Advertisement
ಒಂದೇ ದಿನ ರಾಜ್ಯಾದ್ಯಂತ 1267 ಪ್ರಕರಣಗಳು ವರದಿಯಾಗಿದೆ.
Related Articles
Advertisement
ಈ ಮೂಲಕ ರಾಜ್ಯದಲ್ಲಿ ಇಂದಿನವರೆಗೆ 13190 ಕೋವಿಡ್ 19 ಸೋಂಕು ಪ್ರಕರಣಗಳು ದಾಖಲುಗೊಂಡಿದೆ. ಮತ್ತು ಇವರಲ್ಲಿ 7507 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೂ 5472 ಸಕ್ರಿಯ ಪ್ರಕರಣಗಳಿವೆ.
ರಾಜ್ಯದಲ್ಲಿ ಒಟ್ಟಾರೆಯಾಗಿ ಇದುವರೆಗೆ 207 ಜನ ಕೋವಿಡ್ 19 ಸೋಂಕಿನ ಕಾರಣದಿಂದ ಮೃತಪಟ್ಟಿದ್ದಾರೆ. ಹಾಗೂ 4 ಜನ ಕೋವಿಡ್ 19 ಸೋಂಕಿತರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. 243 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಇಂದೂ ಸಹ ಬೆಂಗಳೂರು ನಗರ ಜಿಲ್ಲೆಯಲ್ಲೇ ಅತೀ ಹೆಚ್ಚಿನ ಕೋವಿಡ್ 19 ಸೋಂಕಿತರು ಪತ್ತೆಯಾಗಿದ್ದಾರೆ. ಇಲ್ಲಿ ಇಂದು 783 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ದಕ್ಷಿಣ ಕನ್ನಡ – 97, ಬಳ್ಳಾರಿ – 71, ಉಡುಪಿ – 40, ಕಲಬುರಗಿ – 34, ಹಾಸನ – 31, ಗದಗ – 30, ಬೆಂಗಳೂರು ಗ್ರಾಮಾಂತರ – 27, ಧಾರವಾಡ – 18, ಮೈಸೂರು – 18, ಬಾಗಲಕೋಟೆ – 17, ಉತ್ತರ ಕನ್ನಡ – 14, ಹಾವೇರಿ – 12 ಮತ್ತು ಕೋಲಾರ – 11 ಇವು ಇಂದು ಎರಡಂಕೆಯ ಕೋವಿಡ್ ಸೋಂಕಿತರು ಪತ್ತೆಯಾಗಿರುವ ಜಿಲ್ಲೆಗಳಾಗಿವೆ.
ರಾಜ್ಯದಲ್ಲಿ ಅತೀ ಹೆಚ್ಚಿನ ಕೋವಿಡ್ ಸೋಂಕಿತರೂ ಸಹ ಬೆಂಗಳೂರು ನಗರ ಜಿಲ್ಲೆಯಲ್ಲಿದ್ದಾರೆ. ಇಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 3314ಕ್ಕೆ ಏರಿಕೆಯಾಗಿದ್ದು, 533 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಹಾಗೂ 2692 ಸಕ್ರಿಯ ಪ್ರಕರಣಗಳಿವೆ. ಇಲ್ಲಿ ಕೋವಿಡ್ ಸಂಬಂಧಿತ 88 ಸಾವುಗಳು ಸಂಭವಿಸಿದೆ.
ರಾಜ್ಯಕ್ಕೆ ಇಂದು ಕೆನಡಾದಿಂದ ಎರಡು ವಿಮಾನಗಳು ಬಂದಿಳಿದಿದ್ದು ಇವೆರಡರಲ್ಲಿ ಕ್ರಮವಾಗಿ 107 ಮತ್ತು 106 ಪ್ರಯಾಣಿಕರು ಆಗಮಿಸಿದ್ದಾರೆ. ಶ್ರೀಲಂಕಾದಿಂದ ಬಂದಿದ್ದ ವಿನಾನದಲ್ಲಿ 56 ಪ್ರಯಾಣಿಕರು ಆಗಮಿಸಿದ್ದಾರೆ ಹಾಗೂ ಸ್ಯಾನ್ ಫ್ರ್ಯಾನ್ಸಿಸ್ಕೋದಿಂದ ಬಂದ ವಿಮಾನದಲ್ಲಿ 96 ಪ್ರಯಾಣಿಕರು ಬಂದಿದ್ದು ಒಟ್ಟು 365 ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗಿದೆ. ಈ ಮೂಲಕ ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಇದುವರೆಗೆ ಒಟ್ಟಾರೆ 152240 ಪ್ರಯಾಣಿಕರನ್ನು ತಪಾಸಣೆಗೊಳಿಸಲಾಗಿದೆ. ಇಂದು ಒಂದೇ ದಿನ 13835 ಕೋವಿಡ್ 19 ಸಂಬಂಧಿತ ತಪಾಸಣೆಯನ್ನು ನಡೆಸಲಾಗಿದೆ.