ಕ್ಲಾಸಿಫೈಡ್ ಕೆಟ್ಲಾಗ್,ಡಿಕ್ಷನರಿ ಕೆಟ್ಲಾಗ್, ಲೈಬ್ರರಿ ಅಡ್ಮಿನಿಸ್ಟ್ರೇಷನ್, ಇಂಡಿಯನ್ ಲೈಬ್ರರಿ ಮ್ಯಾನಿಫೆಸ್ಟೋ, ಲೈಬ್ರರಿ ಮ್ಯಾನುವಲ್ ಫಾರ್ ಲೈಬ್ರರಿ ಅಥಾರಿಟೀಸ್, ಲೈಬ್ರರಿ ಯನ್ಸ್ ಆ್ಯಂಡ್ ಲೈಬ್ರರಿ ವರ್ಕರ್ಸ್, ಕ್ಲಾಸಿಫಿಕೇಷನ್-ಕಮ್ಯುನಿಕೇಶನ್, ಕಂಪ್ಯಾರಿಟಿವ್ ಸ್ಟಡಿ ಆಫ್ ಫೈವ್ ಕ್ಯಾಟಲಾಗ್ಸ್ ಹೀಗೆ ಹತ್ತು ಹಲವಾರು ಗ್ರಂಥಗಳು ಅವರಿಗಿದ್ದ ಆಳವಾದ ವಿದ್ವತ್ತನ್ನು ಮತ್ತು ಅನುಭವನ್ನು ಎತ್ತಿ ತೋರಿಸುತ್ತವೆ.
ದೆಹಲಿ ವಿಶ್ವವಿದ್ಯಾಲಯ 1948 ಮತ್ತು ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯ 1964ರಲ್ಲಿ ಡಿ.ಲಿಟ್ ಪದವಿ ಯನ್ನು ಹಾಗೂ 1935ರಲ್ಲಿ ಬ್ರಿಟಿಷ್ ಸರಕಾರ ರಾವ್ ಸಾಹೇಬ್ ಬಿರುದು, ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದೆ. 1970ರಲ್ಲಿ ಅಮೆರಿಕದ ಮಾರ್ಗರೇಟ್ ಮಾನ್ ಪಾರಿತೋಷಕವನ್ನು ಪಡೆದ ಪ್ರಥಮ ಭಾರತೀಯರಿವರು. ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬೆಳೆಯುವುದಕ್ಕೆ ಡಾ. ಎಸ್. ಆರ್. ರಂಗ ನಾಥನ್‌ರೇ ಪ್ರಮುಖ ಕಾರಣ. ಕರ್ನಾಟಕದಲ್ಲಿ ಸಾರ್ವ ಜನಿಕ ಗ್ರಂಥಾಲಯ ಕಾನೂನು 1965ರಲ್ಲಿ ಸರಕಾರದಿಂದ ಸ್ವೀಕೃತವಾಗಿ 1966ರಲ್ಲಿ ಕಾರ್ಯ ರೂಪಕ್ಕೆ ತರುವಲ್ಲಿ ಅವರೇ ಮೂಲ ಪುರುಷರು. ಅವರ ಅದ್ವಿತೀಯ ಸೇವೆಯನ್ನು ಪರಿಗಣಿಸಿ ಸರ್ಕಾ ರವು 2007ರಿಂದ ಅವರ ಹುಟ್ಟು ಹಬ್ಬದ ದಿನವಾದ ಅಗಸ್ಟ 12ರಂದು ಗ್ರಂಥಪಾಲಕರ ದಿನಾಚರಣೆ ಯಾಗಿ ಆಚರಿಸಬೇಕೆಂದು ಆದೇಶ ಹೊರಡಿಸಿದೆ.
ಗ್ರಂಥಾಲಯ ಸೇವೆಯಲ್ಲಿರುವವರಿಗೆ ಡಾ. ಎಸ್. ಆರ್. ರಂಗನಾಥನ್‌ರ ಸಂದೇಶಗಳು ಮಾರ್ಗದರ್ಶಕ ವಾಗಿ ನೆಲೆನಿಂತಿವೆ. ಅವರು ನೀಡಿದ ಗ್ರಂಥಾಲಯ ಪಂಚಸೂತ್ರಗಳು 1. ಗ್ರಂಥ ಓದಲು 2. ಗ್ರಂಥ ಕ್ಕೊಬ್ಬರು 3. ಎಲ್ಲರಿಗೂ ಗ್ರಂಥಗಳು 4. ಓದುಗರ ಸಮಯವನ್ನು ಉಳಿಸಿರಿ 5. ಗ್ರಂಥಾಲಯ ಬೆಳೆ ಯುವ ಶಿಶು ಗ್ರಂಥಪಾಲಕರಿಗೆ ದಾರಿದೀಪವಾಗಿವೆ. ಡಾ. ಎಸ್. ಆರ್. ರಂಗನಾಥ್ ಹಾಕಿಕೊಟ್ಟ ಹಾದಿ ಯಲ್ಲಿ ಪ್ರತಿಯೊಬ್ಬ ಗ್ರಂಥಪಾಲಕರೂ ನಡೆಯುತ್ತಾ ಬರುತ್ತಿರುವುದು ಶ್ಲಾಘನೀಯ.
ವೀರಣ್ಣ ಭ ಬಬ್ಲಿ