Advertisement
ಏ. 24ರಿಂದ ಆಸ್ತಿ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ದಿನ ಕೇವಲ 10 ಲಕ್ಷ ರೂ. ಶುಲ್ಕ ಸಂಗ್ರಹವಾಗಿತ್ತು. ಮಂಗಳವಾರ ಕೂಡ ಒಂದು ಕೋಟಿ ರೂ. ಶುಲ್ಕ ಸಂಗ್ರಹವಾಗಿತ್ತು. ಬುಧವಾರ ರಾಜ್ಯಾದ್ಯಂತ 1242 ಆಸ್ತಿ ನೋಂದಣಿಯಾಗಿದ್ದು, ಒಟ್ಟು 3.92 ಕೋಟಿ ರೂ. ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಆಸ್ತಿ ನೋಂದಣಿ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಮುದ್ರಾಂಕ ಮತ್ತು ನೋಂದಣಿ ಇಲಾಖೆ ಮೂಲಗಳು ತಿಳಿಸಿವೆ. ಸಾಮಾನ್ಯ ಸಂದರ್ಭದಲ್ಲಿ ಮಾಸಿಕ ಸುಮಾರು 1000 ಕೋಟಿ ರೂ.ನಷ್ಟು ಮುಂದ್ರಾಂಕ ಮತ್ತು ನೋಂದಣಿ ಶುಲ್ಕ ಸಂಗ್ರಹವಾಗುತ್ತಿತ್ತು. ನಿತ್ಯ 7000ಕ್ಕೂ ಹೆಚ್ಚು ಆಸ್ತಿ ನೋಂದಣಿ ಮೂಲಕ 30ರಿಂದ 40 ಕೋಟಿ ರೂ. ಶುಲ್ಕ ಸಂಗ್ರಹವಾಗುತ್ತಿತ್ತು. ಲಾಕ್ ಡೌನ್ ಜಾರಿಯಲ್ಲಿರುವುದರಿಂದ ನೋಂದಣಿ ಕಡಿಮೆಇದೆ. ಬೆಂಗಳೂರಿನಲ್ಲೂ ಆಸ್ತಿ ನೋಂದಣಿ ಕಡಿಮೆ ಇದೆ ಎಂದು ತಿಳಿಸಿವೆ.