ಶಿಗ್ಗಾವಿ: ಸ್ಥಳೀಯ ಸಂಸ್ಥೆ ಪುರಸಭೆ ಚುನಾವಣೆಗೆ ಸಂಬಂಧಿಸಿದಂತೆ 23 ಸದಸ್ಯ ಬಲದ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆ ದಿನವಾಗಿದ್ದರಿಂದ ಒಟ್ಟು 161 ನಾಮಪತ್ರ ಸಲ್ಲಿಕೆಯಾಗಿವೆ.
1ನೇ ವಾರ್ಡ್ ಹಿಂದುಳಿದ ವರ್ಗ-ಎ ಮಹಿಳೆ ಸ್ಥಾನಕ್ಕೆ 6, 2ನೇ ವಾರ್ಡ್ ಹಿಂದುಳಿದ ವರ್ಗದ ಎ ಮಹಿಳೆ 3, 3ನೇ ವಾರ್ಡ್ ಸಾಮಾನ್ಯ ಮಹಿಳೆ 6, 4ನೇ ವಾರ್ಡ್ ಸಾಮಾನ್ಯ ಕ್ಷೇತ್ರಕ್ಕೆ 11, 5ನೇ ವಾರ್ಡ್ ಹಿಂದುಳಿದ ವರ್ಗ-ಎ ಮಹಿಳೆ ಸ್ಥಾನಕ್ಕೆ 9, 6ನೇ ವಾರ್ಡ್ ಸಾಮಾನ್ಯ ಮಹಿಳೆ ಕ್ಷೇತ್ರಕ್ಕೆ 3 ನಾಮಪತ್ರ ಸಲ್ಲಿಕೆಯಾಗಿವೆ.
7ನೇ ವಾರ್ಡ್ ಹಿಂದುಳಿದ ವರ್ಗ-ಬಿ ವಾರ್ಡ್ ಮೀಸಲಾತಿಗೆ 13, 8ನೇ ವಾರ್ಡ್ ಸಾಮಾನ್ಯ 3, 9ನೇ ವಾರ್ಡ್ ಸಾಮಾನ್ಯಕ್ಕೆ 11, 10ನೇ ವಾರ್ಡ್ ಸಾಮಾನ್ಯ ಮಹಿಳೆ ಸ್ಥಾನಕ್ಕೆ 4, 11ನೇ ವಾರ್ಡ್ ಸಾಮಾನ್ಯ ಮಹಿಳೆ ಕ್ಷೇತ್ರಕ್ಕೆ 3, 12ನೇ ವಾರ್ಡ್ ಪರಿಶಿಷ್ಟ ಜಾತಿ ಸ್ಥಾನಕ್ಕೆ 9, 13ನೇ ವಾರ್ಡ್ ಸಾಮಾನ್ಯ ಮಹಿಳೆ ಸ್ಥಾನಕ್ಕೆ 7, 14ನೇ ವಾರ್ಡ್ ಹಿಂದುಳಿದ ವರ್ಗ-ಎ 6, 15ನೇ ವಾರ್ಡ್ ಹಿಂದುಳಿದ ವರ್ಗ ಎ ಕ್ಷೇತ್ರಕ್ಕೆ 4, 16ನೇ ವಾರ್ಡ್ ಹಿಂದುಳಿದ ವರ್ಗ ಬ ಮಹಿಳೆ 7, 17ನೇ ವಾರ್ಡ್ ಹಿಂದುಳಿದ ವರ್ಗ-ಎ 5, 18ನೇ ವಾರ್ಡ್ ಸಾಮಾನ್ಯಕ್ಕೆ 7, 19ನೇ ವಾರ್ಡ್ ಸಾಮಾನ್ಯ ಮಹಿಳೆ ಮೀಸಲಾತಿ ಕ್ಷೇತ್ರಕ್ಕೆ 7, 20ನೇ ವಾರ್ಡ್ ಪರಿಶಿಷ್ಟ ಜಾತಿ ಮಹಿಳೆ ಕ್ಷೇತ್ರಕ್ಕೆ 9, 21ನೇ ವಾರ್ಡ್ ಸಾಮಾನ್ಯ ಕ್ಷೇತ್ರಕ್ಕೆ 10, 22ನೇ ವಾರ್ಡ್ ಸಾಮಾನ್ಯ ಕ್ಷೇತ್ರಕ್ಕೆ 10 ಹಾಗೂ 23ನೇ ವಾರ್ಡ್ ಪರಿಶಿಷ್ಟ ಪಂಗಡ ಮೀಸಲಾತಿ ಕ್ಷೇತ್ರಕ್ಕೆ 8 ನಾಮಪತ್ರಗಳು ಸ್ವೀಕೃತಿಯಾಗಿವೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಟ್ಟು 23 ವಾರ್ಡ್‌ಗಳ ಮೀಸಲಾತಿಗಳಿಗೆ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳೂ ಸೇರಿದಂತೆ 161 ನಾಮಪತ್ರ ಸಲ್ಲಿಕೆಯಾಗಿವೆ.