Advertisement

ಕೋವಿಡ್ : ರಾಜ್ಯದಲ್ಲಿಂದು 1259 ಪಾಸಿಟಿವ್ ಪ್ರಕರಣ|1701 ಸೋಂಕಿತರು ಗುಣಮುಖ

06:55 PM Aug 24, 2021 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿಂದು ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಜಾಸ್ತಿ ಇದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ  ಹೊಸದಾಗಿ 1259 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಹಾಗೂ 29 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ವರದಿಗಳ ಪ್ರಕಾರ 1701 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2884032ಕ್ಕೆ ತಲುಪಿದೆ.

ಇನ್ನು ರಾಜ್ಯದಲ್ಲಿಂದು ಸಕ್ರಿಯ ಪ್ರಕರಗಳ ಸಂಖ್ಯೆ 19784 ಇದೆ. ಪಾಸಿವಿಟಿವಿ ದರ 0.65 % ಇದ್ದು ಡೆತ್ ರೇಟ್ 2.30 % ಇದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-3, ಬಳ್ಳಾರಿ-1,ಬೆಳಗಾವಿ-14, ಬೆಂಗಳೂರು ಗ್ರಾಮಾಂತರ-13, ಬೆಂಗಳೂರು ನಗರ-295, ಬೀದರ್-0, ಚಾಮರಾಜನಗರ-7, ಚಿಕ್ಕಬಳ್ಳಾಪುರ-3, ಚಿಕ್ಕಮಗಳೂರು-49, ಚಿತ್ರದುರ್ಗ-23, ದಕ್ಷಿಣ ಕನ್ನಡ-273, ದಾವಣಗೆರೆ-30, ಧಾರವಾಡ-3, ಗದಗ-1, ಹಾಸನ-69, ಹಾವೇರಿ-1, ಕಲಬುರಗಿ-12, ಕೊಡಗು-38, ಕೋಲಾರ-7, ಕೊಪ್ಪಳ-7, ಮಂಡ್ಯ-20, ಮೈಸೂರು-102, ರಾಯಚೂರು-4, ರಾಮನಗರ-1, ಶಿವಮೊಗ್ಗ-59, ತುಮಕೂರು-43, ಉಡುಪಿ-128, ಉತ್ತರ ಕನ್ನಡ-51, ವಿಜಯಪುರ-1, ಯಾದಗಿರಿ-1.

Advertisement
Advertisement

Udayavani is now on Telegram. Click here to join our channel and stay updated with the latest news.

Next